ಬೆಂಗಳೂರು: ಕೋವಿಡ್‌ ರೂಪಾಂತರಿ ಸೋಂಕಿಗೆ ಇದು ಶೇ.70 ರಷ್ಟು ಹರಡುವ ಗುಣವಿದೆ. ಆದರೆ ಈ ಸೋಂಕಿನ ತೀವ್ರತೆ ಕಡಿಮೆ ಇದೆ. ಹೀಗಿದ್ದರೂ ಇದನ್ನು ನಿಯಂತ್ರಣಕ್ಕೆ ತರಲು ಆದ್ಯತೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುದಾಕರ್‌ ತಿಳಿಸಿದರು.

ಅವರು ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿ, ದೇಶದಲ್ಲಿ ಯುಕೆಯಿಂದ ಹಿಂತಿರುಗಿದ ಪ್ರಯಾಣಿಕರ ಪೈಕಿ ಒಟ್ಟು 107 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಈ ಪೈಕಿ 20 ಜನರಲ್ಲಿ ರೂಪಾಂತರಿ ಸೋಂಕು ಕಾಣಿಸಿಕೊಂಡಿದೆ. ದೆಹಲಿಯಲ್ಲಿ 8 ಹಾಗೂ ಕರ್ನಾಟಕದಲ್ಲಿ ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಈ ಏಳು ಮಂದಿಯ ಪೈಕಿ ಮೂವರು ಬಿಬಿಎಂಪಿ ವ್ಯಾಪ್ತಿ ನಿವಾಸಿಗಳು ಹಾಗೂ ನಾಲ್ವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಏಳು ಜನರಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬ್ರಿಟನ್‌ ನಲ್ಲಿ ಕಾಣಿಸಿಕೊಂಡಿರುವ ಕೋವಿಡ್‌ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ ದೇಶದಲ್ಲಿ ಒಟ್ಟು ಶೇ.20 ರಷ್ಟಿವೆ. ಇದರಲ್ಲಿ 7 ಪ್ರಕರಣಗಳು ರಾಜ್ಯದಲ್ಲಿ ದೃಢಪಟ್ಟಿವೆ. ಇನ್ನು ಇವರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.  

ಬೆಂಗಳೂರಿನಲ್ಲಿ 39 ಜನರನ್ನು ತಪಾಸಣೆ ಮಾಡಲಾಗಿದೆ. ಆದರೆ ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಶಿವಮೊಗ್ಗ ಕೋವಿಡ್‌ ರೂಪಾಂತರಿ ಸೋಂಕು ತಗುಲಿದವರ ಜೊತೆಗೆ ಸಂಪರ್ಕದಲ್ಲಿದ್ದ ಒಟ್ಟು 7 ಜನರ ಪೈಕಿ ಮತ್ತೆ ಮೂವರಿಗೆ ಕೋವಿಡ್‌ ಪಾಸಿಟಿವ್ ಇದೆ. ಆದರೆ ಈ ಮೂವರಿಗೆ ಕೋವಿಡ್‌ ರೂಪಾಂತರಿ ಸೋಂಕು ಇದೆಯಾ? ಎಂದು ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಇನ್ನು ಕೋವಿಡ್‌ ರೂಪಾಂತರಿ ಸೋಂಕಿಗೆ ತುತ್ತಾಗಿರುವವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುತ್ತಿದೆ. ಈ ವಿಚಾರವಾಗಿ ಈ ವೈರಾಣುಗೆ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಕಡ್ಡಾಯವಾಗಿ ಎಲ್ಲರು ಪಾಲನೆ ಮಾಡಬೇಕು ಎಂದು ಸುಧಾಕರ್‌ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

You May Also Like

ನಗರ ಸಭೆ ಚುನಾವಣೆ: 32ನೇ ವಾರ್ಡ ಬಿಜೆಪಿ ಪಾಲಿಗೆ

ನಗರ ಸಭೆ ಚುನಾವಣೆ: 32ನೇ ವಾರ್ಡ ಬಿಜೆಪಿ ಪಾಲಿಗೆ ಗದಗ ಬೇಟಗೇರಿ:ನಗರ ಸಭೆ 31ನೇ ವಾರ್ಡನ…

ಗದಗ ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿ ಸಾವಿನ ಸಂಖ್ಯೆ 3 ಕ್ಕೆ ಏರಿಕೆ!

ಗದಗ: ಜಿಲ್ಲೆಯಲ್ಲಿಂದು‌ ಕೊರೊನಾ ಸೋಂಕಿಗೆ 95 ವರ್ಷದ ವೃದ್ಧೆ ಬಲಿಯಾಗಿದ್ದಾಳೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ…