ರೋಣ: ಗಜೇಂದ್ರಗಡ ತಹಶೀಲ್ದಾರ್ ತೋರಿದ ಪತ್ರಿಕಾ ಪ್ರತಿನಿಧಿ ಮೇಲೆ ತೋರಿದ ದರ್ಪ ಖಂಡಿಸಿ ರೋಣ ತಾಲೂಕ ಕಾರ್ಯ ನಿರತ ಪತ್ರಕರ್ತ ಸಂಘದಿಂದ ಮನವಿ ಸಲ್ಲಿಸಲಾಯಿತು.

ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಸುದ್ದಿ ಮಾಡಲು ಹೋದ ವರದಿಗಾರನ ಮೇಲೆ ಗಜೇಂದ್ರಗಡ ದಂಡಾಧಿಕಾರಿ ಅಶೋಕ ಕಲಘಟಗಿ ಅವರು ಅಧಿಕಾರದ ಮದದಲ್ಲಿ ಅಹಂಕಾರದಿಂದ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆ ಎಂದು ಅವಾಜ್ ಹಾಕಿರುವ ಘಟನೆ ಗುರುವಾರ ನಡೆದಿದೆ. ಪತ್ರಿಕಾ ಸ್ವಾತಂತ್ರ ಕಿತ್ತು ಕೊಳ್ಳುತ್ತಿರುವ ಇಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ರೋಣ ತಹಸೀಲ್ದಾರರ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಅಶೋಕ ಕಲಘಟಗಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸದೇ ಹೋದರೆ ಮುಂದಿನ ದಿನಮಾನಗಳಲ್ಲಿ ಜಿಲ್ಲಾದ್ಯಾಂತ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರೋಣ ಕಾರ್ಯನಿರತ ಪತ್ರ ಕರ್ತರಾದ ಯಚ್ಚರಗೌಡ ಗೋವಿಂದಗೌಡರ, ಯಲ್ಲಪ್ಪ ತಳವಾರ, ಕೆ.ಡಿ. ಇಟಗಿ, ಚಂದ್ರು ನೆಲ್ಲೂರ, ಎಮ್.ಎಚ್.ಮೊತೆಖಾನ್, ಸೋಮಶೇಖರ್ ಲದ್ದಿಮಠ, ಪಿ.ಎಸ್.ಪಾಟೀಲ, ಪ್ರಕಾಶ ಗುದ್ನೇಪ್ಪನವರ, ಗಂಗಾಧರ ಕಿರೇಸೂರ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಕೊರೋನಾ ಸೋಂಕು ಹರಡಿದ್ದು ಎಷ್ಟು ಜನರಿಂದ ಗೊತ್ತಾ?

ಈಗಾಗಲೇ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿಲಿದ್ದು ಸೋಂಕಿತರ ಸಂಖ್ಯೆ 700 ಗಡಿ ದಾಟಿದೆ. ಆದರೆ ಇಷ್ಟೊಂದು ಸೋಂಕಿತರ ಸಂಖ್ಯೆ ಹೆಚ್ಚಾಗಲು ಎಷ್ಟು ಜನ ಕಾರಣ ಻ನ್ನೋದು ಮಾತ್ರ ಕುತೂಹಲ.

ನಾಳೆಯಿಂದ ನೀಲಗುಂದ ಗ್ರಾಮದಲ್ಲಿ ಮಹಾಶಿವರಾತ್ರಿ ಉತ್ಸವ

ಐತಿಹಾಸಿಕ, ಆಧ್ಯಾತ್ಮ ನೆಲೆಬೀಡು ನೀಲಗುಂದ ಗ್ರಾಮದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ನಿಂದ ಮಾ.9 ರಿಂದ 11 ವರಗೆ ಮಹಾಶಿವರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.

ಕೋವಿಡ್ ರೂಪಾಂತರಿ ಸೋಂಕಿನ ಬಗ್ಗೆ ಸಚಿವ ಸುಧಾಕರ್ ನೀಡಿದ ಮಾಹಿತಿ

ಬೆಂಗಳೂರು: ಕೋವಿಡ್‌ ರೂಪಾಂತರಿ ಸೋಂಕಿಗೆ ಇದು ಶೇ.70 ರಷ್ಟು ಹರಡುವ ಗುಣವಿದೆ. ಆದರೆ ಈ ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಿದ್ದರೂ ಇದನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುದಾಕರ್‌ ತಿಳಿಸಿದರು.