ಸುರೇಶ್ ಲಮಾಣಿ
ಲಕ್ಷ್ಮೇಶ್ವರ: ರಸ್ತೆಗಳು ನಿರ್ಮಾಣ ಮಾಡಿದ ಮೇಲೆ ನಿರ್ಮಿಸಿದ ರಸ್ತೆಗಳ ಮೇಲೆ ಇಷ್ಟೆ ಸಾಮಾರ್ಥ್ಯದ ವಾಹನಗಳು ಓಡಾಡಬೇಕು ಎನ್ನುವ ನಿಯಮವಿದೆ. ಆದರೆ ಅದ್ಯಾವ ನಿಉಮವನ್ನು ಪಾಲಿಸದೇ ಇರುವ ಕಾರಣಕ್ಕೆ ರಸ್ತೆಯೊಂದು ಹಳ್ಳ ಹಿಡಿದಿದೆ.

ತಾಲೂಕಿನ ಆದರಹಳ್ಳಿ ಗ್ರಾಮದಿಂದ ದೇವಿಹಾಳ ಗ್ರಾಮದವರೆಗೆ ಹೋಗುವ ರಸ್ತೆ ಡಾಂಬರೀಕರಣ ಸಂಪೂರ್ಣ ಕಿತ್ತು ಹೋಗಿದ್ದು, ಇದಕ್ಕೆ ಅಲ್ಲಿಯ ಕಲ್ಲಿನ ಕ್ವಾರಿಗಳು ಹಾಗೂ ಓವರಲೋಡ ತುಂಬಿ ರಸ್ತೆ ಎಲ್ಲಾ ಹಾಳು ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರಹಳ್ಳಿಯಿಂದ ದೇವಿಹಾಳ ಗ್ರಾಮದ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು ರೈತರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಆದರಹಳ್ಳಿ ಹಾಗೂ ದೇವಿಹಾಳ ರಸ್ತೆಯೂ ಸಂಪೂರ್ಣ ಹಾಳಾಗಲು ಅಲ್ಲಿಯ ಕಲ್ಲುಗಣಿಗಾರಿಕೆಯೇ ಕಾರಣ ದಿನನಿತ್ಯವೂ ಓವರಲೋಡ ಹಾಕಿದರಿಂದ ಡಾಂಬರ್ ಕಿತ್ತು ಹೋಗಿದೆ.

ನೋಟಿಸ್ ಕೊಡಲಾಗುವುದು

ರಸ್ತೆಯೂ ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿರುವುದು ನನ್ನ ಗಮನಕ್ಕೆ ಬಂದಿದೆ. ಕಲ್ಲುಗಣಿಗಾರಿಕೆಯವರು ಓವರಲೋಡ ಹಾಕಿ ಟಿಪ್ಪರ್ ಚಲಾಯಿಸುತ್ತಿದ್ದರಿಂದ ರಸ್ತೆಯ ಸ್ಥಿತಿ ಈ ರೀತಿಯಾಗಿದೆ. ಈ ಬಗ್ಗೆ ಓವರ್ ಲೋಡ್ ಹಾಕಿ ವಾಹನ ಚಲಾಯಿಸುತ್ತಿರುವವರಿಗೆ ನೋಟಿಸ್ ನೀಡಲಾಗುವುದು.

-ನರೇಂದ್ರ ಡಿ.ಬಿ ಲೋಕೋಪಯೋಗಿ ಇಲಾಖೆ ಅಧಿಕಾರಿ

ಈ ರಸ್ತೆಯನ್ನು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಶಾಸಕರಾಗಿದ್ದ ಅವಧಿಯಲ್ಲಿ ಮಾಡಲಾಗಿತ್ತು. ಈಗ ಈ ರಸ್ತೆ ಆದರಹಳ್ಳಿಯಿಂದ ದೇವಿಹಾಳವರೆಗೂ ಕಿತ್ತು, ದೊಡ್ಡ ದೊಡ್ಡ ಗುಂಡಿಗಳಾಗಿ ಮಾರ್ಪಟಿದೆ. ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದರಿಂದ ಬೈಕ್ ಸವಾರರು, ರೈತರಿಗೆ ಸಮಸ್ಯೆಯಾಗಿದೆ. ರಸ್ತೆಯಲ್ಲಿನ ಡಾಂಬರ್ ಕಿತ್ತು ಹೋಗಿದೆ. ಇದರಿಂದ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಯ ಮೇಲೆ ಹಾಕಿದ ಡಾಂಬರ್ ಹುಡುಕಿದರೂ ಕಾಣದಾಗಿದೆ.

ರಸ್ತೆ ಅವ್ಯವಸ್ಥೆ ಕುರಿತು ಸಂಬAಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸಿದ್ದಾರೆ. ತಕ್ಷಣ ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ರಸ್ತೆ ದುರಸ್ಥಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.


Leave a Reply

Your email address will not be published. Required fields are marked *

You May Also Like

ಗದಗ, ಶಿರಹಟ್ಟಿ, ರೋಣ, ಮುಂಡರಗಿ ಸೇರಿ 19ಪಾಸಿಟಿವ್, ಗದಗನಲ್ಲೇ ಅತಿ ಹೆಚ್ಚು

ಗದಗ ಜಿಲ್ಲೆಯಲ್ಲಿ ಇಂದು ಪತ್ತೆಯಾದ ಸೋಂಕಿತರಲ್ಲಿ ಗದಗ ತಾಲೂಕಿನಲ್ಲಿಯೇ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಶಿಕ್ಷಕರ ಅಗತ್ಯ ಸೇವೆ ಈಗ ಆನಲೈನ್ ವ್ಯಾಪ್ತಿಯಲ್ಲಿ: ಶಿಕ್ಷಣ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ಲೇಪಿಸಿದ ಶಿಕ್ಷಣ ಸಚಿವರು,ಅಧಿಕಾರಿಗಳು

ಉತ್ತರಪ್ರಭ ಸುದ್ದಿಆಲಮಟ್ಟಿ: ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಶಿಕ್ಷಕರ ಅಗತ್ಯ 17 ಸೇವೆಗಳನ್ನು ಆನ್…

ಸ್ವಾಮೀಜಿಯನ್ನು ಮನಸೋ ಇಚ್ಛೆ ಥಳಿಸಿದ ಪೊಲೀಸ್ ಪೇದೆ!

ಸ್ವಾಮೀಜಿಯೊಬ್ಬರಿಗೆ ಪೊಲೀಸ್ ಪೇದೆ ಥಳಿಸಿರುವ ಘಟನೆ ಅಫಜಲ್ ಪುರ ತಾಲೂಕಿನ ಅರ್ಜುಣಗಿ ತಾಂಡಾ ಚೆಕ್ ಪೋಸ್ಟ್ ಬಳಿ ನಡೆದಿದೆ.

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ

ಶ್ರೀ ವೀರೆಶ್ವರ ಪೂಣ್ಯಾಶ್ರಮ ಅಂದಮಕ್ಕಳ ಶಾಲೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಶಸ್ತಿ