ರೋಣ: ರೈತರು ಮತ್ತು ಕಾರ್ಮಿಕರ ಶಕ್ತಿಯನ್ನು ಈ ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ಹಸಿರು ಬಣ್ಣದ ಸಂಕೇತ ಹೊಂದಿರುವ ರೈತರು, ಕೆಂಪು ಬಣ್ಣದ ಸಂಕೇತ ಹೊಂದಿರುವ ಕಾರ್ಮಿಕರ ಶಕ್ತಿ ಒಂದಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡ ಕೇಂದ್ರ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

ಈ ವೇಳೆ ತಾಲೂಕ ರೈತ ಸೇನೆ ಅಧ್ಯಕ್ಷ ಮೇಘರಾಜ್ ಬಾವಿ ಮಾತನಾಡಿ, ಸರ್ಕಾರದ ಈ ಕಾಯ್ದೆಗಳು ರೈತರನ್ನು ತುಳಿತಕ್ಕೀಡು ಮಾಡುತ್ತವೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಜಮೀನುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಕೃತ್ಯವನ್ನು ಮಾಡುತ್ತಿರುವ ಸರ್ಕಾರಕ್ಕೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕು. ವಿದ್ಯುತ್ ಖಾಸಗೀಕರಣ ಮಾಡುವಲ್ಲಿ ಮುಂದಾಗಿದ್ದು, ದುಡಿಮೆಗೆ ತಕ್ಕ ವೇತನ ನೀಡದಿರುವುದು ಕಾರ್ಪೊರೇಟ್ ಕಂಪನಿ ಹುಟ್ಟು ಹಾಕಿ ಕಂಪನಿಗಳೊಂದಿಗೆ ಶ್ಯಾಮೀಲಾಗಿ ದುಡಿದ ಹಣದಲ್ಲಿ ತಾವು ಅರ್ಧ ಭಾಗ ಹಂಚಿಕೊಂಡು ನಮಗೆ ಅರ್ಧ ಹಣ ನೀಡುವ ಸರ್ಕಾರದ ಇಂತಹ ಧೋರಣೆ ಸಂಪೂರ್ಣ ಜನವಿರೋಧಿ ನೀತಿಯಾಗಿದೆ ಎಂದು ಹರಿಹಾಯ್ದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತನಗೌಡ ಚೇಗರಡ್ಡಿ ಮಾತನಾಡಿ, ರೈತರು ಮನವಿ ಸಲ್ಲಿಸಲು ಬಂದರೂ ಕೂಡ ಮನವಿ ಸ್ವೀಕರಿಸಲು ತಹಶೀಲ್ದಾರ ಬಾರದಿರುವುದು ಖಂಡನೀಯ. ತಹಶೀಲ್ದಾರ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ. ಸರ್ಕಾರ ಐದು ವರ್ಷ ರುತ್ತದೆ. ಆದರೆ ಅರವತ್ತು ವರ್ಷ ಕೆಲಸ ಮಾಡಬೇಕಾದವರು ಅಧಿಕಾರಿಗಳು ಎಂದು ಕಿಡಿಕಾರಿದ್ರು.

ಸಿದ್ಧಾರೂಢ ಮಠದಿಂದ ಹೊರಟ ಪ್ರತಿಭಟನಾ ರ್ಯಾಲಿಯು ಸೂಡಿ ಕ್ರಾಸ್ ಮತ್ತು ಮುಲ್ಲಾನಭಾವಿ ಕ್ರಾಸ್ ಮೂಲಕ ಹಾಯ್ದು ತಹಸೀಲ್ದಾರ್ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡ ಸಂಕಪ್ಪ ಕುರಹಟ್ಟಿ, ಹನಮಂತ ತಾಳಿ, ಮೈಲಾರಪ್ಪ ಮಾದರ, ಮಾರುತಿ ಸೆಗಣಿ ಸಂಗಣ್ಣ ದಂಡಿನ, ಮಾದೇಗೌಡ ಪಾಟೀಲ್, ಮಲ್ಲಪ್ಪ ಹೊಳಗಿ, ಸುರೇಶ ಅಬ್ಬಿಗೇರಿ, ಕುಮಾರ ಪೂಜಾರ್, ಸಲೀಮ್ ಹುಲ್ಲೂರ, ನಾಗರಾಜ ಹುರಳಿ ದುಂಡಮ್ಮ ಬಳಿಗೇರ ಶಶಿಕಲಾ ಗಾಣಿಗೇರ, ಶೋಭಾ, ಸುನಂದಾ ಘಂಟಿ, ಗಂಗಮ್ಮ ಪೂಜಾರ್, ಲೀಲಾ ಪತ್ತಾರ್, ಗಂಗಮ್ಮ ದೇವರಡ್ಡಿ, ಬಸವರಾಜ್ ಸಜ್ಜೇನವರ ರೇಣುಕಾ ತಳವಾರ್.ಇನ್ನಿತರು ಉಪಸ್ಥಿತರಿದ್ದರು. ರೈತಪರ ಹಾಗೂ ದಿನಗೂಲಿ ನೌಕರರ ಸಂಘಟನೆಗಳು ಪಾಲ್ಗೊಂಡಿದ್ದವು.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿ ಇನ್ನೆಷ್ಟು ದಿನ ಲಾಕ್ ಡೌನ್?

ಬಹುತೇಕರು ಲಾಕ್ ಡೌನ್ ಯಾವಾಗ ಮುಕ್ತಾಯವಾಗುತ್ತದೆ? ಅಥವಾ ಮುಂದುವರೆಯುತ್ತಾ? ಒಂದು ವೇಳೆ ಮುಂದುವರೆದರೆ ಏನೆಲ್ಲ ಸಡಿಲಿಕೆ ಇರುತ್ತೆ ಎನ್ನುವ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಜನಸಾಮಾನ್ಯರು ಎದುರು ನೋಡುತ್ತಿದ್ದರು. ಇದೀಗ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಜಿಂದೇಶ್ಯಾವಲಿ ದರ್ಗಾ ಉರುಸು ರದ್ದುಗೊಳಿಸಿ ಡಿಸಿ ಆದೇಶ

ಕಳೆದ 15 ದಿನಗಳಿಂದ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಗುಂಪು ಸೇರಬಹುದಾದ ಇತರ ಚಟುವಟಿಕೆಗಳಲ್ಲಿ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

ಗೇಮ್ಸ್ – ಗ್ರೌಂಡ್ ನಾಲೆಡ್ಜ್ ಮಕ್ಕಳಿಗೆ ಕೊಡಿ- ಎಂ.ವಿ.ಹಿರೇಮಠ

ಉತ್ತರಪ್ರಭ ಸುದ್ದಿ ಬಸವನ ಬಾಗೇವಾಡಿ: ಇಂದಿನ ಸ್ಪಧಾ೯ತ್ಮಕ ಯುಗದ ಆಟೋಟಗಳ್ಲಿ ಶಾಲಾ ಮಕ್ಕಳನ್ನು ಸಕ್ರಿಯವಾಗಿ ಭಾಗವಹಿಸುವಂತೆ…

ಬೆಂಗಳೂರು ಹಾಗೂ ಗದಗಿಗೆ ಬರಲಿದೆ ಕೊರೊನಾ ಎಕ್ಸ್ ಪ್ರೆಸ್!

ಬೆಂಗಳೂರು: ಸದ್ಯದಲ್ಲಿಯೇ ಬೆಂಗಳೂರಿಗೆ ಕೊರೊನಾ ಎಕ್ಸ್ ಪ್ರೆಸ್ ಬರಲಿದೆ.ಕರ್ನಾಟಕದ ಗ್ರೀನ್ ಜೋನ್ ಗೆ ದಾಳಿಯಿಟ್ಟ ಮುಂಬಯಿ…