ಮುಳಗುಂದ : ಐತಿಹಾಸಿಕ, ಆಧ್ಯಾತ್ಮ ನೆಲೆಬೀಡು ನೀಲಗುಂದ ಗ್ರಾಮದ ಗುದ್ನೇಶ್ವರಮಠದ ದಿವ್ಯ ಚೇತನ ಟ್ರಸ್ಟ್ನಿಂದ ಮಾ.9 ರಿಂದ 11 ವರಗೆ ಮಹಾಶಿವರಾತ್ರಿ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಹೇಳಿದರು.

ಮಾ.9 ರಂದು ಬೆಳಗ್ಗೆ 8.30ಕ್ಕೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಂಜೆ 6.30ಕ್ಕೆ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಗದಗ ಓಂಕಾರೇಶ್ವರ ಹಿರೇಮಠದ ಪಕ್ಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಸಂಸದ ಶಿವಕುಮಾರ ಉದಾಸಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿಡಿಪಿಐ ಜಿ.ಎಂ.ಬಸಲಿಂಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರೆಡ್ಡೇರ, ತಹಶಿಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಗಿರೀಶ ಡಬಾಲಿ, ವಿಜಯ ನೀಲಗುಂದ, ವಿಜಯ ಬಂಗಾರಿ, ಹನುಮಂತಪ್ಪ ಪೂಜಾರ, ಚಿಂಚಲಿ ಗ್ರಾ.ಪಂ ಅಧ್ಯಕ್ಷೆ ನಿರ್ಮಲಾ ಫ. ನೀಲಣ್ಣವರ, ಉಪಾಧ್ಯಕ್ಷ ರೂಪಾ ಎನ್. ಕುರಬರ ಮುಂತಾದವರು ಅಥಿತಿಗಳಾಗಿ ಆಗಮಿಸಲಿದ್ದಾರೆ.

ಮಾ.10 ರಂದು ಬೆಳಗ್ಗೆ 10ಕ್ಕೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಅಂಗವಿಕಲ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಶಣೆ ಶಿಬಿರ, ಆದಿಲಕ್ಷ್ಮೀ ಮೂರ್ತಿ ಪ್ರದರ್ಶನ ಮಹಿಳೆಯರಿಂದ ಉಡಿತುಂಬುವ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಸಂತವಾಣಿಯಲ್ಲಿ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಫಕೀರಶಿದ್ದರಾಮ ಸ್ವಾಮೀಜಿ, ಅಣ್ಣಿಗೇರಿ ದಾಸೋಹಮಠದ ಶಿವಕುಮಾರ ಸ್ವಾಮೀಜಿ, ಹಾಗೂ ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಾನಿಧ್ಯ ವಹಿಸುವರು. ಮಾಜಿ ಶಾಸಕ ಡಿ.ಆರ್.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಸುವರು. ನವಲಗುಂದ ಶಾಸಕ ಶಂಕರ ಪಾಟೀಲ ಮಾನೇಕೋಪ್ಪ, ಮಲ್ಲಕಂಬ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷ ಎಸ್.ಎಫ್ ಕೊಡ್ಲಿ, ತಾ.ಪಂ.ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಪಿ.ಕೆ.ಮಲ್ಲಿಕಾರ್ಜುನ, ದೇವರಾಜ ಹಿರೇಮಠ, ಎಚ್.ಎಸ್.ಜಿನಗಿ ತಾ.ಪಂ ಇಒ ಬಸವರಾಜ ಬಳ್ಳಾರಿ, ಶಂಕ್ರಪ್ಪನವರ ಅದರಗುಂಚಿ, ರಾಮಣ್ಣಾ ಕಮಾಜಿ, ದ್ಯಾಮಣ್ಣಾ ನೀಲಗುಂದ, ಚನ್ನಪ್ಪಗೌಡ್ರ ಮರಲಿಂಗಪ್ಪನವರ, ಶ್ಯಾಮಸುಂದರ ಡಂಬಳ, ಸಿ.ಜಿ.ಬಿರಾದಾರ ಮುಂತಾದವರು ಅಥಿತಿಗಳಾಗಿ ಆಗಮಿಸಲಿದ್ದಾರೆ. ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲಾ ಮಕ್ಕಳಿಂದ ಮಲ್ಲಕಂಬ ಯೋಗ ಪ್ರದರ್ಶನ ಜರುಗಲಿದೆ.

ಮಾ.11 ರಂದು ಸಂಜೆ 6-30ಕ್ಕೆ ಮಾಹಾ ಶಿವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಮುರುಘಾಮಠ ಧಾರವಾಡದ ಮಲ್ಲಿಕಾರ್ಜುನ ಸ್ವಾಮೀಜಿ, ಹೊಸಳ್ಳಿ ಬೂದೀಶ್ವರಮಠದ ಬೂದೀಶ್ವರ ಸ್ವಾಮೀಜಿ, ತೀರ್ಥ ಕಜ್ನೂರದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಸಾನಿಧ್ಯ ವಹಿಸುವರು. ಶಾಸಕ ಎಚ್.ಕೆ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗದಗ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಎಪಿಎಂಸಿ ಸದಸ್ಯ ಅಪ್ಪಣ್ಣನವರ ಇನಾಮತಿ, ಆರ್.ಎನ್.ದೇಶಪಾಂಡೆ, ಎಚ್.ಎಂ.ಶಿದ್ಲಿಂಗಯ್ಯ, ಎಂ.ಡಿ.ಬಟ್ಟೂರ, ಸುರಜ ಅಳಉಂಡಿ, ರಾಘವೇಂದ್ರರಡ್ಡಿ ಹುಲಕೋಟಿ, ಎಸ್.ಎಫ್.ಹುಲ್ಲೂರ, ವೆಂಕಟೇಶ ಮಾಡಳ್ಳಿ ಮುಂತಾದವರು ಅಥಿತಿಗಳಾಗಿ ಆಗಮಿಸುವರು.

ನಂತರ ಶಾಲಾ ಮಕ್ಕಳಿಂದ ಯೋಗ ಪ್ರದರ್ಶನ ನೆಡೆಯಲಿದೆ. ಇದೇ ಸಂದರ್ಭದಲ್ಲಿ ಟ್ರಸ್ಟನಿಂದ ಕೊಡಮಾಡುವ ದಿವ್ಯ ಚೇತನ ಪ್ರಶಸ್ತಿಯನ್ನು ನೀಲಗುಂದ ಗ್ರಾಮದವರೆ ಆದ ಐಎಎಸ್ ಅಧಿಕಾರಿ ಅರವಿಂದ ಎಂ.ಬಂಗಾರಿ ಹಾಗೂ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ ಅವರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ.

ನಂತರ ಶಿವರಾತ್ರಿ ಜಾಗರಣೆಯಲ್ಲಿ ಉತ್ತಮ ಹಿಂದೂಸ್ತಾನಿ ಗಾಯಕಿ ಪಲಾಸ್ ಪ್ರಿಯದಾಸ್(ವೆಸ್ಟ್ ಬಂಗಾಲ), ಬೆಂಗಳೂರ ಗಾನಯೋಗಿ ಮೂಜಿಕ್ ಅಕಾಡಮಿಯ ಶಿದ್ದಲಿಂಗೇಶ ಉಜ್ಜಣ್ಣವರ, ಉಮೇಶ ವಿಶ್ವಕರ್ಮ, ಸ್ಪೂರ್ತಿ.ಪಿ, ಲಕ್ಷ್ಮಿನಾರಾಯಣ ಅವರಿಂದ ಸಂಗೀತ ಹಾಗೂ ನೀಲಗುಂದ ಬಸವರಾಜ ನಾಯ್ಕರ್ ಅವರಿಂದ ಜಾನಪದ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ಪ್ರಭುಲಿಂಗ ದೇವರು ತಿಳಿಸಿದರು.

Leave a Reply

Your email address will not be published. Required fields are marked *

You May Also Like

ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ ಆಯ್ಕೆ

ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ,…

ಚೀಟಿ ಎತ್ತುವ ಮೂಲಕ ಹುಡುಗನೊಂದಿಗೆ ಮದುವೆ

ನಾಲ್ವರು ಯುವಕರ ಜೊತೆ ಓಡಿಹೋಗಿದ್ದ ಹುಡುಗಿಯೊಬ್ಬಳು ಸಿಕ್ಕಿ ಬಿದ್ದ ವೇಳೆ ಯಾರೊಂದಿಗೆ ವಿವಾಹ ಮಾಡಿಸಬೇಕೆಂಬ ಗೊಂದಲಕ್ಕೆ ಸಿಲುಕಿದ ಗ್ರಾಮಸ್ಥರು ಅಂತಿಮವಾಗಿ ನಾಲ್ವರು ಯುವಕರ ಹೆಸರನ್ನು ಚೀಟಿ ಒಂದರಲ್ಲಿ ಬರೆದು ಲಾಟರಿ ಎತ್ತುವ ಮೂಲಕ ಅದರಲ್ಲಿದ್ದ ಹೆಸರಿನವನ ಮದುವೆ ಮಾಡಿಸಿದ್ದಾರೆ.

ಗಜೇಂದ್ರಗಡ : ಚಿಕ್ಕಪ್ಪನ ಅಂತ್ಯಕ್ರಿಯೆ ವೇಳೆ ಹೃದಯಾಘಾತದಿಂದ ಮಗ ಸಾವು

ಸ್ಮಶಾನದಲ್ಲಿ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಇನ್ನೇನು ಕೆಲ ಕ್ಷಣದಲ್ಲಿ ಅಂತ್ಯಕ್ರಿಯೇ ನಡೆಯಬೇಕಿತ್ತು. ಆದರೆ ಅಲ್ಲಿ ನಡೆದಿದ್ದೆ ಬೇರೆ. ವೃದ್ಧ ಅಡಿವೆಪ್ಪ ಮೇಟಿ ಸಾವಿನಿಂದ ಅಂತ್ಯಕ್ರಿಯೇಯ ತಯಾರಿ ನಡೆದಿತ್ತು. ಸ್ಮಶಾನದಲ್ಲಿ ಇನ್ನೇನು ಅಂತಿಮ ವಿಧಿವಿಧಾನಗಳು ನಡೆದಿದ್ದವು. ಆದರೆ ಆ ವೇಳೆ ಚಿಕ್ಕಪ್ಪನ ಅಂತ್ಯಕ್ರಿಯೇಗೆ ಬಂದಿದ್ದ ಮಗ ಹೃದಯಾಗಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಮೂಲಕ ಮೊದಲೇ ಶೋಕದಲ್ಲಿ ಮುಳಗಿದ ಕುಟುಂಬಕ್ಕೆ ಮತ್ತೊಂದು ಶೋಕ ಆವರಿಸಿದೆ.