ಮಹದಾಯಿ ವಿಚಾರ: 4 ವಾರಗಳಲ್ಲಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಆದೇಶ!

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಮಲಪ್ರಭಾ ನದಿಗೆ ನೀರು ತಿರುಗಿಸುತ್ತಿದೆ ಎಂದು ಗೋವಾ ರಾಜ್ಯ ನ್ಯಾಯಾಂಗ ನಿಂದನೆ ದೂರು ಸಲ್ಲಿಸಿತ್ತು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗೋವಾ ಮನವಿ ಪರಿಶೀಲಿಸಿ ಇದಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಪರಿಶೀಲನೆ ನಡೆಸಲು ನಾಲ್ಕು ವಾರಗಳಲ್ಲಿ ತಜ್ಞರನ್ನೊಳಗೊಂಡ ಮೇಲುಸ್ತುವಾರಿ ಸಮಿತಿ ರಚಿಸಿ ವರದಿ ನೀಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಕೊರೊನಾ ಕಾರಣದಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ- ಸಿ.ಸಿ.ಪಾಟೀಲ್

ಕೊರೋನಾದ ಪರಿಣಾಮದಿಂದ ಕಂಗಾಲಾದ ನಾವು ನೀವೆಲ್ಲರೂ ಇದೀಗ ಹೊರಗಡೆ ಬಂದಂತಾಗಿದೆ, ಸುಮಾರು ದಿನಗಳಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳ ಪೂಜೆ ಮಾಡದೇ ಇರುವುದಕ್ಕೆ ಕಾರಣ ಈ ಮಹಾಮಾರಿ ಕರೋನ. ಇದರಿಂದ ದೇಶದ ಬೊಕ್ಕಸ, ರಾಜ್ಯದ ಬೊಕ್ಕಸ, ವ್ಯಾಪಾರಸ್ಥರಿಗೆ ಹಿನ್ನೆಡೆ ಮತ್ತು ಉದ್ಯಮಿಗಳಿಗೆ ಭಾರೀ ತೊಂದರೆ ಉಂಟಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಮೊಸಳೆ ಪತ್ತೆ ಕಾರ್ಯ

ಮಲಪ್ರಭಾ ನದಿಯಲ್ಲಿ ನಿನ್ನೆಯಷ್ಟೆ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿತ್ತು. ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿಯ ಮಲಪ್ರಭಾ ನದಿಯಲ್ಲಿಯೇ ಮೊಸಳೆ ಕಂಡು ಬಂದಿತ್ತು.

ಮೊಸಳೆ ಬಂತು.. ಮೊಸಳೆ..! ಹೊಳೆಯಾಲೂರು: ಮಲಪ್ರಭ ನದಿ ದಡದಲ್ಲಿ ಮೊಸಳೆ ಪತ್ತೆ!

ಮಲಪ್ರಭಾ ನದಿಯಲ್ಲಿ ಮೊಸಳೆ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗದಗ ಜಿಲ್ಲೆ ರೊಣ ತಾಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧುವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿಜe. ಮೊಸಳೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.