ಪ್ರಯಾಗ್‌ರಾಜ್: ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು. ಆದ್ರ ಇಲ್ಲೊಂದು ಜೋಡಿ ಸ್ವರ್ಗದಾಗ ಮದ್ವಿ ನಿಶ್ಚಿಯ ಆಗಿರತೈತಿ ಅನ್ನೋ ಮಾತಿಗೆ ಜೀವಾ ತುಂಬ್ಯಾರ.

ಹೌದ್ರಿ, ಇನ್ನೇನು ಸ್ವಲ್ಪ ಹೊತ್ತಿನ್ಯಾಗ, ಅಂದುಕೊಂಡಂಗ ಆಗಿದ್ರ, ಗಟ್ಟಿ ಮ್ಯಾಳದ ಸದ್ದಿನ್ಯಾಗ, ತಾಳಿ ಕಟ್ಟಿ ಜೋಡಿ ಒಂದಾಗುತ್ತಿತ್ತು. ಮದ್ವಿಗೆ ಬಂದೋರೆಲ್ಲ ಅಕ್ಕಿಕಾಳ್ ಹಾಕಿ ಹೊಟ್ಟಿ ತುಂಬಾ ತಿಂದು ಹರಿಸಿ ಹೋಗತಿದ್ರು. ಆದ್ರ ಇಲ್ಲಿ ಹಂಗಾಗಲಿಲ್ಲ. ತಾಳಿ ಕಟ್ ಬೇಕು ಅನ್ನೋ ಸ್ವಲ್ಪ ಹೊತ್ತಿಗೆ ಮುಂಚೆ ಇನ್ನೇನು ತಾಳಿಗೆ ಕೊರಳೊಡ್ಡಬೇಕಾದ ಕನ್ಯಾ, ಛಾವಣಿ ಮ್ಯಾಗಿಂದ ಬಿದ್ ಬೆನ್ನಹುರಿಗೆ ಪೆಟ್ ಆಗಿ ಆಸ್ಪತ್ರೆ ಸೇರುವಂಗಾಯಿತು. ಪಾಪ ದಾಂಪತ್ಯಕ್ ಜೊತಿಯಾಗಿ ಏಳು ಹೆಜ್ಜಿ ಹಾಕಬೇಕಾದ ವರ ಆಸ್ಪತ್ರೆ ಕಡಿಗೆ ಹೆಜ್ಜಿ ಹಾಕುವಂಗಾತು.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯಲ್ಲಿ ಈ ಘಟನೆ ನಡೆದೈತಿ ಮದುವೆ ಮಂಟಪದಲ್ಲಿ ವಧು ಛಾವಣಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ.

ಪಾಪ, ಆಸ್ಪತ್ರೆ ಹಾಸಿಗೆ ಮ್ಯಾಲ ಮಲಗಿದ್ ವಧುವಿಗೆ ಅಲ್ಲೆ ತಾಳಿ ಕಟ್ಟೊ‌ ಮೂಲಕ, ವರ ಮಾನವೀಯತೆ ಮೆರದಾನ.
ಆಕಿ ಆರಾಮ್ ಆಗಬೇಕು ಅಂದ್ರ ಟೈಮ್ ಬೇಕು ಅಂತ ಡಾಕ್ಟರ್ ಹೇಳಿದ್ರು. ಆದ್ರು ಪಾಪ ತನಗ ನೆಚ್ಚಿ ಕೈಹಿಡಿಯಾಕ್ ಮುಂದಾದಾಕಿಗೆ ಕೈಬಿಡೊದ್ ಬ್ಯಾಡ್ ಅಂತ ದವಾಖಾನಿ ಬೆಡ್ ಮ್ಯಾಲಾ ತಾಳಿ ಕಟ್ಟಿ ಸೈ ಎನಿಸಿಕೊಂಡಾನ. ತಾಳಿ ಕಟ್ಟಿದ ಅವಧೇಶ್, ಕಷ್ಟದ ಸಮಯದೊಳಗ ಆಕೆಯ ಜೊತೆಗಿರುವುದು ನನ್ನ ಧರ್ಮ ಅಂತ ಹೇಳಿ ದೊಡ್ಡ ಮನುಷಾ ಆಗ್ಯಾನ. ಎಷ್ಟೆಲ್ಲ ಕನಸ್ ಕಟ್ಕೊಂಡ್ ಕುಂತಿದ್ ಆರತಿ ತನ್ ಗಂಡನ ಮಾನವೀಯತೆ ಕಂಡು ಭಾವುಕಳದ್ಲಂತ. ಇಬ್ರು ನಡುವಿನ ಬಾಂಧವ್ಯಕ್ ನಮ್ ಆಸ್ಪತ್ರೆ ಬೆಸುಗೆ ಹಾಕಿದ್ದು ನಮಗ ಭಾಳ್ ಖುಷಿ ತಂದೈತಿ ಅಂತ ಆಸ್ಪತ್ರೆ ಡಾಕ್ಟರ್ ಹೇಳ್ಯಾರ. ಹೆಚ್ಚಿನ ಪ್ರಯತ್ನ ಮಾಡಿ ಆದಷ್ಟು ಶೀಘ್ರ ಗುಣಮುಖರಾಗುವಂತೆ ಪ್ರಯತ್ನ ಮಾಡತಿವಿ ಅಂತ ಡಾಕ್ಟರ್ ಹೇಳ್ಯಾರ.

Leave a Reply

Your email address will not be published. Required fields are marked *

You May Also Like

ಅಬ್ಬಾ…! ಮಹಾರಾಷ್ಟ್ರದಲ್ಲಿ ಎಷ್ಟು ಜನ ಪೊಲೀಸರಿಗೆ ಕೊರೊನಾ ಬಂದಿದೆ ಗೊತ್ತಾ?

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಮಿತಿ ಮೀರುತ್ತಿದೆ. ಕೊರೊನಾ ವಾರಿಯರ್ಸ್ ನ್ನು ಅದು…

ಲಕ್ಷ್ಮೇಶ್ವರದಲ್ಲಿ ಅನಗತ್ಯ ಓಡಾಡುವವರಿಗೆ ಮಹಮ್ಮದ್ ಗೌಸ್ ಅವರಿಂದ ವಾರ್ನಿಂಗ್

ಐದು ದಿನದ ಕಾಲ ನಗರದಲ್ಲಿ ಕಠಿಣ ಲಾಕ್ಡೌನ್ ವಿಧಿಸಲಾಗಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದಲ್ಲಿ ಲಾಕ್ಡೌನ್ ಸ್ಥಿತಿಗತಿಯನ್ನು ಪರಿಶೀಲನೆ ಮಾಡಲು ಜಿಲ್ಲಾ ಪರೀಕ್ಷಾರ್ಥ ಅಸಿಸ್ಟೆಂಟ್ ಕಮಿಷನರ್ ಮಹಮ್ಮದ್ ಗೌಸ್ ಕೈಸರ್ ಭೇಟಿ ನೀಡಿದ್ದರು.

ಚಸ್ ಅಲ್ಲೋ ಮಾರಾಯ ಚೀಯರ್ಸ್ ಅನ್ನು ಶು..!! ಇಂಗ್ಲೀಷ್ ಬ್ಯಾಡ ಕನ್ನಡದಾಗ ಹೇಳು..!

ಶು..!, ಕರ್ನಾಟಕದಾಗ ಹುಟ್ಟಿ ಚೆಸ್ ಅಂತ ಇಂಗ್ಲೀಷ್ ನ್ಯಾಗ್ ಹೇಳ ಬ್ಯಾಡ್ರಿ ಅಂದ, ಕನ್ನಡಾಭಿಮಾನಿಗಳು ಯಾರಾದ್ರು ಕೇಳಿಸಿಕೊಂಡ್ರ ಕುಡುಕರೆಲ್ಲ ಕನ್ನಡ ಬಿಟ್ಟು ಇಂಗ್ಲೀಷ್ ಮಾತಾಡಾಕತ್ಯಾರ ಅಂತ ಸ್ಟ್ರೈಕ್ ಮಾಡಿ ಬಾರ್ ಬಂದ್ ಮಾಡಿಸಿಗಿಡಿಸ್ಯಾರೋ ಮಾರಾಯ್ರ.

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ

ಗದಗ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್: ಫಿಲ್ಡಿಗಿಳಿದ ಡಿವೈಎಸ್ಪಿ ಗದಗ: ಕೊರೊನಾ ನಿಯಂತ್ರಣ ಹಿನ್ನೆಲೆ ಐದು‌ ದಿನಗಳ ಕಾಲ ಗದಗ ಜಿಲ್ಲೆಯಲ್ಲಿ ಕಠೀಣ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆ ಶುಕ್ರವಾರ ವಿನಾಕಾರಣ ರಸ್ತೆಗಿಳಿದವರ ಬೈಕ್ ಸೀಜ್ ಮಾಡಲಾಯಿತು. ಸ್ವತ: ಡಿವೈಎಸ್ಪಿ ಫಿಲ್ಡಿಗಿಳಿದು ಬೈಕ್ ಸವಾರರಿಗೆ ತರಾಟೆಗೆ ತೆಗೆದುಕೊಂಡ ದೃಷ್ಯಗಳು ಕಂಡು ಬಂದವು. ರಿಪೋರ್ಟರ್ ಎಂದು ಸುಳ್ಳು ಹೇಳಿದ ವ್ಯಕ್ತಿ, ನಕಲಿ‌ ಪತ್ರಕರ್ತ ಎಂದು ತಿಳಿದ ತಕ್ಷಣ ಬೈಕ್ ವಶಕ್ಕೆ ಪಡೆಯಲಾಯಿತು.