ಬೆಂಗಳೂರು: ವಿಧಾನ ಪರಿಷತ್‍ ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ರೂ. 1,224 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ನಾಮಪತ್ರ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ಆಸ್ತಿ ಫೋಷಿಸಿಕೊಂಡಿದ್ದಾರೆ. ಎಂಟಿಬಿ ವಿರುದ್ಧ ಒಂದು ಪೊಲೀಸ್ ದೂರು ಇದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.
ಎಂಟಿಬಿ ಹೆಸರಲ್ಲಿ ಒಟ್ಟು ರೂ. 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ ರೂ. 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿದ್ದಾರೆ. ಎಂಟಿಬಿ ಹೆಸರಲ್ಲಿ ರೂ. 461 ಕೋಟಿ ಚರಾಸ್ತಿ, ರೂ. 416 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಿನಲ್ಲಿ ರೂ. 160 ಕೋಟಿ ಚರಾಸ್ಥಿ, ರೂ. 179 ಸ್ಥಿರಾಸ್ಥಿ ಇದೆ. ಅಲ್ಲದೇ, ಎಂಟಿಬಿ ರೂ. 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.
ಎಂಟಿಬಿ ನಾಗರಾಜ್ ಬಳಿ ನಗದು ರೂ. 32.60 ಲಕ್ಷ ಇದೆ. ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ ನಗದು ರೂ. 45.60 ಲಕ್ಷ ರೂ. ಇದೆ. ಅಲ್ಲದೇ ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ. ಇದೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ ರೂ. 144.41 ಕೋಟಿ ಇದೆ. ಪತ್ನಿ ಹೆಸರಿನಲ್ಲಿ ಬ್ಯಾಂಕ್ ಸೇವಿಂಗ್ಸ್ ರೂ. 11.21 ಕೋಟಿ, ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ರೂ. 34.08 ಕೋಟಿ ಇದೆ.
ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ. ಪತ್ನಿ ಮಾಡಿರುವ ಸಾಲ 1.97 ಕೋಟಿ ರೂ. ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ. ಎಂಟಿಬಿ ಬಳಿ ಲ್ಯಾಂಡ್ ರೋವರ್, ಮರ್ಸಿಡೀಸ್, ಟೊಯೋಟಾ ಮತ್ತು ಹುಂಡೈ ಕಂಪೆನಿಗಳ ಐಷಾರಾಮಿ ಕಾರುಗಳಿವೆ. ಕಾರುಗಳ ಒಟ್ಟು ಮೌಲ್ಯ 2.48 ಕೋಟಿ ರೂ. ಪತ್ನಿ ಬಳಿ ಇರುವ ಏಕೈಕ ಐಷಾರಾಮಿ ಕಾರು ಪಾರ್ಶ್ (ಪೋರ್ಶೆ), ಬೆಲೆ 1.72 ಕೋಟಿ ರೂ. ಆಗಿದೆ. ಇದಲ್ಲದೇ ಎಂಟಿಬಿ ಬಳಿ 54 ಎಕರೆ ಕೃಷಿ ಭೂಮಿ ಇದೆ. ಇದರ ಮಾರುಕಟ್ಟೆ ಮೌಲ್ಯ 29.86 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ, ಇದರ ಮೌಲ್ಯ 26 ಕೋಟಿ ರೂ. ಆಗಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ

ಈಗಾಗಲೇ ರಾಜ್ಯದ ಬಹುತೇಕ ಕಡೆಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಜನರನ್ನು ಆವರಿಸಿದೆ. ಇನ್ನು ಜಲಾಶಯಗಳಲ್ಲಿಯೂ ಕೂಡ ಹೆಚ್ಚು ನೀರು ಸಂಗ್ರಹವಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ, ಒಳಹರಿವು ಮೊದಲಾದ ಮಾಹಿತಿ ಇಲ್ಲಿದೆ

ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 397 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 10118…

ಹೆಚ್ಚುವರಿ ಸೇನೆ ನಿಯೋಜಿಸಿದ: ಪಾಕ್ !

ನವದೆಹಲಿ : ವಾಸ್ತವಿಕ ಗಡಿ ರೇಖೆ(ಎಲ್ಎಸಿ)ಯಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಿ ಚೀನಾ ಉಪಟಳ ನೀಡುತ್ತಿರುವ ಹಿನ್ನೆಲೆಯಲ್ಲಿಯೇ…