ಗದಗ: ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಚ್.ವೈ.ರುದ್ರಾಕ್ಷಿ ಹಾಗೂ ಅವರ ವಾಹನ ಚಾಲಕ ಫಕ್ಕೀರಪ್ಪ ಪೂಜಾರ, ಜ್ಯೂಸ್ ಸೆಂಟರ್ ಮಾಲಿಕ ಪ್ರತೀಕ್ ಬೇವಿನಕಟ್ಟಿ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  

ಬೆಟಗೇರಿಯ ಮಂಜುನಾಥ್ ಸಜ್ಜನ್ ಅವರ ದೂರಿನನ್ವಯ ಇಂದು ದಾಳಿ ನಡೆಸಿದ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬೆಟಗೇರಿಯ ಮಂಜುನಾಥ್, ತಮ್ಮ 11 ಎಕರೆ ಜಮೀನನ್ನು ನಿಗಮಕ್ಕೆ ಮಾರಾಟ ಮಾಡಿದ್ದರು. ಹೀಗಾಗಿ ನಿಗಮದಿಂದ ಮಂಜುನಾಥ್ ಅವರಿಗೆ 12,57,500 ರೂ, ಮಂಜೂರು ಮಾಡಬೇಕಿತ್ತು. ಹಣ ಮಂಜೂರು ಮಾಡಲು ಅಧಿಕಾರಿ 40,000 ಹಣದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ವಿಚಾರವಾಗಿ ಇಂದು 40,000 ಹಣ ಕೊಡಲು ಮಂಜುನಾಥ್ ಹೋದಾಗ ತಮ್ಮ ಕಾರು ಚಾಲಕನ ಬಳಿ ಕೊಡಲು ಹೇಳಿದ್ದಾರೆ. ಆದರೆ ಕಾರು ಚಾಲಕ ಜ್ಯೂಸ್ ಸೆಂಟರ್ ಮಾಲಿಕನ ಬಳಿ ಕೊಡಲು ಹೇಳಿದ್ದಾನೆ. ಕೊನೆಗೆ ಜ್ಯೂಸ್ ಸೆಂಟರ್ ಮಾಲಿಕ ಪ್ರತೀಕ ಹಣ ಪಡೆಯುವಾಗ ಸಿಕ್ಕಿ ಬಿದ್ದಿದ್ದಾನೆ.  

ಎಸಿಬಿ ಡಿಎಸ್ಪಿ ವಾಸುದೇವ್ ರಾಮ್ ಎನ್ ನೇತೃತ್ವದಲ್ಲಿ, ವಾಯ್.ಎಸ್.ಧರಣಾನಾಯ್ಕ್, ರವೀಂದ್ರ ಕುರಬಗಟ್ಟಿ, ಎಮ್.ಎಮ್ ಅಯ್ಯನಗೌಡರ್, ಆರ್.ಎಚ್.ಹೆಬಸೂರು, ಎನ್.ಎಸ್.ತಾಯಣ್ಣವರ, ವೀರೇಶ್ ಜೋಳದ, ಐ.ಸಿ.ಕರಿಗಾರ, ತಾರಪ್ಪ ಕಾರ್ಯಾಚರಣೆಯಲ್ಲಿದ್ದರು.

Leave a Reply

Your email address will not be published. Required fields are marked *

You May Also Like

ಜಿಲ್ಲಾ ಪಂಚಾಯಿತಿ; ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಪಂಚಾಯಿತಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಸಕ್ತ ಅಭ್ಯರ್ಥಿಗಳು ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು 25/3/2021ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ.

ವೈದ್ಯಾಧಿಕಾರಿ ಆತ್ಮಹತ್ಯೆಗೆ ಕಾರಣರಾದವರನ್ನು ಶಿಕ್ಷಿಸಿ: ಡಿ.ಕೆ.ಶಿವಕುಮಾರ್

ಆತ್ಮಹತ್ಯೆ ಮಾಡಿಕೊಂಡಿರುವ ವೈದ್ಯಾಧಿಕಾರಿ ಕುಟುಂಬಕ್ಕೆ ಸರ್ಕಾರ 50 ಲಕ್ಷ ರೂಪಾಯಿ ದುಡ್ಡು ನೀಡುವುದರಿಂದ ಅವರಿಗೆ ನ್ಯಾಯ ಸಿಗುವುದಿಲ್ಲ. ಆತ್ಮಹತ್ಯೆಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.

ಗದಗ ಜಿಲ್ಲೆಯಲ್ಲಿ ಊರೂರು ವ್ಯಾಪಿಸುತ್ತಿರುವ ವೈರಸ್: ಯಾವ ಊರಲ್ಲಿ ಎಷ್ಟು?

ಗದಗ: ಜಿಲ್ಲೆಯಲ್ಲಿ ಶುಕ್ರವಾರ ದಿ. 17 ರಂದು 60(ಹೆಲ್ಥ್ ಬುಲೆಟಿನ್ ನಲ್ಲಿ 59) ಜನರಿಗೆ ಕೊವಿಡ್-19…

ಗೋವಾದಿಂದ ಬಂದ ಕೂಲಿ ಕಾರ್ಮಿಕ: ಕೊರೊನಾ ಸೋಂಕಿನಿಂದ ಸಾವು!

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ. ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಹಾನಾಪೂರ ಎಲ್.ಟಿ ತಾಂಡಾ ಗ್ರಾಮದ…