ಬೆಂಗಳೂರು: ರಾಜ್ಯದಲ್ಲಿ ಕೇವಲ 13 ಜನರಿಂದ 498 ಜನರಿಗೆ ಕೊರೊನಾ ವೈರಸ್ ಹರಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇಂದು ಒಂದೇ ದಿನ ಬರೋಬ್ಬರಿ 45 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯಂತೆ ಮೇ. 7ರ ವರೆಗೆ ನಂಜನಗೂಡು ಔಷಧಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೋಂಕಿತ ವ್ಯಕ್ತಿಯೊಬ್ಬನಿಂದಲೇ ಸುಮಾರು 76 ಜನರಿಗೆ ವೈರಸ್ ಹರಡಿದೆ ಎಂದು ತಿಳಿದು ಬಂದಿದೆ.

ವಿಜಯಪುರದ 60 ವರ್ಷದ ಮಹಿಳೆಯಿಂದ 37 ಜನರಿಗೆ ಸೋಂಕು ಹರಡಿದೆ. ಬೆಳಗಾವಿ ಮೂಲದ 20 ವರ್ಷದ ಯುವಕನಿಂದ 36 ಜನರಿಗೆ ಸೋಂಕು ಹರಡಿದೆ. ಒಬ್ಬ ಸೋಂಕಿತ ವ್ಯಕ್ತಿಯಿಂದ ನೇರ ಹಾಗೂ ಪರೋಕ್ಷವಾಗಿ 48 ಮಂದಿಗಾದರೂ ಸೋಂಕು ತಗುಲಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊರೊನಾ ವಾರ್ ರೂಂ ಮತ್ತು ಸೋಂಕು ಪತ್ತೆ ತಂಡದ ಉಸ್ತವಾರಿ ವಹಿಸಿರುವ ಐಎಎಸ್ ಅಧಿಕಾರಿ ಮುನೀಶ್ ಮುದ್ಗಿಲ್ ಅವರು, ತಾವು ಇತರರಿಗೂ ವೈರಸ್ ಹರಡುತ್ತಿದ್ದೇವೆಂಬ ವಿಚಾರ ಸೋಂಕಿತ ವ್ಯಕ್ತಿಗಳಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ.

23 ವರ್ಷದ ಯುವಕನಲ್ಲಿ ಸೋಂಕು ದೃಢಪಟ್ಟಿದೆ. ಆದರೆ, ಆತನಲ್ಲಿ ವೈರಸ್ ಕುರಿತ ಯಾವುದೇ ಲಕ್ಷಣಗಳೂ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಆತನಿಗೆ ತಿಳಿಯದಂತೆಯೇ 20 ಜನರಿಗೆ ಸೋಂಕು ಹರಡಿದೆ. ಇನ್ನುಳಿದಂತೆ ಹಲವರು ವ್ಯಕ್ತಿಗಳಿಂದ ವ್ಯಾಪಕವಾಗಿ ವೈರಸ್ ಹರಡಿದೆ. ಕೇವಲ 13 ಜನರಿಂದ 498 ಜನರಲ್ಲಿ ವೈರಸ್ ಕಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಿಡುವೆನೆಂದರೂ ಬಿಡದಂತೆ ಕಾಡುತ್ತಿರುವ ಆಕೆ ಹೋಗಿದ್ದಾರೂ ಎಲ್ಲಿಗೆ..?

ಅದ್ಯಾಕೋ ಗೊತ್ತಿಲ್ಲ ನಾನು ಅವಳಿಗೆ ಫಿದಾ ಆಗಿಬಿಟ್ಟಿದ್ದೆ. ಕ್ಷಣವೂ ಬಿಟ್ಟಿರದಷ್ಟು ಗಾಢ ಪ್ರೀತಿ ಬೆಳೆದಿತ್ತು. ನಮ್ಮಿಬ್ಬರ ಪ್ರೀತಿಯ ಬೆಸುಗೆಗೆ ಮೂರು ವರ್ಷವಾಗಿತ್ತು. ನನ್ನ ಹೃದಯದ ಭಾಷೆ ಅವಳಿಗೆ ಗೊತ್ತು.

ಮುಂಡರಗಿ: ರಸ್ತೆಯ ತುಂಬ ನೀರೋ.. ನೀರು..!

ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಟರಗಿ ಪಟ್ಟಣದಲ್ಲಿ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿದೆ.

ವಿರೋಧದ ನಡುವೆಯೇ ಕೃಷಿ ಉತ್ಪನ್ನ ಮಾರುಕಟ್ಟೆ ವಿಧೇಯಕ ಅಂಗೀಕಾರ!

ಬೆಂಗಳೂರು : ವಿಪಕ್ಷಗಳ ವಿರೋಧದ ನಡುವೆಯೂ ವಿವಾದಿತ 2020ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ…

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?

ಗದಗ ಜಿಲ್ಲೆಯಲ್ಲಿಂದು ಸಿಕ್ಕ ಸಿಕ್ಕಲ್ಲಿ ಸೋಂಕಿನ ಸಂಚಾರ: ಯಾವ ಊರಲ್ಲಿ ಎಷ್ಟು?