ಹೂವಿನಹಡಗಲಿ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದ ಐಕ್ಯತೆಗೆ ಭಾಷಾ ಸೌಹಾರ್ಧತೆಯೇ ಸಹಕಾರಿಯಾಗಿದೆ ಎಂದು ಜಿಬಿಆರ್ ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ ಹೇಳಿದರು.
ಪಟ್ಟಣದ ಉಪ ಕಾರಾಗೃಹದಲ್ಲಿ ಜರುಗಿದ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಭಾಷಾ ಸೌಹಾರ್ದತೆ ಎಂಬ ವಿಷಯ ಕುರಿತು ಮಾತನಾಡಿದರು.
ನಮ್ಮ ದೇಶ ಹಲವು ಕ್ಷೇತ್ರಗಳಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಏಕೈಕ ರಾಷ್ಟçವಾಗಿದ್ದು, ವಿವಿಧತೆಯಲ್ಲಿ ಸಂಸ್ಕೃತಿ ಬೆಸೆಯುವ ಮಾರ್ಗವೇ ಭಾಷಾ ಸೌರ್ದತೆಯಾಗಿದೆ. ವಿವಿಧ ಭಾಷೆಗಳ ಮೂಲಕ ಭಾವನೆಗಳಲ್ಲಿ ಒಂದಾಗಿ ಐಕ್ಯತೆಯನ್ನು ಸಾಧಿಸಬೇಕಾಗಿದೆ. ಇಂದು ಮನೆಯ ಒಳಗಡೆ ಮಾತೃಭಾಷೆ ಹೊರಗಡೆ ಇದ್ದಾಗ ವ್ಯವಹಾರಿಕವಾಗಿ ಸಹೋದರ ಭಾಷೆಗಳನ್ನು ಕಲಿಯುವ ಅಗತ್ಯವಿದೆ ಎಂದರು. ಸರ್ವ ಭಾಷಾ ಸಹಿಷ್ಣುತೆ ನಮ್ಮಲ್ಲಿ ಇದ್ದಾಗ ಮಾತ್ರ ರಾಷ್ಟಿçÃಯ ಐಕ್ಯತೆ ಸಾಧ್ಯವಾಗುವುದು ಎಂದು ಹೇಳಿದರು. ನಮ್ಮ ದೇಶದ ನೋಟಿನಲ್ಲಿ ೧೬ ಭಾಷೆಗಳನ್ನು ಮುದ್ರಿಸಿದ ಜಗತ್ತಿನ ಏಕೈಕ ದೇಶದವರು ನಾವು ಎಂಬ ಹೆಮ್ಮೆ ನಮಗಿದೆ ಎಂದರು.
ಕಾರಾಗೃಹದ ಸಿಬ್ಬಂದಿ ಮೌಲಾಸಾಬ್ ಜೆ.ನದಾಫ್ ಮಾತನಾಡಿ ಶರಣರ ಜೀವನದ ಅಂಶಗಳ ಮೂಲಕ ತಿಳಿಸಿದ ಅವರು ಭಾಷಾಭಿಮಾನ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಿರಿ ಎಂದು ಹೇಳಿದರು. ಗೃಹ ರಕ್ಷಕದಳದ ಪಿ.ಶಂಕರರಾವ್ ಮಾತನಾಡಿದರು.
ಉಪಕಾರಗೃಹದ ಮುಖ್ಯ ಅಧೀಕ್ಷಕರಾದ ಎನ್.ಎಂ.ಕೆಂಪಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಭಾಷೆಗಳನ್ನು ಕಲಿಯುವುದರ ಜೊತೆಗೆ ಉತ್ತಮ ನಾಗರಿಕರಾಗಿರೆಂದು ಹೇಳಿದರು. ಹಿರಿಯರು ಕಂಡ ರಾಮರಾಜ್ಯದ ಕನಸು ನನಸಾಗಬೇಕಿದೆ ಎಂದರು.
ಉಪನ್ಯಾಸಕ ಡಾ.ಹೆಚ್.ಕೆ.ಮಹೇಶ್, ಸಿಬ್ಬಂದಿಗಳಾದ ಶ್ರೀಶೈಲ.ಆರ್.ನಾವಿ, ಎಫ್.ಜಿ.ಬಾರಿಕರ, ಗೃಹ ರಕ್ಷಕದಳದ ಕೆ.ರಾಜಪೀರ್ ಉಪಸ್ಥಿತರಿದ್ದರು.