ಬೆಂಗಳೂರು: ಇತ್ತೀಗಷ್ಟೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಶಾಸಕ ಉಮೇಶ್ ಕತ್ತಿ, ಡಿನ್ನರ್ ಪಾಲಿಟಿಕ್ಸ್ ನಡೆಸಿದ್ರು. ಇದರಲ್ಲಿ ಕೆಲವು ಅತೃಪ್ತ ಶಾಸಕರು ಭಾಗವಹಿಸಿದ್ದು ಬಿಜೆಪಿಯಲ್ಲಿ ಕುಚ್… ಕುಚ್ ಹೋ ರಹಾ ಹೈ ಎಂಬ ಚರ್ಚೆಗೆ ಮುನ್ನುಡಿ ಬರೆದಿತ್ತು. ಉಮೇಶ್ ಕತ್ತಿ ಮನೆಯಲ್ಲಿ ಶೀಕರಣಿ ಊಟದ ರಾಜಕಾರಣದ ಬೆನ್ನಲ್ಲೆ ಸಿಎಂ ಬಿಎಸ್ವೈ ಪರ ಹಾಗೂ ವಿರೋಧ ಚರ್ಚೆಗಳು ನಡೆದವು. ಇದು ಸ್ವತ: ಸಿಎಂ ಯಡಿಯೂರಪ್ಪ ಅವರಿಗೂ ಮುಜುಗುರ ತಂದಿರಬಹುದು. ಆದರೆ ಬಿಎಸ್ವೈ ಹೈಕಮಾಂಡ್ ಮಟ್ಟದಲ್ಲಿ ಇನ್ನು ಪವರ್ ಫುಲ್ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರ ನೇಮಕವೇ ಸಾಕ್ಷಿಯಾಗಿದೆ.
ಸಚಿವರಾಗ್ತಿದ್ರಾ ಉಮೇಶ್ ಕತ್ತಿ..?
ಈಗಾಗಲೇ ಹಲವು ತಿಂಗಳಿಂದ ಉಮೇಶ್ ಕತ್ತಿ ತೆರೆಮರೆಯಲ್ಲಿ ತಮ್ಮ ಅಸಮಾಧಾನ ತೋರಿಸುತ್ತಲೇ ಇದ್ದರು. ಜೊತೆಗೆ ಬಹಿರಂಗವಾಗಿ ಪರೋಕ್ಷ ಹೇಳಿಕೆಗಳನ್ನು ನೀಡಿದ್ದರು. ಇದೆಲ್ಲದರ ಮದ್ಯೆ ಲಾಕ್ ಡೌನ್ ಹಿನ್ನೆಲೆ ಈ ಬಗ್ಗೆ ಸಿಎಂ ಯಡಿಯೂರಪ್ಪ ಮೌನ ವಹಿಸಿದ್ದರು ಎನ್ನಲಾಗಿದೆ. ಆದರೆ ಇದನ್ನೆ ಬಂಡವಾಳವಾಗಿಸಿಕೊಂಡು ಭಿನ್ನಮತೀಯರು ಸಭೆ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತರಾದ ಆಕಾಂಕ್ಷಿಗಳು ಸಿಎಂ ವಿರುದ್ಧ ಹರಿಹಾಯ್ದಿದ್ದರು. ಈ ಬೆಳವಣಿಗೆಯನ್ನು ಅತೃಪ್ತರ ಬ್ಲಾಕ್ ಮೇಲ್ ತಂತ್ರ ಎಂದು ಕೂಡ ಹೇಳಲಾಯಿತು. ಆದರೆ ಒಂದು ಮೂಲದ ಪ್ರಕಾರ ಸಂಪುಟ ವಿಸ್ತರಣೆಯಲ್ಲಿ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ದೊರೆತು ಬೆಳಗಾವಿ ಉಸ್ತುವಾರಿ ಸಚಿವರು ಆಗಬಹುದು ಎನ್ನುವ ಚರ್ಚೆ ನಡೆದಿತ್ತು. ಈ ಬಗ್ಗೆ ಸ್ವತ: ಸಿಎಂ ಕೂಡ ಆಸಕ್ತಿ ವಹಿಸಿದ್ದರು ಎನ್ನಲಾಗಿದೆ. ಆದರೆ ಡಿನ್ನರ್ ಪಾಲಿಟಿಕ್ಸ್ ಕತ್ತಿ ಅವರಿಗೆ ಮುಳುವಾಯಿತೆ? ಎನ್ನುವ ಮಾತುಗಳು ಸದ್ಯ ಚಾಲ್ತಿಯಲ್ಲಿವೆ.
ಬಿಜೆಪಿಯಲ್ಲಿ ಬಿಎಸ್ವೈ ಸ್ಟ್ರಾಂಗ್ ಗುರು..!

ಅತೃಪ್ತ ಶಾಸಕರ ಸಭೆಯ ಬೆನ್ನಲ್ಲಿ ಸಾಕಷ್ಟು ಚರ್ಚೆಗಳು ಹಾಗೂ ರಾಜಕೀಯ ಲೆಕ್ಕಾಚಾರಗಳು ರಾಜ್ಯದಲ್ಲಿ ನಡೆದಿದ್ದವು. ಆದರೆ ಈ ಬಗ್ಗೆ ಮೌನ ವಹಿಸಿದ್ದ ಸಿಎಂ ಯಡಿಯೂರಪ್ಪ ಇಂದು ಉಮೇಶ್ ಕತ್ತಿ ಅವರಿಗೆ ಬಿಗ್ ಶಾಕ್ ನೀಡಿದಂತಾಗಿದೆ. ಏಕಾಏಕಿ ಬೆಳಗಾವಿಗೆ ರಮೇಶ್ ಜಾರಕಿಹೊಳಿ ಅವರನ್ನು ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಿದರು. ಜೊತೆಗೆ ಮಹೇಶ್ ಕುಮಟಳ್ಳಿ ಅವರನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಮೂಲಕ ಉಮೇಶ್ ಕತ್ತಿ ಅವರಿಗೆ ಶಾಕ್ ಮೇಲೆ ಶಾಕ್ ನೀಡಿದ್ದಾರೆ ಸಿಎಂ. ಜೊತೆಗೆ ಭಿನ್ನಮತೀಯರಿಗೂ ಸಿಎಂ ಎಚ್ಚರಿಕೆ ಸಂದೇಶ ರವಾನಿಸಿದಂತಾಗಿದೆ.
ಈ ಮೂಲಕ ಉಮೇಶ್ ಕತ್ತಿ ವಿರುದ್ಧ ಸ್ಟ್ರಾಂಗ್ ಟೀಮ್ ಕಟ್ಟಲು ಸಿಎಂ ಮುಹೂರ್ತ ಇಟ್ಟರಾ ಎಂದು ಜನಾ ಮಾತಾಡಿಕೊಳ್ಳುತ್ತಿದ್ದಾರೆ.
ಮಿನೂ ಬೆಂಗಳೂರು………….