ಬೆಂಗಳೂರು: ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿದ್ದಾರೆ. ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಗೆ ಇಂದು ಚಿರು ದಾಖಲಾಗಿದ್ದರು. ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ, ದಂಡಂ ದಶಗುಣಂ, ವರದ ನಾಯಕ, ಸಿಂಗ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಚಿರಂಜೀವಿ ಸರ್ಜಾ, 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ನಟ ಚಿರಂಜೀವಿ ಸರ್ಜಾ ಗುರುತಿಸಿಕೊಂಡಿದ್ದರು. ಕಳೆದ ವರ್ಷವಷ್ಟೆ ಕನ್ನಡ ಚಿತ್ರರಂಗದ ಸುಂದರ್ ರಾಜ್ ಮತ್ತು ಪ್ರಮಿಳಾ ಜೋಶಾಯ್ ಅವರ ಮಗಳನ್ನು ವಿವಾಹವಾಗಿದ್ದರು.

Leave a Reply

Your email address will not be published. Required fields are marked *

You May Also Like

ವರ್ಷಕ್ಕೆ ಒಬ್ಬ ಮನುಷ್ಯ 50 ಕಿಲೋ ಅಹಾರ ವ್ಯರ್ಥ ಮಾಡುತ್ತಾನೆ

ನವದೆಹಲಿ: ದೇಶದಲ್ಲಿ ಒಬ್ಬ ಮನುಷ್ಯ ಮಂದು ವಷ೵ಕ್ಕೆ 50 ಕಿಲೋ ಗ್ರಾಂ ಅಹಾರ ವ್ಯಥ೵ ಮಾಡುತ್ತಾನೆ…

ಪ್ರವಾಹ ಭೀತಿ: ಪ್ರವಾಹ ಪೀಡಿತ ಗ್ರಾಮಸ್ಥರು ಬೀಗರ ಮನೆಗೆ ಹೋಗಬೇಕಂತೆ..!

ಮಲಪ್ರಭ ನದಿಯ ಪ್ರವಾಹ ಪೀಡಿತ ಗ್ರಾಮಸ್ಥರು ತಮ್ಮ ಪರಿಚಿತರು ಅಥವಾ ಸಂಬಂಧಿಗಳ ಮನೆಗೆ ಹೋಗಿ ಆಶ್ರಯ ಪಡೆಯಲು ಸ್ವತ: ತಹಶೀಲ್ದಾರ್ ಆದೇಶ ನೀಡಿದ ಘಟನೆ ನಡೆದಿದೆ.

ಅಕ್ಕಿ ಕೊಡಿ ಎಂದಿದ್ದಕ್ಕೆ ಸತ್ತು ಹೋಗು ಎಂದ ಅಹಾರ ಸಚಿವ

ಪಡಿತರದಲ್ಲಿನ ಅಕ್ಕಿ ಕಡಿತಗೊಳಿಸಿರುವುದನ್ನು ಪ್ರಶ್ನಿಸಿದ್ದ ರೈತ ಸಂಘದ ಕಾರ್ಯಕರ್ತರೊಬ್ಬರಿಗೆ, ಆಹಾರ ಸಚಿವ ಉಮೇಶ್ ಕತ್ತಿ ಸತ್ತು ಹೋಗು ಎಂದು ಹೇಳಿ ಉಡಾಫೆತನ ವರ್ತಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ: ಸಿಎಂ ಹೇಳಿದ್ದೇನು?

ಬೆಂಗಳೂರು: ಸಿಎಂ ನೇತೃತ್ವದಲ್ಲಿ ಇಂದು ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ…