ಗದಗ: ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿಯವರೆಗೆ ಮೇಲ್ದರ್ಜೆಗೆ ಏರಿಸಲು ಮನವಿ ಮಾಡಿದ್ದು, ಜಿಲ್ಲಾ ಹೆದ್ದಾರಿಯಿಂದ ರಾಜ್ಯ ಹೆದ್ದಾರಿ ಮಾಡಲು ಪರಿವರ್ತನೆ ಮಾಡಲು ಸರ್ಕಾರಕ್ಕೆ ಮನವಿ ಮಡಿದ್ದೇವೆ ಎಂದು ಸಣ್ಣ ಕೈಗಾರಿಕಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಿ.ಸಿ.ಪಾಟೀಲ ಹೇಳಿದರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಸರ್ಕಾರ ಪ್ರಾರಂಭದಿAದಲೂ ಸಾಕಷ್ಟು ಪ್ರಕೃತಿಯ ವಿಕೋಪಗಳನ್ನು ಎದುರಿಸುತ್ತಿದೆ. ಪ್ರವಾಹದಲ್ಲಿ ಹಾನಿಗೊಳಗಾದ ರಸ್ತೆ, ಜನರು, ಪ್ರಾಣಿ ಸಂಕುಲಗಳಿಗೆ ಸೂಕ್ತ ರಕ್ಷಣೆ ಕೊಡುವ ಕೆಲಸ ಸರ್ಕಾರ ಮಾಡುತ್ತದೆ. ಅಧಿಕಾರ ವಹಿಸುಕೊಂಡ ತಕ್ಷಣವೇ ಭೀಕರ ಪ್ರವಹಾ ಹಾಗೂ ಕೋರೊನಾ ಸೊಂಕು ಸೇರಿದಂತೆ ಎಲ್ಲವನ್ನು ಯಶಸ್ವಿಯಾಗಿ ನಿಬಾಯಿಸಿದ್ದೇವೆ. ಕೊರೊನಾ ನಿಯಂತ್ರಣದಲ್ಲಿ ಪಕ್ಷಭೇಧವಿಲ್ಲದೇ ಒಟ್ಟುಗೂಡಿ ಜಿಲ್ಲಾಡಳಿತಕ್ಕೆ ಸಲಹೆಗಳನ್ನು ನೀಡಿ ಕೋರೊನಾ ಸೋಂಕು ಯಶಸ್ವಿಯಾಗಿ ನಿಭಾಯಿಸುವಕಲ್ಲಿ ಗದಗ ಪ್ರಥಮಸ್ತಾನದಲ್ಲಿದೆ ಎಂದರು.

ಬೆಣ್ಣಿ ಹಳ್ಳದ ಸ್ವಚ್ಚತಾ ಕಾರ್ಯಕ್ರಮಕ್ಕೆ ಹಣ ಬಿಡುಗಡೆಗೆ ನಿರಾವರಿ ನಿಗಮಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು, ಅಂತಿಮ ಹಂತದಲ್ಲಿದೆ. ನಿರಾವರಿಗಾಗಿ ಈಗಾಗಲೆ 1 ಸಾವಿರ ಕೋಟಿ ಹಣ ಬಿಡುಗಡೆಯಾಗಿದ್ದು, ಟೆಂಡರ್ ಕಾಮಗಾರಿ ಕೂಡ ಪಾರಂಭವಾಗಿದೆ. ಪ್ರವಹಾದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಎ ಮತ್ತು ಬಿ ಕೆಟಗರಿಯ ಸಂತ್ರಸ್ತರಿಗಾಗಿ 5 ಲಕ್ಷ ರೂ ಹಣ ಬಿಡುಗಡೆ ಮಾಡಿದೆ. ಸಂತ್ರಸ್ತರಿಗೆ ಮೊದಲ ಹಂತದಲ್ಲಿ 1 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದ್ದು, ಮನೆ ಕಟ್ಟಡದ ಬೆಳವಣಿಗೆ ಪೋಟೋ ಸಲ್ಲಿಸದಲ್ಲಿ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

2ನೇ ಹಂತದ ಹಣಕ್ಕಾಗಿ ಹಲವಾರು ಸಂತ್ರಸ್ತರು ಸಲ್ಲಿಸಬೇಕಾಗಿರುವ ಧಾಖಲೆಗಲನ್ನು ಸಲ್ಲಿಸಿಲ್ಲ. ಕೂಡಲೇ ಸಂತ್ರಸ್ತರು ಧಾಖಲೆಗಲನ್ನು ಸಲ್ಲಿಸಬೇಕು. ಹಾಗೂ ಸಂತ್ರಸ್ತರಿಗೆ ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ರಾಜೀವಗಾಂಧಿ ವಸತಿ ನಿಲಯ ನಿಗಮದಲ್ಲಿ ಅವಕಾಶ ಕಲ್ಪಿಸಿಕೊಟ್ಟಿದೆ ಎಂದರು.

ಬೆಣ್ಣಿಹಳ್ಳ ತೆರವುಗೊಳಿಸುವುವ ಪ್ರಸ್ತಾವನೆ ಇಗಾಗಲೇ ನಿರಾವರಿ ನಿಗಮಕ್ಕೆ ಸಲ್ಲಿಸಲಾಗಿದೆ. ಶಂಕರ ಪಾಟೀಲ, ಬಂಡಿ ಸೇರಿದಂತೆ ಹಲವರು ಸೇರಿ ಚರ್ಚಿಸಿದ್ದೇವೆ. ಬೆಣ್ಣಿ ಹಳ್ಳ ಸ್ವಚ್ಚತಾ ಕಾರ್ಯಕ್ರಮ ಪ್ರಾರಂಭ ಮಾಡುತ್ತೆವೆ. ಬೆಣ್ಣಿಹಳ್ಳ ಒತ್ತುವರಿ ಮಾಡಲು ಸರ್ಕಾರದ ಸೂಚನೆ ಬಂದಿಲ್ಲ. ಆದರೆ, ಒತ್ತುವರಿ ಮಾಡಬೇಕು ಎಂಬುದು ಮೊದಲಿನಿಂದಲೂ ನನ್ನ ಅಭಿಪ್ರಾಯವಿದೆ. ಅದಕ್ಕಾಗಿಯೇ ಒಂದು ಸಮಿತಿಯನ್ನ ರಚಿಸಬೇಕಾಗುತ್ತದೆ ಹಾಗೂ ಅದರ ಎಲ್ಲ ಅಯಾಮಗಳನ್ನು ತಿಳಿದುಕೊಂಡು ಅದಕ್ಕು ಚಾಲನೇ ನೀಡಬೇಕು ಎಂಬುದು ನನ್ನ ಮನಸ್ಸಿನಲ್ಲಿದೆ. ಮುಂದಿನ ದಿನಗಳಲ್ಲಿ ನಿರಾವರಿ ಸಚಿವರ ಜೊತೆಗೆ ಚರ್ಚಿಸಿ ಆ ಕಾರ್ಯ ಕೈಗೊಳ್ಳುತ್ತದೆ ಎಂದು ತಿಳಿಸಿದರು.

ಶಾಸಕ ಎಚ್.ಕೆ.ಪಾಟೀಲ, ವಿದಾನಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಮಾಜಿ ಸಚಿವ ಎಸ್.ಎಸ್.ಪಾಟೀಲ, ಜಿ.ಪಂ ಅಧ್ಯಕ್ಷ ಈರಣ್ಣ ನಾಡಗೌಡರ, ಜಿ.ಪಂ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಜಿಲ್ಲಾದ್ಯಂತ ಶೇಕಡ 38.98 ಮತದಾನ: ಮದ್ಯಾಹ್ನ 1ಗಂಟೆವರೆಗಿನ ವಿವರ

ಗದಗ ಜಿಲ್ಲೆ ವಿಧಾನಸಭಾ ಚುನಾವಣೆ ಮತದಾನ ವಿವರ ಮಧ್ಯಾಹ್ನ 1=00 ಗಂಟೆಯವರೆಗೆ ಶೇಕಡಾವಾರು ಮತದಾನ ಇಂತಿದೆ.…

ಕೇಲೂರ ಘಟನೆ: ಸಂತ್ರಸ್ಥೆಯ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು

ಗದಗ: ಮುಂಡರಗಿ ತಾಲೂಕಿನ ಕೇಲೂರು ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಭೂಮಿ ಒತ್ತುವರಿ ತೆರವು ಕರ‍್ಯಾಚರಣೆ…

ಜನಪದ ಜನರ ಜೀವನಾಡಿ; ಜನಪದ ಕಲಾವಿದರಿಗೆ ಹೆಚ್ಚಿನ ಗೌರವಗಳು ಸಿಗಬೇಕು: ರವಿಕಾಂತ ಅಂಗಡಿ

ಉತ್ತರಪ್ರಭ ಸುದ್ದಿಗದಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ,…

ಯುವಕರೇ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..! ಪೊಲೀಸರ ನಿಗಾ ನಿಮ್ಮ ಮೇಲಿದೆ..!!

ಉತ್ತರಪ್ರಭಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ…