ಹಸಿರು ಮತ್ತು ಕೆಂಪು ವರ್ಣಗಳು ಸಿಡಿದ್ದೆದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ: ಪೀರು ರಾಠೋಡ್

labour former gadag

ಹಸಿರು ಮತ್ತು ಕೆಂಪು ವರ್ಣಗಳು ಸಿಡಿದ್ದೆದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ: ಪೀರು ರಾಠೋಡ್

ರೋಣ: ರೈತರು ಮತ್ತು ಕಾರ್ಮಿಕರ ಶಕ್ತಿಯನ್ನು ಈ ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ಹಸಿರು ಬಣ್ಣದ ಸಂಕೇತ ಹೊಂದಿರುವ ರೈತರು, ಕೆಂಪು ಬಣ್ಣದ ಸಂಕೇತ ಹೊಂದಿರುವ ಕಾರ್ಮಿಕರ ಶಕ್ತಿ ಒಂದಾದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕಾರ್ಮಿಕ ಮುಖಂಡ ಪೀರು ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಅವರು ಶುಕ್ರವಾರ ಪಟ್ಟಣದಲ್ಲಿ ಹಮ್ಮಿಕೊಂಡ ಕೇಂದ್ರ ಸರ್ಕಾರದ ರೈತ ಹಾಗೂ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.

ಈ ವೇಳೆ ತಾಲೂಕ ರೈತ ಸೇನೆ ಅಧ್ಯಕ್ಷ ಮೇಘರಾಜ್ ಬಾವಿ ಮಾತನಾಡಿ, ಸರ್ಕಾರದ ಈ ಕಾಯ್ದೆಗಳು ರೈತರನ್ನು ತುಳಿತಕ್ಕೀಡು ಮಾಡುತ್ತವೆ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಜಮೀನುಗಳನ್ನು ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡುವ ಕೃತ್ಯವನ್ನು ಮಾಡುತ್ತಿರುವ ಸರ್ಕಾರಕ್ಕೆ ಹೋರಾಟದ ಮೂಲಕ ಬಿಸಿ ಮುಟ್ಟಿಸಬೇಕು. ವಿದ್ಯುತ್ ಖಾಸಗೀಕರಣ ಮಾಡುವಲ್ಲಿ ಮುಂದಾಗಿದ್ದು, ದುಡಿಮೆಗೆ ತಕ್ಕ ವೇತನ ನೀಡದಿರುವುದು ಕಾರ್ಪೊರೇಟ್ ಕಂಪನಿ ಹುಟ್ಟು ಹಾಕಿ ಕಂಪನಿಗಳೊಂದಿಗೆ ಶ್ಯಾಮೀಲಾಗಿ ದುಡಿದ ಹಣದಲ್ಲಿ ತಾವು ಅರ್ಧ ಭಾಗ ಹಂಚಿಕೊಂಡು ನಮಗೆ ಅರ್ಧ ಹಣ ನೀಡುವ ಸರ್ಕಾರದ ಇಂತಹ ಧೋರಣೆ ಸಂಪೂರ್ಣ ಜನವಿರೋಧಿ ನೀತಿಯಾಗಿದೆ ಎಂದು ಹರಿಹಾಯ್ದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತನಗೌಡ ಚೇಗರಡ್ಡಿ ಮಾತನಾಡಿ, ರೈತರು ಮನವಿ ಸಲ್ಲಿಸಲು ಬಂದರೂ ಕೂಡ ಮನವಿ ಸ್ವೀಕರಿಸಲು ತಹಶೀಲ್ದಾರ ಬಾರದಿರುವುದು ಖಂಡನೀಯ. ತಹಶೀಲ್ದಾರ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ. ಸರ್ಕಾರ ಐದು ವರ್ಷ ರುತ್ತದೆ. ಆದರೆ ಅರವತ್ತು ವರ್ಷ ಕೆಲಸ ಮಾಡಬೇಕಾದವರು ಅಧಿಕಾರಿಗಳು ಎಂದು ಕಿಡಿಕಾರಿದ್ರು.

ಸಿದ್ಧಾರೂಢ ಮಠದಿಂದ ಹೊರಟ ಪ್ರತಿಭಟನಾ ರ್ಯಾಲಿಯು ಸೂಡಿ ಕ್ರಾಸ್ ಮತ್ತು ಮುಲ್ಲಾನಭಾವಿ ಕ್ರಾಸ್ ಮೂಲಕ ಹಾಯ್ದು ತಹಸೀಲ್ದಾರ್ ಕಚೇರಿಗೆ ತಲುಪಿ ಮನವಿ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ರೈತ ಸಂಘಟನೆ ಮುಖಂಡ ಸಂಕಪ್ಪ ಕುರಹಟ್ಟಿ, ಹನಮಂತ ತಾಳಿ, ಮೈಲಾರಪ್ಪ ಮಾದರ, ಮಾರುತಿ ಸೆಗಣಿ ಸಂಗಣ್ಣ ದಂಡಿನ, ಮಾದೇಗೌಡ ಪಾಟೀಲ್, ಮಲ್ಲಪ್ಪ ಹೊಳಗಿ, ಸುರೇಶ ಅಬ್ಬಿಗೇರಿ, ಕುಮಾರ ಪೂಜಾರ್, ಸಲೀಮ್ ಹುಲ್ಲೂರ, ನಾಗರಾಜ ಹುರಳಿ ದುಂಡಮ್ಮ ಬಳಿಗೇರ ಶಶಿಕಲಾ ಗಾಣಿಗೇರ, ಶೋಭಾ, ಸುನಂದಾ ಘಂಟಿ, ಗಂಗಮ್ಮ ಪೂಜಾರ್, ಲೀಲಾ ಪತ್ತಾರ್, ಗಂಗಮ್ಮ ದೇವರಡ್ಡಿ, ಬಸವರಾಜ್ ಸಜ್ಜೇನವರ ರೇಣುಕಾ ತಳವಾರ್.ಇನ್ನಿತರು ಉಪಸ್ಥಿತರಿದ್ದರು. ರೈತಪರ ಹಾಗೂ ದಿನಗೂಲಿ ನೌಕರರ ಸಂಘಟನೆಗಳು ಪಾಲ್ಗೊಂಡಿದ್ದವು.

Exit mobile version