ಗಣೇಶ ಚತುರ್ಥಿ’ ಬಂತೆಂದರೆ ದೇಶಾದ್ಯಂತ ಎಲ್ಲಿಲ್ಲದ ಸಂಭ್ರಮ. ಮನೆ ಮನಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ, ಬೀದಿ ಬೀದಿಯಲ್ಲಿ ಬಾಲ ಗಣೇಶನಿಂದ ಹಿಡಿದು ಬೃಹತ್ ಗಣೇಶ ಮೂರ್ತಿ ಕೂರಿಸಿ ಬಪ್ಪರೇ ಬಪ್ಪಾ, ಗಣಪತಿ ಬಪ್ಪಾ: ಗಣಪ್ ಗಣಪ್ ಮೋರಯಾ.. ಎಂಬ ಹರ್ಷೋದ್ಘಾರ ಮೊಳಗುತ್ತಿತ್ತು. 

ದುರಾದೃಷ್ಟವಶಾತ್! ಕೋವಿಡ್-19 ಸೋಂಕಿನ ಕರಾಳ ನೆರಳು ಈ ಬಾರಿಯ ಗೌರಿ ಗಣೇಶ ಹಬ್ಬದ ಮೇಲಾವರಿಸಿದೆ. ದೇಶದಲ್ಲಿ ಯುಗಾದಿ, ದೀಪಾವಳಿಯಂತಹ ಪ್ರಮುಖ ಹಬ್ಬಗಳಂತೆ ಗಣೇಶ ಚತುರ್ಥಿಯೂ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುವ ಹಿಂದೂಗಳ ಸಾಂಪ್ರದಾಯಿಕ ಹಬ್ಬ.

ಗಣೇಶ ವಿದ್ಯೆ ಮತ್ತು ಜ್ಞಾನದ ಅಧಿಪತಿ. ಅಲ್ಲದೇ, ಸಂಪತ್ತು, ಅದೃಷ್ಟದ ಅಧಿನಾಯಕನಾದ ಮೂಷಿಕ ವಾಹನನ ಜನನ ಸಾರುವ ಧಾರ್ಮಿಕ ಹಬ್ಬ. ಸಾಮಾನ್ಯವಾಗಿ ಈ ಹಬ್ಬಕ್ಕೆ ಗೌರಿ-ಗಣೇಶ ಚತುರ್ಥಿ, ಗಣೇಶ ಚೌತಿ ಹಾಗೂ ವಿನಾಯಕ ಚತುರ್ಥಿ ಎಂಬಿತ್ಯಾಧಿ ಹೆಸರುಗಳಿಂದ ಕರೆಯಲ್ಪಡುತ್ತದೆ. ವಿಶೇಷವಾಗಿ ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ ರಾಜ್ಯದಲ್ಲಿ ಹೆಚ್ಚು ವಿಜೃಂಭಣೆಯಿಂದ ಆಚರಿಸುತ್ತಾರೆ.

ಶಿವನ ಕುಟುಂಬವೊಂದು ಅಪೂರ್ವ ರೂಪಕ. ಅದರಲ್ಲಿ ವಿಘ್ನ ನಿವಾರಕ ಗಣೇಶನ ವಿಶ್ವರೂಪ ಅತ್ಯದ್ಭುತ. ಶಿವ ಪಾರ್ವತಿಯವರ ಪುತ್ರ ಗಣಪತಿ ಪಾರ್ವತಿಯ ದೇಹದ ಮಣ್ಣಿನಿಂದ ರೂಪಗೊಂಡಿದ್ದಾನೆ ಎಂಬ ಪ್ರತೀತಿ ಇದೆ. ಈ ಬಗ್ಗೆ ಪುರಾಣ ಕಥೆಗಳಲ್ಲಿ ಉಲ್ಲೇಖವಿದೆ.

ಯಾವುದೇ ಶುಭಕಾರ್ಯ ಕೈಗೊಳ್ಳುವುದಕ್ಕೂ ಮುನ್ನ ಸಂಕಷ್ಟ ಪರಿಹಾರ ಗಣಪನನ್ನು ನೆನೆಯುವುದು ವಾಡಿಕೆ. ಹಿಗಾಗಿ ಗಣೇಶ ಚತುರ್ಥಿ ಆಚರಣೆಯ ಮೂಲಕ ಜನರಲ್ಲಿ ಜಾಗೃತಿ, ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆ, ಜಾತೀಯತೆ ತೊಲಗಿಸುವ ಸಂಕಲ್ಪಕ್ಕೂ ಗಣೇಶೋತ್ಸವ ಕಾರಣವಾಗಿದೆ. 

ಪ್ರಸಕ್ತ ವರ್ಷದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯು ಜನರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿರಿಸಿ ಷರತ್ತಿಗೊಳಪಟ್ಟು ಗೌರಿ-ಗಣೇಶ ಹಬ್ಬ ಅತ್ಯಂತ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಾರ್ವಜನಿಕ ಸ್ಧಳಗಳಲ್ಲಿ  ಗೌರಿ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಪರಿಸರ ಸ್ನೇಹಿ ಗಣಪತಿ ಪೂಜಿಸುವ ಸಂಸ್ಕೃತಿ ಪರಿಚಯಿಸೋಣ.

ಅದರಂತೆ ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸೋಣ. ಆಗಸ್ಟ್ 21 ರಿಂದ ಆಚರಿಸಲಾಗುವ ಗೌರಿ-ಗಣೇಶ ಹಬ್ಬದಲ್ಲಿ ಪಿಒಪಿ (ಪ್ಲಾಸ್ಟರ್ ಆಪ್ ಪ್ಯಾರಿಸ್), ವಿಷಕಾರಿ ರಾಸಾಯನಿಕ ಹಾಗೂ ಲೋಹ ಲೇಪಿತ ಗಣೇಶ ಮೂರ್ತಿಗಳನ್ನು ಕೂರಿಸಿ ಪೂಜಿಸುವ ಬದಲಾಗಿ ಜೇಡಿ ಮಣ್ಣಿನಿಂದ, ನೈಸರ್ಗಿಕ ಬಣ್ಣ ಲೇಪಿತ, ಎಲೆ ಹೂವುಗಳಿಂದ ತಯಾರಿಸಿದ ನೈಸರ್ಗಿಕ ಗಣಪತಿ; ವೈರಾಣು ನಿರೋಧಕ ಶಕ್ತಿ ವೃದ್ಧಿಸುವ ಅರಿಶಿಣದಿಂದ ತಯಾರಿಸಿರುವ ಗಣೇಶನನ್ನು ಮನೆಯಲ್ಲಿಯೇ ತಯಾರಿಸಿ ಪೂಜಿಸಿ ಸಂಭ್ರಮಿಸಿ ಪರಿಸರ ಸಂರಕ್ಷಿಸೋಣ.

ಕೊರೊನಾ ಸೋಂಕು ಹರಡುವ ಭೀತಿ ಇದ್ದು; ಗಣೇಶ ಚತುರ್ಥಿಯಂದು ದೇವಸ್ಥಾನ, ಮನೆ ಅಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಟ ಸಂಖ್ಯೆಯೊಂದಿಗೆ ಆಚರಿಸುವುದು ಒಳಿತು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನಾ ಮೂರ್ತಿ ನಾಲ್ಕು ಹಾಗೂ ಮನೆಯೊಳಗೆ ಎರಡು ಅಡಿ ಮೀರದಂತೆ ಪ್ರತಿಷ್ಠಾಪಿಸಬೇಕು.

ಇಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಹಾಗೂ ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿ ಪಾಲಿಸುವುದರೊಂದಿಗೆ ಕೊರೊನಾ ನಿಯಂತ್ರಿಸಬೇಕು. ಪಾರಂಪರಿಕ ಗಣೇಶ ಉತ್ಸವಕ್ಕೆ ಗಣೇಶೋತ್ಸವ ಸಮಿತಿ, ಮಂಡಳಿಗಳು ಮೂರ್ತಿ ಪ್ರತಿಷ್ಟಾಪನೆಗೂ ಮುನ್ನ ಮುನಿಸಿಪಲ್ ಕಾರ್ಪೋರೇಶನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು.

ಸರ್ಕಾರದ ನಿರ್ದೆಶನದಂತೆ ಕೋವಿಡ್-19ನ ಸಂದಿಗ್ಧ ಪರಿಸ್ಥಿಯಲ್ಲಿ ಒಂದು ವಾರ್ಡ್ ಅಥವಾ ಗ್ರಾಮದಲ್ಲಿ ಒಂದೇ ಸಾರ್ವಜನಿಕ ಗಣೇಶೋತ್ಸವಕ್ಕೆ ಪ್ರೋತ್ಸಾಹಿಸುವುದು ಸೂಕ್ತ. ಇತ್ತೀಚೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದ್ದು ಮೂರ್ತಿ ಕೂರಿಸುವ ಸ್ಥಳಗಳಲ್ಲಿ ಇಪ್ಪತ್ ಜನಕ್ಕಷ್ಟೇ ಸೀಮಿತವಾದ ಆವರಣ ನಿರ್ಮಿಸಬೇಕಲ್ಲದೇ, ಜನಜಂಗುಳಿಯಾಗದಂತೆ ಕ್ರಮ ವಹಿಸಬೇಕು. 

ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಸಾಂಸ್ಕೃತಿಕ, ಸಂಗೀತ, ನೃತ್ಯ ಸೇರಿದಂತೆ ಯಾವುದೇ ತರಹದ ಮನರಂಜನಾ ಕಾರ್ಯಕ್ರಮ ಆಯೋಜನೆ, ಗಣೇಶ ಮೂರ್ತಿ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ಮಾಡಬಾರದೆಂಬ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಅದರಂತೆ, ಬಾವಿ, ಕೆರೆಯಲ್ಲಿ ಗಣಪತಿ ವಿಸರ್ಜಣೆ ಮಾಡುವುದರಿಂದ ಜಲಮಾಲಿನ್ಯ ಆಗುವುದರ ಜೊತೆಗೆ ರೋಗಗಳು ಹರಡುವ ಸಾದ್ಯತೆಗಳು ಹೆಚ್ಚಿವೆ. ಹೀಗಾಗಿ ಮನೆಯಲ್ಲಿ ಪ್ರತಿಷ್ಠಾಪಿಸಿದ ಪಾರಂಪರಿಕ ಗಣೇಶ ಮೂರ್ತಿ ಮನೆಗಳಲ್ಲಿ; ಸಾರ್ವಜನಿಕ ಪ್ರದೇಶಗಳಲ್ಲಿ ಕೂರಿಸಿದ ಗಣೇಶ ವಿಗ್ರಹಗಳನ್ನು ಸಮೀಪದ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ಹತ್ತಿರದ ಸ್ಥಳೀಯ ಸಂಸ್ಥೆಗಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ನಿರ್ಮಿಸಿರುವ ಹೊಂಡ, ಮೊಬೈಲ್ ಟ್ಯಾಂಕ್, ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ವಿಸರ್ಜಿಸುವ ಮೂಲಕ ಜಲಮಾಲಿನ್ಯ,ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯ ತಡೆಗಟ್ಟಬೇಕು. ಅಲ್ಲದೇ, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯೊಂದಿಗೆ ಸರಳತೆಯ ಜೊತೆಗೆ ಅರ್ಥಪೂರ್ಣ ಗಣೇಶ ಉತ್ಸವ ಆಚರಿಸೋಣ. ಸಮಸ್ತರಿಗೂ `ಗಣೇಶ ಚತುರ್ಥಿ’ ಹಬ್ಬದ ಶುಭ ಕಾಮನೆಗಳು…
                                            -ವಸಂತ ಬಿ.ಮಡ್ಲೂರ, ಜಿಲ್ಲಾ ವಾರ್ತಾಧಿಕಾರಿ (ಹೆ.ಪ್ರ), ಗದಗ

Leave a Reply

Your email address will not be published. Required fields are marked *

You May Also Like

ಕಷ್ಟಾ ಮಾಡೋದು ಭಾಳ್ ಕಷ್ಟ ಅಂತ ಕಷ್ಟದ ಅಂಗಡಿನಾ ಬಂದ್ ಮಾಡಿದ ತಿಪ್ಪಾ..!

ಅನೌನು ಎರಡ್ ತಿಂಗಳ್ ಹೊತ್ತಾತು ಗಡ್ಡದಾಗೂ ಸೀರ ಸೇರುವಂಗಾಗ್ಯಾವು, ಕೆರದ್ , ಕೆರದ್ ತಲಿ ಕೆಟ್ ಹೋಗೈತಿ. ಅದಕ್ ಇವತ್ತು ಕಷ್ಟದ ಅಂಗಡಿ ಚಾಲೂ ಅಂದಿದ್ದಕ್ಕ ನಾನು ದುಡಿಕಿಲೇ ಬಂದೇ ಅಷ್ಟರಾಗ್ ನೀನಾ ಅಂಗಡಿ ಕದಾ ಹಾಕ್ಕೊಂಡು ಹೊಂಟ್ಯಲ್ಲಾ ಅಂದ ಯಲ್ಲಾ.

ಯಪ್ಪಾ..!, ಗಂಡ ತನ್ನ ಜೊತಿ ಜಗಳಾ ಆಡಂಗಿಲ್ಲಾ ಅಂತ ಡಿವೋರ್ಸ್ ಕೇಳ್ಯಾಳಂತ!

ಗಂಡ-ಹೆಂಡರ ಜಗಳ ಗಂಧ ತೀಡಿದಂಗ ಅಂತಾರ. ಅಷ್ಟ ಯಾಕ, ಗಂಡ-ಹೆಂಡರ ಜಗಳ ಉಂಡು ಮಲಗೋ ತನಕ ಅಂತಾನೂ ಅಂತಾರ. ಆದ್ರ ಗಂಡ ತನ್ನ ಜೊತಿಗೆ ಜಗಳಾನ ಆಡವಲ್ಲಾ, ತನಗ ಭಾಳ್ ಪ್ರೀತಿ ಮಾಡ್ತಾನಾ ಅಂತ ಹೆಣ್ಮಗಳ ಒಬ್ಬಾಕಿ ಕೋರ್ಟ್ ಕಟ್ಟಿ ಹತ್ತಿದ ಕತಿ ಇದು..

ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ವಿರುದ್ಧ ಸತತ ನಾಲ್ಕು ದಿನಗಳಿಂದ(NSUI)ಉಪವಾಸ ಸತ್ಯಾಗ್ರಹ

ಉತ್ತರಪ್ರಭ ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ವಿರುದ್ಧ ಸತತ ನಾಲ್ಕು ದಿನಗಳಿಂದ…

ಅಂದು ವಿಶ್ವ ಕಪ್ ತಂದು ಕೊಟ್ಟ ತಂಡದಲ್ಲಿ ಕ್ರಿಕೆಟಿಗ ಯಶ್ ಪಾಲ್ ಇನ್ನಿಲ್ಲ!

ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.