ಮಸ್ಕಿ: ಕ್ಷೇತ್ರದ ಮತದಾರರಿಗೆ ಮೋಸ ಮಾಡಿರುವ ಪ್ರತಾಪಗೌಡಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷಕ್ಕೆ ಆರ್. ಬಸನಗೌಡ ತುರವಿಹಾಳ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ಪ್ರತಾಪಗೌಡ ಅವರು ಹಣೆಗೆ ವಿಭೂತಿ ಹಚ್ಚುತ್ತಾರೆ. ಇವರು ಬಿಜೆಪಿಯಿಂದ ಬಂದ ಇವರಿಗೆ ಸ್ವಾಗತ ಮಾಡಿದ್ದೇವೆ. ಆದರೆ ಇವರು ಚೆಂದೂಲಿ ಕುದುರೆ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದರು.

ಪ್ರತಾಪಗೌಡ ಅವರನ್ನು ಪಕ್ಷ ಶಾಸಕನಾಗಿ ಮಾಡಿತ್ತು. ‌ಅದೇ ಪಕ್ಷಕ್ಕೆ ಚೂರಿ ಹಾಕಿದ್ದಾರೆ. ಅವರು ಮಾನ ಮರ್ಯಾದೆ ಇಲ್ಲದ ವ್ಯಕ್ತಿಗಳು. ಪಕ್ಷಾಂತರ ಮಾಡುವರು ಜನ ದ್ರೋಹಿಗಳು. ಮಸ್ಕಿ ಕ್ಷೇತ್ರ ಹಿಂದುಳಿದ ಅಂತ ಹೇಳಿದಾಗ 200ಕೋಟಿ ಹಣ ಕೊಟ್ಟಿದ್ದೆ‌. ಮಸ್ಕಿ ಕ್ಷೇತ್ತ ಅಭಿವೃದ್ಧಿ ಆಗಿದ್ದು ಕಾಂಗ್ರೆಸ್ ಪಕ್ಷದಿಂದ. ಅಲ್ಲದೇ ಗೆಲ್ಲಿಸಿದ ಪಕ್ಷಕ್ಕೆ ದ್ರೋಹ ಬಗೆದು ಬಿಜೆಪಿಗೆ ಮಾರಾಟವಾಗಿದ್ದಾರೆ. ಹಣದ ಹೊಳೆ ಹರಿಸಿ ಶಿರಾದಲ್ಲಿ ಗೆದ್ದಿದ್ದಾರೆ ಹೊರತು ಜನರ ಮನಸ್ಸು ಗೆದ್ದಿಲ್ಲ ಅಂದರು.

2008, 2013 ಚುನಾವಣೆಯಲ್ಲಿ ಬಿಜೆಪಿಗೆ ಜನ ಕೃಪೆ ತೋರಿಲ್ಲ.‌ ಶಾಸಕರಿಗೆ ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಕೊರೊನಾ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರಕಾರ 2ಸಾವಿರ ಕೋಟಿ ರೂಪಾಯಿ ಹಣ ಲೂಟಿ ಮಾಡಿದೆ. ಕೇಂದ್ರದಲ್ಲಿ ಕೋಮುವಾದಿ ಸರಕಾರ ಬಂದಿದೆ. ದೇಶದಲ್ಲಿ ಮೋದಿ ಅಷ್ಟು ಸುಳ್ಳುಗಾರ ಯಾರಿಲ್ಲ. ಕೊರೊನಾ ಲಸಿಕೆ ಕಂಡು ಹಿಡಿಯುವ ಬದಲಿಗೆ ದ್ವೀಪ ಹಚ್ಚಿ. ತಮಟೆ ಬಾರಿಸಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಈ ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ವಿಧವಾ ವೇತನ, ವೃದ್ಯಾಪ ವೇತನ ನಮ್ಮ ಸರಕಾರದಲ್ಲಿ ಯಾವತ್ತು ನಿಂತಿಲ್ಲ. ಇದೀಗ ಕೊಟ್ಯಾಂತರ ಹಣ ನಿಂತಿದೆ. ಬಡವರು ಹಸಿವುನಿಂದ ಬಳಲ ಬಾರದು ಎಂದು ಅನ್ನಭಾಗ್ಯ ಜಾರಿಗೆ ತಂದಿದ್ದೇವೆ. ಆದರೆ ಒಂದೇ ವರ್ಷದಲ್ಲಿ ಯಡಿಯೂರಪ್ಪ ಅವರು 90ಕೋಟಿ ಸಾಲ ಮಾಡುತ್ತಾರೆ. ಇಂತಹ ಸರಕಾರಕ್ಕೆ ಎಚ್ಚರಿಕೆ ಕೊಡಲು ಉಪ ಚುನಾವಣೆಯಲ್ಲಿ ಆರ್.‌ಬಸನಗೌಡ ಅವರಿಗೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಹೆತ್ತ ತಾಯಿಗೆ ದ್ರೋಹ ಬಗೆದ ಪ್ರತಾಪಗೌಡ ಅವರ ಸ್ಥಾನಕ್ಕೆ ಆರ್.‌ಬಸನಗೌಡ ಅವರಿದ್ದಾರೆ. ‌ಜನರ ಸೇವೆ ಮಾಡುವರಿಗೆ ಸದಾವಕಾಶ ಇರುತ್ತದೆ. ಪಕ್ಷದಲ್ಲಿ ಗೆದ್ದು ಮೋಸ ಮಾಡಿದವರು ಪಕ್ಷ ಬಿಟ್ಟಿದ್ದೆ ಒಳ್ಳೆಯದು. ಉಪ ಚುನಾವಣೆಯಲ್ಲಿ  ನಾವು ಸೊತಿದ್ದೇವೆ ಎಂದು ಕಾಂಗ್ರೆಸ್ ದೃತಿಗೆಟ್ಟಿಲ್ಲ. ಮಸ್ಕಿ ಕ್ಷೇತ್ರದ ಮತದಾರರ ಬೆಂಬಲ ನೋಡಿದರೆ 20ಸಾವಿರ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದ್ದು ಸುಳ್ಳಾಗಿದೆ. ದೇಶಕ್ಕೆ ಸಂವಿಧಾನ ಕೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಈ ಭಾಗದ ರೈತರಿಗೆ ಅನುಕೂಲವಾಗುವ ನಂದವಾಡಗಿ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ ಎಂದರು.

 ಈ ಸಂದರ್ಭದಲ್ಲಿ ಕೆಪಿಸಿಸಿ ಕಾಯ್ರಾಧ್ಯಕ್ಷ ಈಶ್ವರ ಖಂಡ್ರೆ, ಸತೀಸ ಜಾರಕಿಹೊಳಿ. ಆರ್.‌ಬಸನಗೌಡ ತುರವಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜ್. ಮಾಜಿ ಸಂಸದ ಬಿ.ವಿ.ನಾಯಕ. ಶಾಸಕ ಡಿ.ಎಸ್.ಹುಲಿಗೇರಿ, ಶಾಸಕ ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ. ಹನುಂಮತಪ್ಪ ಮುದ್ದಾಪೂರ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *

You May Also Like

ಕುಡಿಯೋ ನೀರಿಗೆ ಆದ್ರಳ್ಳಿ ಜನ್ರ ಪರದಾಟ: ಹತ್ತು ದಿನದ್ ಹೊತ್ತಾತು ಬೊಗಸಿ ನೀರು ಬಂಗಾರ ಆಗೈತಿ..!

ನಮ್ಗ ನೀರ್ ಇಲ್ದ ಬಾಳ್ ತೊಂದರಿ ಆಗೈತಿ, ಕಾಲಿಲ್ಲದವ್ರು ನಾವ್, ನೀರ್ ಹ್ಯಾಂಗ್ ತರಬೇಕ್ರಿ, ನಮಗ್ಯಾರು ದಿಕ್ಕಿಲ್ಲ. ನೀರಿನ ಸಮಸ್ಯೆ ಬಗೆಹರಿಸ್ರಿ ಅಂತ ಪಂಚಾಯತಿಗೆ ಹೋಗಿ ಹೇಳಿದ್ರ ಪಂಚಾಯತಿಯವ್ರು ದರಕಾರಕ್ಕ ತುಗೋವಲ್ರು. ಹತ್ತು ದಿನದ್ ಹೊತ್ತಾತು. ಹಿಂಗ್ ಬಾಳ್ ಸರಿ ಮೋಟರ್ ಸುಡತೈತಿ. ಆದ್ರ ಇದಕ್ ಯಾವುದು ಶಾಶ್ವತ ಪರಿಹಾರ ಇಲ್ರಿ. ಹಿಂಗಂತ ಹೇಳಿದ್ದು 70ರ ಆಸುಪಾಸಿನಲ್ಲಿರುವ ಅಜ್ಜಿ.

ನಿಧಿ ನೀಡದ ಮನೆಗಳು ಗುರುತಿಸುವ ಸಂಸ್ಕೃತಿ ನಮ್ಮದಲ್ಲ

ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡದ ಮನೆಗಳನ್ನು ಗುರುತಿಸುವ ಸಂಸ್ಕೃತಿ ನಮ್ಮದಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕೆ ಹೇಳಿಕೆಗೆ ಆರೆಸ್ಸೆಸ್ ಸರ ಸಂಘ ಚಾಲಕ ಡಾ.ಮೋಹನ್ ಭಾಗವತ್ ಅವರು ತುರುಗೇಟು ನೀಡಿದ್ದಾರೆ.

ಸಚಿವ ಸಿ ಸಿ ಪಿ ಕ್ಷಮೆ ಯಾಚಿಸಲಿ: ಅರಬರ್

ಉತ್ತರಪ್ರಭ ಸುದ್ದಿ ಗದಗ: ಮೆಣಿಸಗಿ ಗ್ರಾಮದಲ್ಲಿ ಹರಿಜನ ಗಿರಿಜನ ಅಭಿವೃದ್ಧಿ ವಿವಿಧ ಕಾಮಗಾರಿ ಚಾಲನೆ ನೀಡಿ…