ಹುಬ್ಬಳ್ಳಿ: ಮೂರು ಸಾವಿರ ಮಠದ ಸರ್ವನಾಶಕ್ಕೆ ಉನ್ನತ ಮಟ್ಟದ ಸಮಿತಿ ಸಿದ್ಧವಾಗಿದೆ. ದಿಂಗಾಲೇಶ್ವರ ಶ್ರೀಗಳಿಗೆ ಯಾವತ್ತು ತೊಂದರೆ ಆಗುವುದಿಲ್ಲ. ಮೂರು ಸಾವಿರ ಮಠಕ್ಕೆ ತೊಂದರೆ ಆಗಿದೆ. ನಾನು ಈಗ ಮಠದ ಆಸ್ತಿ ಉಳಿಸಬೇಕು ಎಂದು ಹೋರಾಟ ಮಾಡುತ್ತಾ ಇದ್ದೇನೆ. ನಾನು ಉತ್ತರಾಧಿಕಾರಕ್ಕಾಗಿ ಹೋರಾಟ ನಡೆಸಿಲ್ಲ ಎಂದು ಬಾಲೆಹೊಸೂರು ದಿಂಗಾಲೇಶ್ವರಶ್ರೀಗಳು ಹೇಳಿದರು.

ಅವರು ಹುಬ್ಬಳ್ಳಿಯಲ್ಲಿ ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಾನು ಮಠದ ಆಸ್ತಿ ಉಳಿಸಲು ಹೋರಾಟ ನಡೆಸಿದಾಗ, ಈ‌ ಮೋಹನ್ ‌ಲಿಂಬಿಕಾಯಿ ಯಾರು ಎಂದು ರಾಜ್ಯದ ಜನರಿಗೆ ಗೋತ್ತೆ ಇರಲಿಲ್ಲ. ನಾನು ಉತ್ತರಾಧಿಕಾರಿ ಆಗಲು ಅಡ್ಡಗಾಲು ಹಾಕಿದ್ದಾರೆ. ಸಿ.ಎಮ್.ಉದಾಸಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ ಈ ಮೂವರ ಕುತಂತ್ರದಿಂದ ನಾನು ಉತ್ತರಾಧಿಕಾರಿಯಾಗಲು ಹಿನ್ನಡೆಯಾಗಿದೆ.

ಮಠದ ಅವ್ಯವಹಾರದ ಬಗ್ಗೆ ದಾಖಲೆಗಳಿವೆಯಂತೆ!

ಮಠದದಲ್ಲಿ ಎಷ್ಟು ಅವ್ಯವಹಾರ ಆಗಿದೆ ಎಂಬುದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಅವ್ಯವಹಾರ ಆಗಿಲ್ಲಾ ಎನ್ನುವದಾದರೆ ಮಠದ ಕರ್ತೃ ಗದ್ದುಗೆಗೆ ಬರಲಿ, ನಾನು ಬರುತ್ತೇನೆ. ಮಠದಲ್ಲಿಯೆ ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೆನೆ ನನ್ನ ಹೋರಾಟಕ್ಕೆ ಮೂನ್ನೂರು ಸ್ವಾಮಿಜಿಗಳು ಬೆಂಬಲ ಕೊಟ್ಟಿದ್ದಾರೆ.

ಲಿಂಬಿಕಾಯಿ ಅವ್ರು ಕಾರಕೂನ ಆಗ್ತಾರಾ?

ಬಾಲೆಹೊಸರಿನ ಮಠ ಅಭಿವೃದ್ಧಿ ಆಗಿದೆ, ಮೋಹನ ಲಿಂಬಿಕಾಯಿಯನ್ನ ನನ್ನ ಮಠದ ಕಾರಕೂನ ಆಗಿ ಇಟ್ಟುಕೊಳ್ಳುವ ಮಟ್ಟಕ್ಕೆ ದಿಂಗಾಲೇಶ್ವರಮಠ ಬೆಳೆದಿದೆ.
ಮೋಹನ್ ಲಿಂಬಿಕಾಯಿ ನನ್ನ ‌ಮಠದ ಕಾರಕೂನ ಆಗಲಿ ಅವರಿಗೆ ಮಠವನ್ನ ನೋಡಿಕೊಳ್ಳಲು ಬಿಡುತ್ತೇನೆ. ಬಹಳ ದಿನಗಳ ಬಳಿಕ ಮೂರು ಸಾವಿರ ಮಠದ ಉನ್ನತ ಮಟ್ಟದ ಸಮೀತಿ ಸದಸ್ಯರು ಮಾತನಾಡಿದ್ದಾರೆ. ಮೋಹನ್ ಲಿಂಬಿಕಾಯಿ ಮುಖ್ಯಮಂತ್ರಿಗಳಿಗೆ ಕಾನೂನು ಸಲಹೆಗಾರರು. ಆದರೆ ಕಾನೂನು ಸಲಹೆಗಾರರಿಗೆ ಕಾನೂನಿಗೆ ಜ್ಞಾನದ ಕೊರತೆ ಇದೆಯೇ? ಮೋಹನ ಲಿಂಬಿಕಾಯಿ ಅವರು ದಿಂಗಾಲೇಶ್ವರ ಶ್ರೀಗಳು ‌ಮೂರು ಸಾವಿರ ಮಠಕ್ಕೆ ‌ಏನೂ ಸಂಬಂಧ ಎಂದು ಹೇಳಿದ್ದಾರೆ. ಇದೆ ಮೋಹನ್ ಲಿಂಬಿಕಾಯಿ ಒಂದು ಕಾಗದ ಮೇಲೆ ಸಹಿ ಹಾಕಿದ್ದಾರೆ. ಈ ಕಾಗದ ನನಗೂ ಮತ್ತು ಮೂರು ಸಾವಿರ ಮಠಕ್ಕೆ ಏನು ಸಂಬಂಧ ಎಂಬುದನ್ನು ಹೇಳುತ್ತದೆ. ನನಗೂ ಮೂರು ಸಾವಿರ ಮಠಕ್ಕೆ ಏನೂ ಸಂಬಂಧ ಎಂಬುದಕ್ಕೆ ಈ ದಾಖಲೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ.

ಉದಾಸಿ ಕುಮಾರೇಶ್ವರ ಮಠವನ್ನು ನಾಶ ಮಾಡಿದ್ದಾರೆ

ಮೂರು ಸಾವಿರ ಮಠದ ಇತಿಹಾಸವನ್ನು ಯಾರು ತಿಳಿದುಕೊಳ್ಳುತ್ತಾರೋ ಅವರಿಗೆ ನನ್ನ ಬಗ್ಗೆ ತಿಳಿಯುತ್ತದೆ. ಆದರೆ ಮೂರು ಸಾವಿರ ಮಠದ ಆಸ್ತಿಯ ಮೇಲೆ ಕಣ್ಣು ಹಾಕಿದವರಿಗೆ ನಾನು ಯಾರು ಎಂಬುದು ತಿಳಿಯುವುದಿಲ್ಲ.
ನನ್ನ ಮಠಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಅವರು ಸಹ ಸಮಿತಿಯಲ್ಲಿದ್ದವರು. ಮೂರು ಸಾವಿರ ಮಠದ ಆಸ್ತಿಯನ್ನು ಕಾನೂನು ‌ಬಾಹಿರವಾಗಿ ಆಸ್ತಿ ಮಾರಾಟ ಮಾಡಿಲ್ಲ ಎಂದು ಲಿಂಬಿಕಾಯಿ ಹೇಳುತ್ತಾರೆ. ಆಸ್ತಿಯನ್ನು ಕಾನೂನಿನ ಪ್ರಕಾರ ಮಾರಾಟ ಮಾಡುವ ಅಧಿಕಾರವನ್ನ ನಿಮಗೆ ಯಾರು ಕೊಟ್ಟರು. ಈ ಮಠದ ಸ್ಥಿರಾಸ್ತಿ, ಆಸ್ತಿಗಳನ್ನ ಮಾರಾಟ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ.
ಇದಕ್ಕೆ ‌ಈಗಿರುವ ಶ್ರೀಗಳು ಸಹಿ ಹಾಕಿದ್ದಾರೆ‌. ಮೂರು ಸಾವಿರ ಮಠದ ಜೊತೆಗೆ ಹಾನಗಲ್ ಕುಮಾರಸ್ವಾಮಿ ಮಠದವನ್ನ ನಾಶ ಮಾಡಿದ್ದು ಸಿಎಂ ಉದಾಸಿ. ಸಿಎಂ ಉದಾಸಿ ಹಾನಗಲ್ ಮಠವನ್ನ ನಾಶ ಮಾಡಿದ್ದರ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೆನೆ. ಮೂರು ಸಾವಿರ ಮಠದಲ್ಲಿಯೇ ಈ ಕುರಿತಾದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಸದ್ಯದಲ್ಲೇ ಎಲ್ಲಾ ದಾಖಲೆಗಳನ್ನು ‌ಮಠಕ್ಕೆ ತೆಗೆದುಕೊಂಡು ಬಂದೆ ಬರುತ್ತೇನೆ. ಶಂಕರಣ್ಣ ಮುನವಳ್ಳಿಯವರು 24 ಎಕರೆಯ ಆಸ್ತಿಯ ಬೆಲೆ 2 ಕೋಟಿ ರೂಪಾಯಿ ಎಂದು ಹೇಳುತ್ತಾರೆ.

ಭಿಕ್ಷೆ ಬೇಡಿ 2 ಕೋಟಿ ಕೊಡುವೆ

ಆದರೆ ನಾನು 2 ಕೋಟಿ ರೂಪಾಯಿ ಭಿಕ್ಷೆ ಬೇಡಿ ನಿಮಗೆ ಕೊಡುತ್ತೇನೆ. ಮೂರು ಸಾವಿರ ಮಠದ ಆಸ್ತಿ ಮಠಕ್ಕೆ ಬಿಟ್ಟ ಕೊಡಿ. 2.86 ಕೋಟಿ ರೂಪಾಯಿ ಹಣವನ್ನ ಸ್ಟಾಂಪ್ ಡ್ಯೂಟಿ ‌ಮಾಡಲು ಕಟ್ಟಿದ್ದಾರೆ. ದಾನಪತ್ರ ನೋಂದ ಮಾಡಲು ಇಷ್ಟು ಹಣವನ್ನ ಕೊಟ್ಟಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿಗೆ 2.86 ಕೋಟಿ ಹಣವನ್ನ ಸ್ಟಾಂಪ್ ಡ್ಯೂಟಿ ಮಾಡಲು ಕಟ್ಟಿದ್ದು ಏಕೆ…? ಎಂದು ಪ್ರಶ್ನಿಸಿದರು.

ಸುಳ್ಳಿನ ಸಂಘ ಕಟ್ಟಿಕೊಂಡಿದ್ದಾರಂತೆ ಮುನವಳ್ಳಿ

ಶಂಕರಣ್ಣ ಮುನವಳ್ಳಿ ಸುಳ್ಳಿನ ಸಂಘವನ್ನ ಕಟ್ಟಿಕೊಂಡು, ಸುಳ್ಳಿನ ಸಂತೆ ನಡೆಸುತ್ತಿದ್ದಾರೆ. ಮೂರು ಸಾವಿರ ಮಠ ಪೂರ್ಣ ಖಾಲಿಯಾಗಿದೆ. ಬಸವರಾಜ ಹೊರಟ್ಟಿ ಅವರಿಗೆ ಮಠದ ಬಗ್ಗೆ ಕಾಳಜಿ ಇದ್ದರೆ ಮಠದ ಆಸ್ತಿ ಮಠಕ್ಕೆ ಮರಳಿಸಲು‌ ಮುಂದಾಗಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ದಿಂಗಾಲೇಶ್ವರ ಶ್ರೀಗಳ ಜೊತೆ 8 ಸ್ವಾಮಿಜಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ತವರು ಜಿಲ್ಲೆಯ ಆರೋಗ್ಯ ಇಲಾಖೆ ಕಾರ್ಮಿಕನಿಗೆ ನ್ಯಾಯ ವದಗಿಸುವರೆ ಸಚಿವ ಶ್ರೀರಾಮುಲು..?

ಸ್ವತಃ ತಮ್ಮ ತವರು ಜಿಲ್ಲೆಯಲ್ಲಿಯೇ ಕಾರ್ಮಿಕನೊಬ್ಬನಿಗೆ ಅದರಲ್ಲೂ ತಮ್ಮ ಇಲಾಖೆಯಲ್ಲಿಯೇ ಆದ ಅನ್ಯಾಯವನ್ನು ಆರೋಗ್ಯ ಸಚಿವ ಶ್ರೀರಾಮುಲು ಸರಿ ಪಡಿಸುತ್ತಾರಾ?

ಅತಿವೃಷ್ಟಿಯಿಂದ ರಾಜ್ಯದಲ್ಲಾದ ನಷ್ಟ ಎಷ್ಟು ಗೊತ್ತಾ..?

ಮೈಸೂರು : ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ ರೂ. 9,952 ಕೋಟಿಯಷ್ಟು ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್!: ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು: ರಾಜ್ಯದಲ್ಲಿಂದು 1498 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು‌ ಸೋಂಕಿತರ ಸಂಖ್ಯೆ 26815 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 571. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 11098 ಕೇಸ್ ಗಳು. ರಾಜ್ಯದಲ್ಲಿ 15297 ಸಕ್ರೀಯ ಪ್ರಕರಣಗಳಿವೆ.

ಸರಕಾರಿ ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಅನಿರ್ಧಿಷ್ಟಾವಧಿ ಧರಣಿ

ಉತ್ತರಪ್ರಭ ಸುದ್ದಿ ಮಸ್ಕಿ: ತಾಲೂಕಿನ ಉಸ್ಕಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಗ್ರಾಮಸ್ತರು ಮತ್ತು ವಿದ್ಯಾರ್ಥಿಗಳು…