ಶಿರಹಟ್ಟಿ: ಕಾರ್ಯಕರ್ತರ ಉತ್ತಮ ಕಾರ್ಯದಿಂದ ಪಕ್ಷ ಉತ್ತುಂಗಕ್ಕೆರಿದ್ದು, ನೂತನ ಪದಾಧಿಕಾರಿಗಳು ಪಕ್ಷ, ಸರ್ಕಾರ ಹಾಗೂ ಜನರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುವುದರ ಮೂಲಕ ಪಕ್ಷದ ಸಂಪೂರ್ಣ ಬಲವರ್ಧನೆಗೆ ಶ್ರಮಿಸಬೇಕು ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ನಡೆದ ನಗರ ಘಟಕದ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ತತ್ವ, ಸಿದ್ಧಾಂತ, ನಿಷ್ಠೆ ಹಾಗೂ ಸಂಘಟನೆಯ ಅಡಿಯಲ್ಲಿ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪ್ರಿಯ ಯೋಜನೆಗಳ ಮಾಹಿತಿಯನ್ನು ಜನರಿಗೆ ತಿಳಿಸಿ, ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಹೇಳಿದರು.

ಒಂದು ಕಾಲದಲ್ಲಿ ಬಿಜೆಪಿ ಪಕ್ಷ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಿತ್ತು, ಆದರೆ ಇಂದು ಸಾಮಾನ್ಯ ಕಾರ್ಯಕರ್ತರ ಅವಿರತ ಶ್ರಮದಿಂದ ಬಿಜೆಪಿ ಪಕ್ಷ ಬಲಿಷ್ಠವಾಗಿದ್ದು, ದೇಶದ ರಕ್ಷಣೆ ಹಾಗೂ ಸಮಗ್ರ ಪ್ರಗತಿಗೆ ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಭಾರತಕ್ಕೆ ಸಿಕ್ಕಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಪ್ರತಿ ಬೂತ್ ಮಟ್ಟದಲ್ಲೂ ಸಂಘಟನೆ ಹಾಗೂ ನಿರಂತರ ಕೆಲಸ ಮಾಡುವುದರ ಮೂಲಕ ಪಕ್ಷದ ಸಂಪೂರ್ಣ ಬಲವರ್ಧನೆಗೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ತಾಲೂಕಾಧ್ಯಕ್ಷ ಫಕ್ಕೀರೇಶ ರಟ್ಟಿಹಳ್ಳಿ, ನಗರ ಘಟಕದ ಅಧ್ಯಕ್ಷ ರಾಮಣ್ಣ ಕಂಬಳಿ, ಸಿ.ಸಿ. ನೂರಶಟ್ಟರ, ದೀಪು ಕಪ್ಪತ್ತನವರ, ನಾಗರಾಜ ಕುಲಕರ್ಣಿ, ನಾಗರಾಜ ಲಕ್ಕುಂಡಿ, ಶ್ರೀನಿವಾಸ ಬಾರಬಾರ, ಎಚ್.ಎಂ. ದೇವಗಿರಿ, ಪ್ರಕಾಶ ನರಗುಂದೆ, ರವಿ ಹಳ್ಳಿ, ಈರಣ್ಣ ಕೋಟಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ದೇವಿ ಪುರಾಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ

ಕೋವಿಡ್-19 ಹಿನ್ನಲೆಯಲ್ಲಿ ದೇವಿಯ ಪುರಾಣ ಸರಳವಾಗಿ ಆರಚಣೆ ಮಾಡಲಾಗುತ್ತಿದೆ. ಪುರಾಣಕ್ಕೆ ಆಗಮಿಸುವ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಗಚ್ಚಿನಮಠದ ವರರುದ್ರಮುನಿ ಶಿವಚಾರ್ಯ ಸ್ವಾಮೀಜಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಸದ್ಯದ ಆಸ್ತಿ ಎಷ್ಟು ಗೊತ್ತಾ?

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷಕ್ಕಿಂತಲೂ ಈ ವರ್ಷ ಶ್ರೀಮಂತರಾಗಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿಯ ಮೌಲ್ಯ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಾಗಿದೆ. ಈ ವರ್ಷ ಅವರ ಆಸ್ತಿಯ ಮೌಲ್ಯ ರೂ. 36 ಲಕ್ಷ ಹೆಚ್ಚಳವಾಗಿದೆ.

ಮತ್ತು ಬರುವ ಔಷಧಿ ನೀಡಿ ನಟಿಯ ಮೇಲೆ ಅತ್ಯಾಚಾರ!

ಬೆಂಗಳೂರು : ಮತ್ತು ಬರುವ ಔಷಧಿ ಕುಡಿಸಿ ನಟಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಗರದಲ್ಲಿ…

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ, 80 ಹಾಗೂ 63…