ಉತ್ತರಪ್ರಭ ಸುದ್ದಿ
ಗದಗ:
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಗದಗ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ, ಜಿಲ್ಲಾ ಯುವಜನ ಸಂಘಗಳ ಒಕ್ಕೂಟ, ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರಿಗೆ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ: 11.11.2022 ರಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಜಿಲ್ಲಾ ಯುವಜನ ಸಂಘಗಳ ಒಕ್ಕೂಟ ಅಧ್ಯಕ್ಷರು ಮತ್ತು ವಕೀಲರಾದ ರವಿಕಾಂತ ಅಂಗಡಿ ಮಾತನಾಡುತ್ತಾ ಜನಪದ ಜನರ ಪದ, ಜನಪದ ಉಳಿದರೆ ಜನರು ಉಳಿಯಲಿಕ್ಕೆ ಸಾಧ್ಯ. ತರಬೇತಿ ಶಿಬಿರದಿಂದ ವ್ಯಕ್ತಿತ್ವ ವಿಕಸನ ವಾಗುವುದಲ್ಲದೆ ಅವರ ಬದುಕಿಗೆ ದಾರಿ ಆಗಬಲ್ಲದು. ಗದಗ ಜಿಲ್ಲೆಯ ಕಲಾವಿದರಿಗೆ ಸರ್ಕಾರದಿಂದ ಜನಪದ ಅಕಾಡೆಮಿಯ ಹುದ್ದೇಗಳು ಸಿಗದಿರವುದು ಖೆದಕರ ಸಂಗತಿ, ಅಷ್ಟೇ ಅಲ್ಲದೇ ಅವರಿಗೆ ಸಿಗಬೇಕಾದ ಗೌರವ ಮತ್ತು ಸನ್ಮಾನಗಳು ಸಿಗುತ್ತಿಲ್ಲ, ಹಾಗಾಗಿ ಮುಂದಿನ ದಿನಗಳಲ್ಲಿ ಕಲಾವಿದರ ಹಕ್ಕುಗಳಿಗಾಗಿ ಹೋರಾಟವನ್ನು ಮಾಡಲಾಗುವುದು. ತರಬೇತಿ ಶಿಬಿರದಲ್ಲಿ ಅನೇಕ ಪ್ರಕಾರದ ಜನಪದ ಕಲೆಗಳನ್ನು ಹೇಳಿಕೊಡಲಾಗಿದೆ. ವಿಶೇಷವಾಗಿ ಗೀಗಿ ಪದ, ದೊಡ್ಡಾಟ, ಲಂಬಾಣಿ ಪದಗಳು, ಲಾವಣಿ, ಹೀಗೆ ಅನೇಕ ಪ್ರಕಾರದ ಕಲೆಗಳನ್ನು ಸಂಪನ್ಮೂಲ ವ್ಯಕ್ತಿಗಳು ಉತ್ತಮ ರೀತಿಯಲ್ಲಿ ತರಬೇತಿ ನೀಡಿದ್ದರಿಂದ ಇವತ್ತು ಯುವ ಕಲಾವಿದರು ಉತ್ತಮ ರೀತಿಯಲ್ಲಿ ಪ್ರದರ್ಶನ ಮಾಡಲು ಸಾಧ್ಯವಾಗಿದೆ. ಇಂತಹ ಅನೇಕ ತರಬೇತಿ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು, ಯುವ ಜನತೆ ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.


ಕ.ರಾ.ಗ್ರಾ.ಪಂ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಬಸವಾರಾಜ ಎಲ್ ಲಕ್ಕಣ್ಣವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ವಿಶ್ವವಿದ್ಯಾಲಯದಿಂದ ಮುಂದಿನ ದಿನಗಳಲ್ಲಿ ಕಲಾವಿದರ ಪರಿಚಯದ ಮಾಹಿತಿ ಸಂಗ್ರಹಿಸಿ ಹೊತ್ತಿಗೆಯನ್ನು ಹೊರ ತಂದರೆ ನಮ್ಮ ಕಲಾವಿದರ ಪರಿಚಯ ಮುಂದಿನ ಪಿಳಿಗೆಗೆ ಸಹಾಯಕ ವಾಗುತ್ತದೆ. ಶಿಕ್ಷಣದ ಪದ್ದತಿ ಬದಲಾದದರಿಂದ ಯಾರು ಕೌಶಲ್ಯವನ್ನು ಹೊಂದಿರುತ್ತಾರೆ, ಅವರಿಗೆ ಗೌರವ ಉಪನ್ಯಾಸಕರಾಗಿ ಗುರುತಿಸಿ ಅವರಿಗೆ ಗೌರವ ಧನವನ್ನು ನೀಡಲಾಗುವುದು ಇದು ನಿಮ್ಮ ವಿಶ್ವವಿದ್ಯಾಲಯ ನಿಮ್ಮದೇ ವಿಶ್ವವಿದ್ಯಾಲದ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.


ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯ ನಿರ್ದೇಶಕರಾದ ವಿಠ್ಠಲ ಜಾಬಗೌಡರವರು ಅತಿಥಿ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಗಳಾದ ಹಿರಿಯ ಕಲಾವಿದ ಈರಣ್ಣ ಚ ಅಂಗಡಿ ಗಿಗೀ ಪದ ತರಬೇತಿ, ಅದೇ ರೀತಿ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಧನರಾಮ ತಂಬೂರಿ ಲಂಬಾಣಿ ಪದಗಳ ತರಬೇತಿ ಅನುಭವಗಳನ್ನು ಹಂಚಿಕೊAಡರು. ತರಬೇತಿ ಪಡೆದ ಕು.ಸಾಗರ ದೊಡ್ಡಾಟದ ತರಬೇತಿ ಅನುಭವವನ್ನು ಹಂಚಿಕೊoಡರು. ಜನಪದ ಲಂಬಾಣಿ ನೃತ್ಯ ತರಬೇತಿ ಪಡೆದ ಕು. ಅರ್ಜುನ ಲಮಾಣಿ ತರಬೇತಿ ಅನುಭವದ ಬಗ್ಗೆ ಹಂಚಿಕೊoಡರು. ವಿವಿಧ ಕಲಾತಂಡಗಳಿoದ ಕಲಾ ಪ್ರದರ್ಶನ ಜರುಗಿತು.


7ದಿನದ ಊಟ ವಸತಿಯುತ ತರಬೇತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ವೇದಿಕೆ ಮೇಲೆ ತರಬೇತಿ ಸಂಯೋಜಕರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇಜರಾದ, ಶಂಕ್ರಣ್ಣ ಸಂಕಣ್ಣನವರ, ಚಂದ್ರಪ್ಪ ಬಾರಂಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗ ಕ.ರ.ಗ್ರಾ.ಪಂ ವಿಶ್ವವಿದ್ಯಾಲಯದ ಹಾದಿಮನಿ ಉಪಸ್ಥಿತರಿದ್ದರು. ಬಾಹುಬಲಿ ಜೈನರ್ ನಿರೂಪಣೆ. ಸಂಪನ್ಮೂಲ ವ್ಯಕ್ತಿಗಳಾಗಿ ಧನರಾಮ ತಂಬೂರಿ, ಶಂಕ್ರಣ್ಣ ಸಂಕಣ್ಣನವರ, ಈರಣ್ಣ ಚನ್ನಪ್ಪ ಅಂಗಡಿ, ಶರಣಪ್ಪ ಯಡಿಯಾಪುರ, ಪರಶುರಾಮ ಹೂಗಾರ, ಬಸವರಾಜ ಜಕ್ಕಮ್ಮನವರ, ಮುತ್ತಣ್ಣ ಡೊಳ್ಳಿನ, ವಿರುಪಾಕ್ಷಿ ಗರನವರ, ಬಸಲಿಂಗಪ್ಪ ಕುಸಲಾಪುರ, ರಂಗಪ್ಪ ಹುಯಿಲಗೋಳ, ಮಾಲತೇಶ ಡ್ರಾಮಾ ಸಿನ್ಸ, ಲಕ್ಷಮ್ಮವ್ವ ಗೌಳಿ, ಯಲ್ಲವ್ವ ಸಣ್ಣತಂಗಿ ಸೇರಿದಂತೆ ಅನೇಕರು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಅನೇಕ ಕಲಾ ಆಸಕ್ತರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಕೊರ್ಲಹಳ್ಳಿ: ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲು!

ಗದಗ ನಗರಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಿಂದ ಗದಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಇದಾಗಿದೆ. ಕೊರ್ಲಹಳ್ಳಿ ಸಮೀಪದಲ್ಲಿ ಹೆದ್ದಾರಿ ಪಕ್ಕದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಗದಗ ಜಿಲ್ಲೆ : ನರೇಗಾದಲ್ಲಿ ಬಿಎಫ್‌ಟಿ ಹುದ್ದೆಗೆ ಅರ್ಜಿ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 5 ಬಿ.ಎಫ್.ಟಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊರೊನಾ ಕಾರಣ: ಗದಗ ಜಿಲ್ಲೆಯಲ್ಲಿ ನಿಯಂತ್ರಿತ ಪ್ರದೇಶ(ಕಂಟೇನ್ಮೆಂಟ ಝೋನ್) ವಿವರ

ಕೊರೊನಾ ಕಾರಣ: ಗದಗ ಜಿಲ್ಲೆಯಲ್ಲಿ ನಿಯಂತ್ರಿತ ಪ್ರದೇಶ(ಕಂಟೇನ್ಮೆಂಟ ಝೋನ್) ವಿವರ

ಜೂ.1ರ ನಂತರದ ಮತ್ತೆ ಕಠಿಣ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು?

ಗದಗ: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೋವಿಡ್-19 ಎರಡನೇ ಅಲೆಯ ಸೋಂಕು ನಿಯಂತ್ರಣಕ್ಕಾಗಿ ಸರ್ಕಾರದಿಂದ ಜಾರಿ ಮಾಡಿದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಅನುಷ್ಟಾನ ಅತ್ಯವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.