ಗದಗ: ಇತ್ತಿಚೆಗೆ ಕಲಬುರಗಿಯಲ್ಲಿ ನಡದ ಘಟನೆಯಲ್ಲಿ ಗೋಂಧಳಿ ಸಮಾಜದ ಸುರೇಶ್ ಎಂಬ ವ್ಯಕ್ತಿ ಕೊಲೆಯಾಗಿದ್ದು, ಸರ್ಕಾರ ತನ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಗೋಂಧಳಿ ಸಮಾಜದ ರಾಜ್ಯಾಧ್ಯಕ್ಷ ವಿಠಲ್ ಗಣಾಚಾರಿ ಒತ್ತಾಯಿಸಿದರು.

ಅವರು ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮ ನಿವಾಸಿ ಸುರೇಶ ಬುಡಬುಡಕಿ ಹಾಗೂ ಜ್ಯೋತಿಷ್ಯ ಹೇಳುವ ಕಾಯಕ ಮಾಡುತ್ತಿದ್ದರು. ಏಳು ಜನ ಅನ್ಯಕೋಮಿ ಯುವಕರು ಸಣ್ಣ ಕಾರಣಕ್ಕೆ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ ಎಂದು ಕಿಡಿಕಾರಿದರು.  

ಸುರೇಶ್ ಸಾವು ಸಮಾಜದಲ್ಲಿ ಮಾನವಿಯತೆ ಹುಡುಕುತ್ತದೆ. ಇನ್ನು ಮುಖ್ಯವಾಗಿ ಈ ಪ್ರಕರಣದಲ್ಲಿ ಕಲಬುರಗಿ ಪೋಲಿಸ್ ವ್ಯವಸ್ಥೆ ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಇಡೀ ಕುಟುಂಬ ಆರ್ಥಿಕವಾಗಿ ಸುರೇಶ್ ಅವರ ಮೇಲೆ ಅವಲಂಭಿತವಾಗಿತ್ತು. ಇದೀಗ ಸುರೇಶ್ ಕೊಲೆಯಿಂದ ಕುಟುಂಬವೂ ಬೀದಿಗೆ ಬರುವಂತಾಗಿದೆ. ಹೀಗಾಗಿ ಸರ್ಕಾರ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಒಂದು ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗೋಂಧಳಿ ಸಮಾಜದ ಮುಂಡರಗಿ ತಾಲೂಕ ಅಧ್ಯಕ್ಷ ದುರಗೊಜಿ ಗಣಾಚಾರಿ, ಪುಂಡಲೀಕ ಪಾರ್ಗೆ, ದುರಗಪ್ಪ ವಾಡಗನ್ ಲಕ್ಷಣ್ ಡಾರ್ಗೆ, ಮಂಜುನಾಥ ಗಾಡಕರ್, ಬಾಳಪ್ಪ ಮುಖ್ಯೆ, ಸಮಾಜದ ಜಿಲ್ಲಾ ಅಧ್ಯಕ್ಷ ಸಹದೇವ ಗಣಾಚಾರಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಆಗ್ರಹಿಸಿ ಮನವಿ.

ಉತ್ತರಪ್ರಭ ಸುದ್ದಿ ನರಗುಂದ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಸಾಮಾನ್ಯ ವ್ಯವಸ್ಥೆಗಳು…

ಸರಿಯಾಗಿ ಕರ್ತವ್ಯ ನಿರ್ವಹಿಸದ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಿರುದ್ಧ ಕಠಿಣ ಕ್ರಮ – ಡಾ.ಸುಧಾಕರ್

ರಾಯಚೂರು: ಒಪೆಕ್ ಆಸ್ಪತ್ರೆಯನ್ನು ದುಃಸ್ಥಿತಿಯಿಂದ ಮುಕ್ತಗೊಳಿಸಿ ಅದನ್ನು ಗುಣಮಟ್ಟದ ಶ್ರೇಷ್ಠ ಆಸ್ಪತ್ರೆಯಾಗಿ ಪರಿವರ್ತಿಸಲು ಶ್ರಮಿಸುವಂತೆ ವೈದ್ಯಕೀಯ…

ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಛಾಟಿಸಬೇಕು – ಅಖಂಡ ಶ್ರೀನಿವಾಸಮೂರ್ತಿ

ಬೆಂಗಳೂರು : ಮಾಜಿ ಮೇಯರ್ ಸಂಪತ್ ರಾಜ್ ರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದಾರೆ.

ಶಬರಿಮಲೈ ಯಾತ್ರಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ಅಯ್ಯಪ್ಪಸ್ವಾಮಿ ದೇಗುಲ ಶಬರಿಮಲೈಗೆ ಹೋಗುವ ಮುನ್ನ ಭಕ್ತಾದಿಗಳಿಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.