ಬೆಂಗಳೂರು: ಮಾರಾಟ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಕೆಲವು ಸೇವೆಗಳು ಸ್ಥಗಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರಿ ಬಸ್ ಸಂಚಾರ ಎಂದಿನಂತೆ ಇರುತ್ತದೆ. ಇದರೊಂದಿಗೆ ಖಾಸಗಿ ಬಸ್, ಪ್ರಯಾಣಿಕರ ವಾಹನಗಳು, ಸರ್ಕಾರಿ ಕಚೇರಿ, ಮೆಟ್ರೋ ಸೇವೆ, ಆಸ್ಪತ್ರೆ ಮೆಡಿಕಲ್ ಸ್ಟೋರ್, ಅಂಬುಲೆನ್ಸ್, ರೈಲು ಸಂಚಾರ, ಹೋಟೆಲ್, ಹಣ್ಣು ತರಕಾರಿ ವ್ಯಾಪಾರ ಮೊದಲಾದವು ಇರುತ್ತವೆ.

ಓಲಾ, ಉಬರ್, ಆಟೋ, ಟ್ಯಾಕ್ಸಿ ಸಂಚಾರ ಬಂದ್ ಆಗಬಹುದು ಎಂದು ಹೇಳಲಾಗಿದೆ. ಬಂದ್ ಯಶಸ್ಸಿಗೆ ಹಲವು ಸಂಘಟನೆಗಳು ಮನವಿ ಮಾಡಿವೆ. ಆದರೆ ಕೊರೋನಾ ಲಾಕ್ಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ವ್ಯಾಪಾರಸ್ಥರು, ಹೋಟೆಲ್ ಮಾಲೀಕರು ಬಂದ್ ಗೆ ನೈತಿಕ ಬೆಂಬಲ ನೀಡಿದ್ದಾರೆ. ಮರಾಠ ನಿಗಮದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿರುವ ಸಿಎಂ ಬಂದ್ ಮಾಡದಂತೆ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಎಲ್ಲ ಸಮುದಾಯಕ್ಕೂ ಮೀಸಲಾತಿ ಸಿಗಲಿ: ಕಾರಜೋಳ

ಸಾಂವಿಧಾನದ ಆಶಯದಂತೆ ಶೋಷಿತ ಎಲ್ಲ ಸಮುದಾಯಗಳಿಗೂ ಮುಖ್ಯವಾಹಿನಿಗೆ ಬರಲು ಮೀಸಲಾತಿ ಸಿಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಬಿಜೆಪಿಯಲ್ಲಿನ ರಾಜಕೀಯ ಮೇಲಾಟಕ್ಕೆ ಕಾರಣವಾಗುತ್ತಾ ಶೀಕರಣಿ ಊಟ!

ಎರಡ್ಮೂರು ದಿನಗಳಿಂದ ಈಗಾಗಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ನಾಯಕತ್ವದ ಪ್ರಶ್ನೆ ಎದುರಾಗಿದೆ. ಈಗಾಗಲೇ ಕೆಲವು ಅತೃಪ್ತ ಶಾಸಕರು ನೀಡುತ್ತಿರುವ ಹೇಳಿಕೆಯಿಂದಾಗಿ ಸದ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವಂತಿದೆ.

ವಿಕೆಂಡ್ ಮೀಟಿಂಗ್ ನಲ್ಲಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ತೀರ್ಮಾನಿಸುತ್ತಾ ಬಿಜೆಪಿ?

ಬಿಜೆಪಿ ಕೋರ್ ಕಮೀಟಿಯ ಮೀಟಿಂಗ್ ಗೆ ಇದೀಗ ಹೆಚ್ಚು ಮಹತ್ವ ಬಂದಿದ್ದು ವಿಕೇಂಡ್ ಮೀಟಿಂಗ್ ಯಾವ ನಿರ್ಧಾರಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಆಕಾಂಕ್ಷಿಗಳಲ್ಲಿ ಆಸಕ್ತಿ ಮೂಡಿಸಿದೆ.

ಕೊರೊನಾ ಹಿನ್ನೆಲೆ : ಬೆಳಗಾವಿ ಜಿಲ್ಲೆಯಲ್ಲಿ ರೇಣುಕಾ ಯಲ್ಲಮ್ಮ ಸೇರಿ ಹಲವು ದೇವಸ್ಥಾನಗಳ ದರ್ಶನ ನಿಷೇಧ

ಕೋವಿಡ್-19 (ಕರೋನಾ)ರೂಪಾಂತರಿ ವೈರಾಣುವಿನ ಹರಡುವಿಕೆಯು ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇನ್ನಿತರೆ ರಾಜ್ಯಗಳಲ್ಲಿ ತೀವ್ರತರವಾಗಿ ಹರಡುತ್ತಿರುವುದರಿಂದೆ.