ಉತ್ತರಪ್ರಭ
ಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ ಕೆಲ ಕಾಲ ಗೊಂದಲ ನಿರ್ಮಾಣವಾಗುವಂತೆ ಉಂಟಾಗಿತ್ತು.
ನರಗದ ಕಿರಣ್ ಹಿರೇಮಠ ಎಂಬಾತ ಫೆಸ್ ಬುಕ್ ನಲ್ಲಿದ್ದ ಟ್ರೋಲ್ ಫೊಟೋ ಒಂದನ್ನು ತನ್ನ ವಾಟ್ಸಾಪ್ ನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದ. ಈ ಫೋಟೋ ಒಂದು ಸಮುದಾಯವನ್ನ ಕೆಟ್ಟದಾಗಿ ಚಿತ್ರಿಸುವಂತೆ ಬಿಂಬಿತವಾಗಿತ್ತು.. ಜಮಖಂಡಿ ಜವಾರಿ ಮಂದಿ ಎನ್ನುವ ಫೆಸ್ ಬುಕ್ ಪೇಜ್ ನಿಂದ ಈ ಆಕ್ಷೇಪಾರ್ಹ ಪೋಸ್ಟ್ ನ್ನ ಕಿರಣ್ ಪೋಸ್ಟ್ ಮಾಡಿದ್ದ.

ದ್ವೇಷ ಹಬ್ಬಿಸಬಹುದಾದ ಪೋಸ್ಟ್ ಗಳ ಮೇಲೆ ನಿಗಾ ಇಟ್ಟಿರುವ ನಗರದ ಪೋಲಿಸರು, ಕಿರಣ್ ನನ್ನ ಕರೆಸಿ ವಿಚಾರಣೆ ನಡೆಸಿದ್ದರು.
ಇದರಿಂದ ಕೆಲ ಕಾಲ ಸ್ಟೇಷನ್ ಅಂಗಳದಲ್ಲಿ ಬಿಸಿ ವಾತಾವರಣ ನಿರ್ಮಾವಾಗಿತ್ತು. ಶ್ರೀರಾಮ ಸೇನೆ ಕಾರ್ಯಕರ್ತನ ವಿಚಾರಣೆ ಮಾಡುತ್ತಿರುವುದಕ್ಕೆ ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು, ಶ್ರೀರಾಮ ಸೇನೆ ಪರ ಘೋಷಣೆ ಕೂಗಿ ಯುವಕರನ್ನ ಜಮಾಯಿಸುವ ಪ್ರಯತ್ನ ಮಾಡಿದರು.
ಮುಂಜಾಗೃತ ಕ್ರಮವಾಗಿ ಸ್ಥಳದಲ್ಲಿ ಮೂರು ಡಿಆರ್, ಒಂದು ಕೆಎಸ್ ಆರ್ ಪಿ ತುಕಡಿ.. ಹಾಗೂ ಒಬ್ಬ ಡಿವೈಎಸ್ ಪಿ, ನಾಲ್ವರು ಪಿಎಸ್ ಐ, ಮೂವತ್ತು ಪೊಲೀಸರು ನಿಯೋಜನೆಗೊಂಡು ಅಹಿತಕರ ಘಟನೆಯಾಗದಂತೆ ನಿಗಾವಹಿಸಿದರು. ಅಲ್ಲದೆ ಜಮಾವಣೆಗೊಂಡಿದ್ದ ಕಾರ್ಯಕರ್ತರನ್ನ ಚದುರಿಸಿದರು.
ನಂತ್ರ ಕಿರಣ್ ಹಿರೇಮಠ್ ಎಂಬಾತನಿಗೆ ದ್ವೇಷ ಸಾರುವ ಪೋಸ್ಟ್ ಮಾಡಕೂಡದು ಅಂತಾ ತಾಕೀತು ಮಾಡಿ ಸ್ಟೇಷನ್ ನಿಂದ ಕಳುಹಿಸಲಾಗಿದೆ.