ಸುದ್ದಿಗೆ ತೆರಳಿದ ಪತ್ರಕರ್ತನಿಗೆ ತಹಶೀಲ್ದಾರ ಆವಾಜ್!: ಗಜೇಂದ್ರಗಡ ತಹಶೀಲ್ದಾರರಿಂದ ಮಾದ್ಯಮ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನ!

ಜನರಿಗೆ ಸಮಸ್ಯೆಗಳೇನೆ ಇರಲಿ ಪತ್ರಕರ್ತ ತಹಶೀಲ್ದಾರರ ಪರ್ಮಿಷನ್ ಇಲ್ಲದೇ ಚಿತ್ರಿಕರಿಸುವ ಹಾಗಿಲ್ಲ. ಜನ ಸಮಸ್ಯೆ ಹೇಳಿಕೊಂಡು ಬಂದಾಗಲೂ ಸಾರ್ವಜನಿಕ ಸರ್ಕಾರಿ ಕಚೇರಿಯಲ್ಲಿ ಪತ್ರಕರ್ತನಿಗೆ ಪ್ರವೇಶ ಇಲ್ವಂತೆ! ಇದು ಗದಗ ಜಿಲ್ಲೆ ಗಜೇಂದ್ರಗಡ ತಹಶೀಲ್ದಾರ ಅಶೋಕ ಕಲಘಟಗಿ ಅವರ ರೂಲ್ಸ್.

ಮುಳುಗದ ರವಿ‌ ಬೆಳಗು

ಪತ್ರಕರ್ತ, ಕವಿ, ಕತೆಗಾರ, ಅನುವಾದಕ, ವಿವಾದಾತ್ಮಕ ಬರಹಗಾರ ರವಿ ಬೆಳಗೆರೆ ನಿರೀಕ್ಷಿತವಾಗಿ ದೈಹಿಕವಾಗಿ ಹೋಗಿದ್ದಾರೆ. ಕುಡಿತ, ಸಿಗರೇಟ್, ರಸಿಕತೆ ರವಿಯನ್ನು ಬಲಿ ತೆಗೆದುಕೊಂಡಿದೆ. ಯಾವತ್ತಾದರೂ ಒಂದು ದಿನ ಸಾಯೋದೇ, ಹ್ಯಾಗ ಬದುಕಿದರೆ ಏನು? ಎಂಬ ಉಡಾಫೆಯೂ ಇತ್ತಲ್ಲ! ಆದರೆ ರವಿ very very colourful ಕನಸುಗಾರ. ಬದುಕಿನ ರಹಸ್ಯಗಳನ್ನು ಬಿಚ್ಚಿಟ್ಟ ಎದೆಗಾರ. ತುಂಬಾ ಕಾಡಿ ಕನಲಿದ ಹುಟ್ಟಿನ ರಹಸ್ಯ ಬಿಚ್ಚಿಟ್ಟು ನಿರಾಳವಾದ ಹೊತ್ತಲ್ಲಿ ಜೀವ ಬಿಟ್ಟ ಜಾದೂಗಾರ.