ಹೊಮಿಯೊಪತಿಯಲ್ಲಿ ಕೊರೊನಾ ನಿಯಂತ್ರಣ ಹೇಗೆ? ಹೋಮಿಯೋಪತಿ ಅಂದರೆ ಏನು? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ಡಾ.ವೀರುಪಾಕ್ಷಪ್ಪ ಚಿಕ್ಕನರಗುಂದ (ಮೊ.9845376277) ಅವರೊಂದಿಗೆ ಡಾ.ಬಸವರಾಜ ಡಿ ತಳವಾರ (ಮೊ.9742058739) ಉತ್ತರಪ್ರಭಕ್ಕೆ ನಡೆಸಿದ ಸಂದರ್ಶನ ಇಲ್ಲಿದೆ ನೋಡಿ

ಸಂದರ್ಶಕ: ಚಳಿಗಾಲದಲ್ಲಿ ಕೊರೊನಾ ಹೆಚ್ಚಗುತ್ತದೆ ಎನ್ನುವ ಭಯ ಜನರಲ್ಲಿದೆ. ಮುಂಜಾಗೃತ ಕ್ರಮದ ಬಗ್ಗೆ ಹೋಮಿಯೊಪತಿಯಲ್ಲಿರುವ ವಿಧಾನ ಯಾವುದು?
ಡಾ.ವೀರುಪಾಕ್ಷಪ್ಪ: ಚಳಿಗಾಲದಲ್ಲಿ ಮನುಷ್ಯನ ದೇಹಕ್ಕೆ ಬರುವ ಹಾಗೂ ಬರಲೇಬೇಕಾದ ಕೆಲವೊಂದಿಷ್ಟು ರೋಗಗಳು ಇವೆ. ನೆಗಡಿ, ಕೆಮ್ಮು, ಜ್ವರ ಈ ಋತುಮಾನದಲ್ಲಿ ಬರುತ್ತವೆ. ಇದು ಪ್ರಕೃತಿಯ ನಿಯಮವೂ ಹೌದು. ಇದು ಹೆಚ್ಚಾಗದಂತೆ ಯಶಸ್ವಿಯಾಗಿ ನಿಯಂತ್ರಿಸುವುದೆ ವೈದ್ಯಕೀಯ. ಅದನ್ನು ನಮ್ಮ ಹೋಮಿಯೋಪತಿ ಮಾಡುತ್ತದೆ. ಪಾದದಿಂದ ತೆಲೆಯವರೆಗೂ ಇರುವ ದೇಹದ ಗುಣ, ಲಕ್ಷಣಗಳನ್ನು ಅಧ್ಯಯನ ಮಾಡಿ. ಅವುಗಳಿಗೆ ಅನುಗುಣವಾಗಿ ನಾವು ಔಷದೋಪಚಾರ ಮಾಡಲಾಗುತ್ತದೆ.

ಸಂದರ್ಶಕ: ಹೋಮಿಯೋಪತಿ ಅಂದರೆ ಏನು?
ಡಾ.ವೀರುಪಾಕ್ಷಪ್ಪ: ಸಮಗಳು ಸಮಗಳಿಂದಲೇ ಆರಾಮಾಗುವುದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವುದು, ವಜ್ರದಿಂದ ವಜ್ರವನ್ನು ತುಂಡರಿಸಿದ ಹಾಗೆ ನಾವು ಇಲ್ಲಿ ಕೆಲವೊಂದಿಷ್ಟು ವ್ಯಕ್ತಿಯ ಬದಲಾದ ದೈಹಿಕ ಲಕ್ಷಣಗಳ ಆಧಾರದ ಮೇಲೆ ಅವರಿಗೆ ಚಿಕಿತ್ಸೆ ನಿಡುತ್ತೇವೆ. ಹೋಮಿಯೋಪತಿಯಲ್ಲಿ ನಾವು ರೋಗಕ್ಕೆ ಚಿಕಿತ್ಸೆ ನೀಡುವುದಿಲ್ಲ ಇಲ್ಲಿ ವ್ಯಕ್ತಿಗೆ ಚಿಕಿತ್ಸೆ ನೀಡುತ್ತೇವೆ.

ಸಂದರ್ಶಕ: ಹೋಮಿಯೋಪತಿ ಭಾರತಕ್ಕೆ ಯಾವಾಗ ಬಂತು?
ಡಾ.ವೀರುಪಾಕ್ಷಪ್ಪ: ಪಂಜಾಬಿನಲ್ಲಿ ರಣಜಿತ್ ಸಿಂಗ್ ಎಂಬ ರಾಜ ಇದ್ದ. ಅವರು ವಾಸಿಯಾಗದ ದೊಡ್ಡ ರೋಗದಿಂದ ಬಳಲುತ್ತಿದ್ದರು. ತನ್ನ ರೋಗ ವಾಸಿ ಆಗುವ ಚಿಕಿತ್ಸೆ ನೀಡಿದರೆ ಅವನು ಬೃಹತ್ತ ಮೊತ್ತದ ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ. ಡಾ. ಭರ್ಗರ್ ಜರ್ಮನಿಯಿಂದ ಬಂದು ಅವರನ್ನು ಗುಣಪಡಿಸಿದ ಎನ್ನುವ ಇತಿಹಾಸ ನಮ್ಮ ಹೋಮೀಯೊಪತಿಗೆ ಇದೆ. ಇದು ಆಯುರ್ವೇದದಿಂದಲೂ ಸಾಧ್ಯವಾಗಿರಲಿಲ್ಲ.

ಸಂದರ್ಶಕ: ಆಯುರ್ವೇದದಲ್ಲಿ ತ್ರೀದೊಷ ಇರುವಂತೆ ಹೋಮಿಯೋಪತಿಯಲ್ಲಿ ಇದೇಯ?
ಡಾ.ವೀರುಪಾಕ್ಷಪ್ಪ: ಆಯುರ್ವೇದದಲ್ಲಿ ವಾತ, ಪಿತ್ತ, ಕಫ ರೋಗ ಗುರುತಿಸುವ ತ್ರೀದೊಷ ಲಕ್ಷಣ ಇರುವಂತೆ ಹೋಮಿಯೋಪತಿಯಲ್ಲಿ ಸೊರಾ, ಸಿಪಿಲಿಕ್ ಮತ್ತು ಸೈಕೊಸಿಸ್ ಎನ್ನುವ ರೋಗ ಗುರುತಿಸುವ ವ್ಯವಸ್ಥೆ ಇದೆ. ಸೊರಾ ಅಂದರೆ ಅನುವಂಶಿಯ, ಬಳುವಳಿಯಾಗಿ ಬಂದಿದ್ದು ಎನ್ನುವ ಅರ್ಥವಿದೆ. ಸಿಪಿಲಿಕ್ ಮತ್ತು ಸೈಕೊಸಿಸ್ ಇವುಗಳು ಕೂಡಾ ಹೋಮಿಯೋಪತಿಯಲ್ಲಿ ವಿಶಿಷ್ಟ ರೋಗ ಗುರುತಿಸುವ ಹೆಸರುಗಳೆ.

ಸಂದರ್ಶಕ: ಆಯುರ್ವೇದಕ್ಕೂ ಹೋಮಿಯೋಪತಿಗೂ ಇರುವ ವ್ಯತ್ಯಾಸವೇನು?
ಡಾ.ವೀರುಪಾಕ್ಷಪ್ಪ: ಎರಡರಲ್ಲಿಯೂ ಔಷದಿ ತಯಾರಿಸುವ ವಿಧಾನ ವಿಭಿನ್ನ. ಇತರ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಣಿಯ ಮೇಲೆ ಔಷದ ಪ್ರಯೋಗಿಸಿ ನಂತರ ಅದನ್ನು ಮನುಷ್ಯರಿಗೆ ನೀಡುತ್ತಾರೆ. ಆದರೆ ಹೋಮಿಯೋಪತಿಯ ಔಷದಿಗಳು ನೇರವಾಗಿ ಮನುಷ್ಯರ ಮೇಲೆ ಪ್ರಯೋಗ ಮಾಡಿದಂತವುಗಳು. ಅದು ಆರೋಗ್ಯವಂತರ ಮೇಲೆ ಪ್ರಯೋಗಿಸಿ, ಅವರಲ್ಲಾಗುವ ಗುಣ ಲಕ್ಷಣಗಳನ್ನು ನಾವು ಅಧ್ಯಯನ ಮಾಡುತ್ತೇವೆ.


ಸಂದರ್ಶಕ: ಔಷದಿಯನ್ನು ವೈದ್ಯರ ಸಲಹೆ ಮೆರೆಗೆ ತೆಗದುಕೊಳ್ಳೋದ ಒಳ್ಳೆಯದಾ?
ಡಾ.ವೀರುಪಾಕ್ಷಪ್ಪ: ಹೌದು ವೈದ್ಯಕೀಯ ಶಿಕ್ಷಣ ಪಡೆದ ವೈದ್ಯರ ಸಲಹೆ ಮೆರೆಗೆ ಔಷದ ತೆಗೆದುಕೊಳ್ಳಬೇಕು.ಅಲೋಪತಿಯಲ್ಲಿ ದೇಹದ ಒಂದು ಭಾಗಕ್ಕೆ ಒಂದೊAದು ಔಷದವಿದೆ. ಹೋಮಿಯೋಪತಿಯಲ್ಲಿ ಹಾಗಲ್ಲ. ಒಂದು ರೋಗಕ್ಕೆ ಒಂದೇ ಔಷದವಿದೆ. ಅದು ಕಾಲಗಳಿಗೆ ಅನುಗುಣವಾಗಿ ಬಂದ ರೋಗಗಳ ಆಧಾರ ಮೇಲೆ ಅದನ್ನು ತೆಗೆದುಕೊಳ್ಳುವ ಪ್ರಮಾಣದಲ್ಲಿ ಅದರ ಪಲಿತಾಂಶ ಇದೆ.

ಸಂದರ್ಶಕ: ಋತುಗಳಿಗೆ ಅನುಗುಣವಾಗಿ ರೋಗ ಬರುತ್ತವೆಯೇ?
ಡಾ.ವೀರುಪಾಕ್ಷಪ್ಪ: ಬಾಡಿ, ಮೈಂಡ್, ಮತ್ತು ಸ್ಫಿರಿಟ್ ಇವುಗಳಲ್ಲಿ ವ್ಯತ್ಯಾಸವಾದರೆ ಮಾತ್ರ ಆರೋಗ್ಯದಲ್ಲಿ ಏರುಪರಾಗುತ್ತದೆ.ಇವುಗಳನ್ನು ಸಮತೋಲನದಲ್ಲಿ ಇಡಲು ಮಿತವಾದ ಆಹಾರದ ಜೊತೆಗೆ ವ್ಯಾಯಾಮ ದೇಹಕ್ಕೆ ಬಹಳ ಅಗತ್ಯ. ಅದು ಯೋಗ, ಪ್ರಣಾವ್ಯಾಯಾಮ, ಹಾಗೂ ಸಂಜೆಯ ವಾಯುವಿಹಾರದ ಅಭ್ಯಾಸ ಇದ್ದವರಿಗೆ ರೋಗ ಬರುವ ಸಾಧ್ಯತೆ ಬಹಳಷ್ಟು ಕಡಿಮೆ.

ಸಂದರ್ಶಕ: ರೋಗ ಬರುವುದಕ್ಕೂ ಮೊದಲು ಹೋಮಿಯೋಪತಿಯಲ್ಲಿ ಚಿಕಿತ್ಸೆ ಇದೆಯಾ?
ಡಾ.ವೀರುಪಾಕ್ಷಪ್ಪ: ಅಲೋಪತಿಯವರ ಬಳಿ ಚಿಕಿತ್ಸೆ ಪಡೆದು ನಮ್ಮ ಬಳಿ ಬರುತ್ತಾರೆ. ಆದರೆ ಆ ಸಮಯದಲ್ಲಿಯೂ ಚಿಕಿತ್ಸೆ ನೀಡುತ್ತೇವೆ. ಆದರೆ ಯಾವ ರಿಯ್ಯಾಕ್ಷನ್ ಇರುವುದಿಲ್ಲ. ಹೋಮಿಯೋಪತಿಯಲ್ಲಿ ರಿಯ್ಯಾಕ್ಷನ್ ಬಹಳಷ್ಟು ಕಡಿಮೆ.

ಸಂದರ್ಶಕ: ಚಳಿಗಾಲದಲ್ಲಿ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು?
ಡಾ.ವೀರುಪಾಕ್ಷಪ್ಪ: ಕೆಲವರಿಗೆ ಚಳಿಗಾಲ, ಮಳೆಗಾಲ, ಬೆಸಿಗೆಯಲ್ಲಿ ರೋಗಗಳು ಬರುತ್ತವೆ. ರೋಗ ಬಂದ ಅವಧಿಯ ಆಧಾರದ ಮೇಲೆ ನಮ್ಮ ಚಿಕಿತ್ಸೆ ಹಾಗೂ ಔಷದೋಪಚಾರ ಇರುತ್ತದೆ. ಚರ್ಮಕ್ಕೆ ಸಂಬAಧಿಸಿದ ಔಷದಿಗಳು ನಮ್ಮ ಬಳಿ ಇವೆ. ಆಯುರ್ವೇದಲ್ಲಿಯೂ ಅವುಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಸಿಗುವುದಲ್ಲ.

ಸಂದರ್ಶಕ: ಜ್ವರ, ನೆಗೆಡಿ ಕೆಮ್ಮು ಬಂತು ಅಂದರೆ ಕೊರೊನಾವೇ ಬಂದಿದೆ ಎನ್ನುವ ಭಯದ ವಾತಾರಣ ನಮ್ಮಲ್ಲಿದೆ ಇದಕ್ಕೆ ಪರಿಹಾರವೇನು?
ಡಾ.ವೀರುಪಾಕ್ಷಪ್ಪ: ಮನೆ ಮದ್ದು ಶುಂಠಿ, ಖಾಲಿ ಮಿರ್ಚಿ, ಮೆಣಸು, ಕಷಾಯ ಮಾಡಿ ಕುಡಿಯುವುದ ಈ ವೇಳೆ ಬಹಳ ಉತ್ತಮ. ಕಾಫಿ ತಯಾರಿಸುವ ವಿಧಾನದಲ್ಲಿ ಕಷಾಯ ತಯಾರಿಸಿ ಸೇವಿಸಬೇಕು. ಕಹಿ ಅನುಭವ ಬರುವವರು ಬೆಲ್ಲ ಸೇರಿಸಿಕೊಳ್ಳಬಹುದು. ಮದುಮೇಹ ಬೆಲ್ಲವೂ ನಿಷಿದ್ಧ.

Leave a Reply

Your email address will not be published. Required fields are marked *

You May Also Like

ಹಠಯೋಗಿ ಶ್ರೀ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರು

ಕನ್ನಡ ನಾಡಿನ ಪುಣ್ಯವೋ ಏನೋ ಅನೇಕ ಜನ ತಪಸ್ವಿಗಳು, ಯೋಗಿಗಳು, ಶರಣರು, ಸಿದ್ಧರು, ಹಠಯೋಗಿಗಳು ಮೊದಲಾದ ಮಹಾಮಹಿಮರು ಉದಯಿಸಿ

ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ

ಉತ್ತರ ಪ್ರಭ ದಿನ ಪತ್ರಿಕೆ ಕಾರ್ಯಾಲಯದಲ್ಲಿ ನಡೆದ ಉತ್ತರ ಪ್ರಭ ನ್ಯೂಸ್ ಪೋರ್ಟಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ.ಕೆ.ಯೋಗೇಶನ್ ಮಾತನಾಡಿದರು.

ದೊರೆಸ್ವಾಮಿ ನಿಧನದಿಂದ ಪ್ರಜಾಪ್ರಭುತ್ವ ಬಡವಾಗಿದೆ: ಎಂ.ಎಸ್.ಹಡಪದ

ಗಜೇಂದ್ರಗಡ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿಯವರನ್ನು ಕಳೆದುಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವ ಇಂದು ಬಡವಾಗಿದೆ ಎಂದು ಮಾಜಿ ಪುರಸಭೆ ಸದಸ್ಯ ಎಂ.ಎಸ್.ಹಡಪದ ಹೇಳಿದರು.

ಆಸ್ಪತ್ರೆ ಬೆಡ್ ಮ್ಯಾಲೆ ತಾಳಿ ಕಟ್ಟಿ ಮದ್ವಿ ಮಾಡಿಕೊಂಡು ಮಾನವೀಯತೆ ಮೆರೆದ ವರ

ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು.