ಆಲಮಟ್ಟಿ: ಪವಿತ್ರ ಬಸವ ಭೂಮಿಯ ನಾಡಿನಲ್ಲಿ ಇನ್ನೂ ಅಸ್ಪೃಶ್ಯತೆ ಪೂರ್ಣ ತೊಲಗಿಲ್ಲ. ಕಂದಾಚಾರ,ಅನಾಚಾರ,ಮೂಡನಂಬಿಕೆಗಳಂಥ ಮೌಢ್ಯಗಳು ಅಲ್ಲಲ್ಲಿ ಸುಳಿದಾಡುತ್ತಿವೆ. ಅನ್ಯ ಕೋಮು, ಜಾತಿ ಜಾತಿವೆಂಬ ಸುಳಿಗೆ ಅಮಾಯಕ ಅಸಲಿ ಪ್ರೀತಿಯುಳ್ಳ ಜೀವಗಳು ಬಲಿಯಾಗುತ್ತಿರುವುದು ದುರದೃಷ್ಟಕರ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ವಿಷಾಧಿಸಿದರು.

ಇಲ್ಲಿನ ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಸ್ಮಾರಕ ಪ್ರತಿಷ್ಠಾನ ಹಾಗು ನಿಡಗುಂದಿ ಬಸವ ಬಳಗ ಆಶ್ರಯದಲ್ಲಿ ತ್ರಿವಿಧ ದಾಸೋಹಿ ಲಿಂ,ತೋಂಟದ ಡಾ.ಸಿದ್ದಲಿಂಗ ಸ್ವಾಮೀಜಿಯವರ ಚತುರ್ಥ ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಬಸವಭೂಮಿ ಯಾತ್ರೆಯ ಬಸವ ಭಕ್ತ ಯಾತ್ರಾಥಿ೯ಗಳಿಗೆ ಸ್ವಾಗತ ಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು,ಈಚೆಗೆ ಬಾಗಲಕೋಟ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾದ ಯುವ ಪ್ರೇಮಿಗಳ ಮಯಾ೯ದಾ ಹತ್ಯಾ ಪ್ರಕರಣ ತೀವ್ರವಾಗಿ ಖಂಡಿಸಿದರು. ಅನ್ಯ ಜಾತಿಯವರನ್ನು ಪ್ರೀತಿಸಿದಕ್ಕಾಗಿ ಅಮಾಯಕ ಎರಡು ಜೀವಗಳು ಬಲಿಗೆ ತುತ್ತಾಗಿವೆ.ಇದು ಇಡೀ ನಾಗರಿಕ ಸಮಾಜಕ್ಕೆ ಕಳಂಕ.ತಲೆ ತಗ್ಗಿಸುವಂಥ ಘಟನೆವಾಗಿದೆ ಎಂದರು. ಸ್ವೇಚ್ಛಾಚಾರಿ,ನಕಲಿ ಪ್ರೀತಿ ಅಲ್ಲ.ಮನಸ್ಸಾಪೂರ್ವಕ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಯುವ ಜೀವಗಳನ್ನು ಅಮಾನುಷವಾಗಿ ಕೊಲೆ ಗೈದು ಪಾಪಿಗಳು ಈಗ ಜೈಲು ಸೇರಿದ್ದಾರೆ ಎಂದರು.

ಧಾಮಿ೯ಕ ಆಚರಣೆ ಜೊತೆಗೆ ಸಮಾನತೆ ಭಾವ ಮೂಡಿಬರಬೇಕು. ಅಂತರ ಜಾತಿಯ ವಿವಾಹಗಳಿಗೆ ಸಮಾಜ ಪ್ರೋತ್ಸಾಹಿಸಬೇಕು.ಇಂಥ ವಿವಾಹ ಸಂಬಂಧಗಳು ಹೆಚ್ಚಾಗಬೇಕು.ಜಾತಿ ಸಂಕೋಲೆಗಳನ್ನು ಬದಿಗೊತ್ತಿ ಏಕತೆಯ ಮನಸ್ಸಿನಿಂದ ಒಂದಿರಬೇಕು. ಎಲ್ಲ ಜಾತಿ ಜನಾಂಗ ತಮ್ಮ ತಮ್ಮ ಸಂಸ್ಕೃತಿ, ಸಂಪ್ರದಾಯದ ಹಿರಿಮೆಯಿಂದ ಸಾಮರಸ್ಯದ ಬದುಕು ಕಂಡುಕೊಳ್ಳಬೇಕು. ಪ್ರಜಾ ಚಾರಿತ್ರಿಕ ಮಹತ್ವ ಮರೆಯಾಗದಂತೆ ನೋಡಿಕೊಳ್ಳಲು ಮುಂದಾಗಬೇಕು ಎಂದರು.
ಬಸವಣ್ಣನ ಆದರ್ಶ ಸಾರ್ವಕಾಲಿಕ ಸತ್ಯ : ಬಸವಣ್ಣ ಒಬ್ಬ ಶ್ರೇಷ್ಠ ಕಾಯಕ ಶರಣರು.ಅವರ ಜೀವನ ಮೌಲ್ಯಭರಿತ ಸತ್ವಯುತ. ಎಲ್ಲರ ಮನದಲ್ಲಿ ಬಸವ ಚಿಂತನ, ಮಂಥನದ ಭಕ್ತಿಭಾವ ಉಕ್ಕಬೇಕು. ಈ ಶರಣರ ಚಿಂತನೆಯಿಂದ ಖಿನ್ನತೆ ದೂರಾಗಿ ನೆಮ್ಮದಿ ಪ್ರಾಪ್ತಿವಾಗುತ್ತದೆ. ಸ್ವಧರ್ಮನಿಷ್ಟೆ ಪರಧರ್ಮ ಸಹಿಷ್ಣುತೆಯಿಂದ ಹೆಜ್ಜೆ ಗುರುತು ಹಾಕಬೇಕು. ಧರ್ಮಸೂತ್ರಗಳಡಿಯಲ್ಲಿ ಮುನ್ನಡೆದರೆ ದೇಶದಲ್ಲಿ ಶಾಂತಿ ಸೌಹಾರ್ದತೆ ನೆಲೆಗೊಳ್ಳುವುದು. ಎಲ್ಲರೂ ನಮ್ಮವರು ಎಂದು ಅಪ್ಪಿಕೊಂಡು ಬಸವಣ್ಣನವರು ಕಾಯಕ ತತ್ವ ನಿರೂಪಿಸಿದ್ದಾರೆ. ಶರಣರ ವಿಚಾರ,ಕ್ರಾಂತಿಗಳು ವಿಶ್ವ ವ್ಯಾಪಿಯಡೆಗೆ ಮತ್ತಿಷ್ಟು ಪ್ರಭಾವಪೂರ್ಣವಾಗಿ ಪ್ರಜ್ವಲಿಸುವಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮೊದಲು ವಚನ ಸಂಸ್ಕಾರ ಮಕ್ಕಳಿಗೆ ನೀಡುವ ಕೆಲಸದೊಂದಿಗೆ ಬಸವ ತತ್ವ ಪ್ರಚಾರ ಕಾರ್ಯ ಇನ್ನಷ್ಟು ಗಟ್ಟಿಗೊಳ್ಳಲಿ. ಅಣ್ಣ ಬಸವಣ್ಣನವರ ಕಾಯಕದ ಪರಿಕಲ್ಪನೆ ಜನಮನದಲ್ಲಿ ಜಾಗೃತಗೊಳ್ಳಲ್ಲಿ.ಬಸವ ಧರ್ಮ,ಕಲ್ಯಾಣ ಪರ್ವ ಕಾಲ ಎಲ್ಲೆಡೆ ಮೊಳಗಲಿ ಎಂದು ಮಾಜಿ ಸಚಿವ ಬೆಳ್ಳುಬ್ಬಿ ಆಶಿಸಿದರು.

ಬಸವಭೂಮಿ ಯಾತ್ರೆ ರೂವಾರಿ ಆಯ್.ಆರ್.ಮಠಪತಿ ಮಾತನಾಡಿ,ಅಣ್ಣ ಬಸವಣ್ಣನವರ ಹಾಗು ಮಹಾನ ಚೇತನ ಲಿಂ,ತೋಂಟದ ಸಿದ್ದಲಿಂಗ ಪೂಜ್ಯರ ಮತ್ತು ಶರಣ ಮಂಜಪ್ಪ ಹಡೇ೯ಕರ ಅವರ ಕಾಯಕ ತತ್ವದ ಕೃಪಾಶೀವಾ೯ದ ನಮ್ಮೆಲ್ಲರ ಮೇಲಿದೆ. ಬಸವ ಯಾತ್ರಿಗಳ ಹೃದಯ ಭಾವದಲ್ಲಿ ಅವರೆಲ್ಲ ಪೂಜ್ಯರು ನೆಲೆಸಿದ್ದಾರೆ. ಈ ಶರಣರ ಜೀವನ ಚರಿತ್ರೆಯ ಚಿಂತನೆ, ಬಸವಣ್ಣನವರ ಘೋಷ ವಾಕ್ಯ ಮನಮನದಲ್ಲಿ ಇನ್ನಷ್ಟು ಅರಳಬೇಕು. ಬದುಕುವ ರೀತಿ ನೀತಿ ಹೇಳಿಕೊಟ್ಟಿರುವ ಬಸವಭೂಮಿಯ ಈ ಅನರ್ಘ್ಯ ರತ್ನಗಳಿಗೆ ಕೃತಜ್ಞತೆ ಸಲ್ಲಿಸುವದು ನಮ್ಮ ಅದ್ಯ ಕರ್ತವ್ಯ. ಶರಣರ ಚಿಂತನೆ ನಮ್ಮ ಆತ್ಮ ಕಲ್ಯಾಣಕ್ಕಾಗಿವೆ.ಅವರುಗಳು ತೋರಿದ ಮಾರ್ಗದಿಂದಲೇ ನವತನ, ಹೊಸ ಬೆಳಕು ಮೂಡಿ ಬರಲು ಸಾಧ್ಯ. ಕೊಡುವ ಭಾವಕ್ಕಿಂತ ಪ್ರೀತಿಭಾವ ಮುಖ್ಯ. ಅಂಥ ಪ್ರೀತಿ ಅದರಾತೀಥ್ಯ ಮಂಜಪ್ಪನವರ ಕರ್ಮಭೂಮಿಯಲ್ಲಿಂದು ನಮ್ಮ ಬಸವಾಭಿಮಾನಿ ಬಳಗ ತಂಡ ಕಂಡು ಸಂತೃಪ್ತಿಗೊಂಡಿದೆ ಎಂದರು.
ಬಸವಭೂಮಿ ಶರಣರ ಕ್ರಾಂತಿ ಭೂಮಿಯಾಗಿ,ತ್ಯಾಗ,ಬಲಿದಾನದ ಭೂಮಿಯಾಗಿ ಮಿಂದೆದ್ದಿರುವ ಇತಿಹಾಸ ಎಲ್ಲರಿಗೂ ಗೊತ್ತು. ಆ ವೀರೋಚಿತ ವೈಭವ ನೆನಪಿಸಿಕೊಂಡರೆ ಖಂಡಿತ ಮೈಮನಗಳಿಗೆ ರೋಚಕ ಅನುಭವಾಗುತ್ತದೆ ಎಂದರು.
ಈಗ ಕಾಂಗ್ರೆಸ್ ನವರು ಭಾರತ ಜೋಡೋ ಯಾತ್ರೆ,ಬಿಜೆಪಿಯವರು ಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ. ಈ ನಾಡಿನಲ್ಲಿ ಹಲವು ಬಗೆಯ ಸ್ವಾರ್ಥಪೂರಿತ ಯಾತ್ರೆಗಳು ನಡೆಯುತ್ತಿವೆ. ಆದರೆ ನಮ್ಮದು ಬಸವಭೂಮಿ ಯಾತ್ರೆಯಾಗಿದೆ. ಇದು ಮಾನವ ಕುಲ ಒಂದೇ ತತ್ವವೆಂದು ಶರಣರ ಚಿಂತನಾರ್ಹ,ಅಭಿನಂದನಾರ್ಹತತ್ವಗಳನ್ನು ಹೊತ್ತು ಸಾಗಿದ ಬಸವಭೂಮಿ ಯಾತ್ರೆ ಎಲ್ಲ ಯಾತ್ರೆಗಳಿಗಿಂತ ವಿಭಿನ್ನ ಆಲೋಚನೆಗಳ ಶರಣ ಸಂದೇಶ ಸಾರುವ ಶ್ರೇಷ್ಠ ಯಾತ್ರೆವಾಗಿದೆ ಎಂದರು.
ಶಿರೂರ ಬಸವಲಿಂಗ ಸ್ವಾಮೀಜಿ, ಶರಣ ಜೀವಿ ಆಯ್.ಆರ್.ಮಠಪತಿ ಅವರು ಕಳೆದ ಇಪ್ಪತೈದು ವರ್ಷಗಳಿಂದ ಶರಣರ ತತ್ವ ಪ್ರಸಾರಕ್ಕಾಗಿ ಕೈಗೊಂಡಿರುವ ಕಾರ್ಯ ಆದರ್ಶನೀಯವಾಗಿದೆ ಎಂದರು.
ಇಂಗಳಗಿ ಸಿದ್ದಲಿಂಗ ಸ್ವಾಮೀಜಿ, ಪುಣ್ಯ ಪುರುಷರು ಜನಿಸಿದ ಕರುನಾಡಿನಲ್ಲಿರುವ ನಾವೆಲ್ಲರೂ ಸೌಭಾಗ್ಯವಂತರು. ಶರಣರ ವಚನ ಸಾಹಿತ್ಯ, ಪರೋಪಕಾರಿ ಗುಣ ಅಥೈ೯ಸಿಗೊಂಡರೆ ಸಾಕು. ನಮ್ಮ ಜೀವನ ಪಾವನ ಎಂದರು.
ಬಸವ ಯಾತ್ರಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಐ.ಆರ್.ಮಠಪತಿ ಅವರಿಗೆ ಬಸವರಾಜ ನಾಲತವಾಡ ಸನ್ಮಾನಿಸಿದರು.
ಮಂಜಪ್ಪ ಹಡೇ೯ಕರ ಸ್ಮಾರಕ ಪ್ರತಿಷ್ಠಾನ ಸಮಿತಿ ಕಾರ್ಯದರ್ಶಿ ವಿ.ಎಂ.ಪಟ್ಟಣಶೆಟ್ಟಿ ಮಾತನಾಡಿದರು. ದೇವಾಂಗ ಸಮಾಜದ ಹಿರಿಯರಾದ ಸಿ.ಆಯ್.ಕುಪ್ಪಸ್ತ, ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಎಲ್.ಬಾಡಗಿ, ಸಿ.ಬಿ.ಕುಂಬಾರ, ಎಸ್.ಕೆ.ಗೌಡರ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ನಿಡಗುಂದಿಯ ಗಣ್ಯ ವ್ಯಾಪಾರಸ್ಥರಾದ ಶರಣಪ್ಪ ಮುರನಾಳ, ಶಿಕ್ಷಣ ಪ್ರೇಮಿ ಬಸಯ್ಯ ಶಿವಯೋಗಿಮಠ ಇತರರು ವೇದಿಕೆ ಮೇಲಿದ್ದರು.
ಆಂಗ್ಲ ಭಾಷಾ ಶಿಕ್ಷಕ ಮಹೇಶ್ ಗಾಳಪ್ಪಗೊಳ ನಿರೂಪಿಸಿ ವಂದಿಸಿದರು.