ಗದಗ: ಜನರಿಗೆ ಸಮಸ್ಯೆಗಳೇನೆ ಇರಲಿ ಪತ್ರಕರ್ತ ತಹಶೀಲ್ದಾರರ ಪರ್ಮಿಷನ್ ಇಲ್ಲದೇ ಚಿತ್ರಿಕರಿಸುವ ಹಾಗಿಲ್ಲ. ಜನ ಸಮಸ್ಯೆ ಹೇಳಿಕೊಂಡು ಬಂದಾಗಲೂ ಸಾರ್ವಜನಿಕ ಸರ್ಕಾರಿ ಕಚೇರಿಯಲ್ಲಿ ಪತ್ರಕರ್ತನಿಗೆ ಪ್ರವೇಶ ಇಲ್ವಂತೆ! ಇದು ಗದಗ ಜಿಲ್ಲೆ ಗಜೇಂದ್ರಗಡ ತಹಶೀಲ್ದಾರ ಅಶೋಕ ಕಲಘಟಗಿ ಅವರ ರೂಲ್ಸ್.

ಹೌದು ಮಾದ್ಯಮವೆಂದರೆ ಜನರ ಧ್ವನಿ ಎನ್ನುತ್ತಾರೆ. ಆದರೆ ಜನರ ಧ್ವನಿಯನ್ನು ಆಡಳಿತಕ್ಕೆ ಮತ್ತು ಸಮಾಜಕ್ಕೆ ತಲುಪಿಸುವಲ್ಲಿ ಮಾದ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆದರೆ ಸ್ವತಃ ತಹಶೀಲ್ದಾರರೆ ವಿಡಿಯೋ ಮಾಡಿದರೆ ಡಿಸ್ಮಿಸ್ ಮಾಡ್ತಿನಿ ಅಂತ ಪತ್ರಕರ್ತನಿಗೆ ಆವಾಜ್ ಹಾಕಿದ್ದಾರೆ.

ಹಲವು ತಿಂಗಳಿಂದ ಆಗಾಗ ನರೇಗಲ್ ಪಟ್ಟಣದಲ್ಲಿ ಆಧಾರ ಕೇಂದ್ರ ಹಾಗೂ ಪಹಣಿ ನೀಡುವ ಕೇಂದ್ರ ಕಾರ್ಯ ನಿರ್ವಹಿಸದೇ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಈ ಬಗ್ಗೆ ಕಳೆದ ಎರಡು ತಿಂಗಳ ಹಿಂದೆ ಉತ್ತರಪ್ರಭ ಕೂಡ ವಿಶೇಷ ವರದಿ ಪ್ರಕಟಿಸಿತ್ತು. ಆದರೆ ಕೇಂದ್ರದಿಂದ ಕಳೆದ ಎರಡು ದಿನಗಳಿಂದಂತೂ ತುಂಬ ಸಮಸ್ಯೆಯಾಗಿತ್ತು. ಇದರಿಂದ  ಈ ಭಾಗದ ರೈತರು, ವಿದ್ಯಾರ್ಥಿಗಳು ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿತ್ತು.

ಗುರುವಾರ ಪಟ್ಟಣಕ್ಕೆ ಆಗಮಿಸಿದ ತಹಶೀಲ್ದಾರ್ ಅಶೋಕ್ ಕಲಘಟಗಿ ಅವರನ್ನು ಸ್ಥಳೀಯರು ಭೇಟಿ ಮಾಡಿ ಸಮಸ್ಯೆಯನ್ನು ಗಮನಕ್ಕೆ ತರಲು ಪ್ರಯತ್ನಿಸಿದರು. ಈ ವೇಳೆ ಪಟ್ಟಣ ಪಂಚಾಯತಿ ಒಂದನೇ ವಾರ್ಡಿನ ಸದಸ್ಯ ರಾಚಯ್ಯ ಮಾಲಗಿತ್ತಿಮಠ ಹಾಗೂ ರೈತರು ಮತ್ತು ಸ್ಥಳೀಯರು ತಹಶಿಲ್ದಾರರಿಗೆ ಸಮಸ್ಯೆ ಹೇಳಿಕೊಳ್ಳುತ್ತಿರುವಾಗ ಜನರ ಸಮಸ್ಯೆಯನ್ನು ಚಿತ್ರಿಸಿಕೊಳ್ಳುತ್ತಿದ್ದ ಉತ್ತರಪ್ರಭ ಪ್ರತಿನಿಧಿಯನ್ನು ತಹಶಿಲ್ದಾರ ಅಶೋಕ ಕಲಘಟಗಿ ಅವರು ನಿನಗೆ ವಿಡಿಯೋ ಮಾಡಲು ಅನುಮತಿ ನೀಡಿದವರು ಯಾರು? ನಿನ್ನನ್ನು ಡಿಸ್ಮಿಸ್ ಮಾಡ್ತಿನಿ. ನೀನು ಒಳಗೆ ಬರಬೇಡ ಹೊರನಡೆ ಎಂದು ಏಕವಚನದಲ್ಲಿ ಗದರಿಸುವ ಮೂಲಕ ದರ್ಪ ತೋರಿದ್ದು ಸಾರ್ವಜನಿಕರ ಖಂಡನೆಗೆ ಕಾರಣವಾಗಿದೆ.  

ಇನ್ನು ಜನರ ಸಮಸ್ಯೆಗಳು, ತೊಂದರೆಗಳು, ತಾಪತ್ರೆಯಗಳನ್ನು ತೋರಿಸುವುದಾದರೆ ಅಥವಾ ಚಿತ್ರಿಸುವುದಾದರೆ ಇನ್ಮುಂದೆ ತಹಶೀಲ್ದಾರರ ಅನುಮತಿ ಪಡೆಯಬೇಕಾ? ಆಗಿರುವ ತಪ್ಪು ಸರಿಪಡಿಸುವ ಬದುಲು ಜನರ ಧ್ವನಿಯಾಗಬೇಕಿದ್ದ ಮಾದ್ಯಮವನ್ನು ತಾಲೂಕಿನ ದಂಢಾಧಿಕಾರಿಗಳಾಗಿ ಜನರ ಸಮಸ್ಯೆಗೆ ಸ್ಪಂದಿಸುವ ಬದಲು ಮಾದ್ಯಮ ಪ್ರತಿನಿಧಿಯ ಮೇಲೆ ದರ್ಪ ತೋರಿದ್ದು ಎಷ್ಟು ಸರಿ? ತಹಶೀಲ್ದಾರ ಸಾಹೇಬರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಇನ್ನು ಅನುಮತಿ ಇಲ್ಲದೇ ಚಿತ್ರಿಕರಣ ಮಾಡಿದರೆ ಡಿಸ್ಮಿಸ್ ಮಾಡ್ತಾರಂತೆ ತಹಶೀಲ್ದಾರ್ ಅಶೋಕ್ ಕಲಘಟಗಿ ಅವರು. ಈ ಮಾತನ್ನು ಯಾಕಂದರೋ ಗೊತ್ತಿಲ್ಲ. ಸಾರ್ವಜನಿಕ ಬದುಕಿನಲ್ಲಿ ಜನಸಾಮಾನ್ಯರ ಪರ ಕಾರ್ಯ ನಿರ್ವಹಿಸುವವರನ್ನು ಡಿಸ್ಮಿಸ್ ಮಾಡಲು ತಹಶೀಲ್ದಾರರು ಯಾರು? ಎಂದು ಕೂಡ ಸಾರ್ವಜನಿಕ ವಲಯದಲ್ಲಿಯೇ ಪ್ರಶ್ನೆ ಉದ್ಭವವಾಗಿದೆ.

Leave a Reply

Your email address will not be published. Required fields are marked *

You May Also Like

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿ

ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ

ಗದಗ: ಕನ್ನಡ ಜಾನಪದ ಪರಿಷತ ಬೆಂಗಳೂರು ಜಿಲ್ಲಾ ಘಟಕ ಗದಗ ಇವರ ಆಶ್ರಯದಲ್ಲಿ ನವೆಂಬರ 17 ರಂದು ಸಾಯಂಕಾಲ 5-30 ಗಂಟೆಗೆ ಗದಗ ನಗರದ ಬಣ್ಣದ ಮನೆ ಆರ್ಟ ಅಡ್ಡಾದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ,