ಲಕ್ಷ್ಮೇಶ್ವರ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಮನೆ-ಮನೆಗೆ ತಲುಪಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಧಾರವಾಡ ವಿಭಾಗೀಯ ಬಿಜೆಪಿ ಸಂಘಟನಾ ಪ್ರಭಾರಿ ಲಿಂಗರಾಜ್ ಪಾಟೀಲ್ ಹೇಳಿದರು.

ಅವರು ಪಟ್ಟಣದ ಬಿಸಿಎನ್ ಪಾಲಿಟೆಕ್ನಿಕ್ ನಲ್ಲಿ ನಡೆದ ಬಿಜೆಪಿ ಶಿರಹಟ್ಟಿ ಮಂಡಲದ 2 ದಿನದ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿ ಪ್ರತಿ ಹಳ್ಳಿ, ಶಹರದಲ್ಲಿ ಭೂತ್ ಮಟ್ಟದಿಂದ ನಮ್ಮ ಪಕ್ಷ ಸಂಘಟನೆಯಾಗಬೇಕು ಎಂದರು.

ಎರಡು ದಿನಗಳ ಪ್ರಶಿಕ್ಷಣ ವರ್ಗದಲ್ಲಿ ಹತ್ತು ವಿಷಯಗಳ ಕುರಿತು ಪದಾಧಿಕಾರಿಗಳಿಗೆ ವಿವಿಧ ತರಬೇತಿ ನೀಡಿ, ಪಕ್ಷದ ಕಾರ್ಯಕ್ಕೆ ಸಜ್ಜುಗೊಳಿಸಲಾಯಿತು.

ಶಿರಹಟ್ಟಿ ಮಂಡಲದ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ವಿಭಾಗೀಯ ಪ್ರಭಾರಿ ನಾರಾಯಣ್ ಜರ್ತಾರ್ಕರ್, ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಪ್ರಶಿಕ್ಷಣ ವರ್ಗದ ಸಂಚಾಲಕ ಶ್ರೀಪತಿ ಉಡುಪಿ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಗಂಗಾಧರ ಮೆಣಸಿನಕಾಯಿ ಪ್ರವೀಣ್ ಪಾಟೀಲ್, ನಗರ ಘಟಕದ ಅಧ್ಯಕ್ಷ ದುಂಡೇಶ ಕೊಟಗಿ, ಪರುಶುರಾಮ್ ಇಮ್ಮಡಿ, ನಾಗರಾಜ ಕುಲಕರ್ಣಿ, ವಿಜಯ ಕುಂಬಾರ, ಪ್ರಕಾಶ ಮಾದ್ನೂರ, ಅರುಣ್ ಪಾಟೀಲ್, ಸಂತೋಷ್ ಜಾವೂರ, ಉಳುವೇಶ ಬಸವರಾಜ ಚಕ್ರಸಾಲಿ, ಹಾಲಪ್ಪ ಸುರಣಗಿ, ಜಿಪಂ ಹಾಗೂ ತಾಪಂ ಸದಸ್ಯರು, ಪುರಸಭೆ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಲಕ್ಷ್ಮೆಶ್ವರದಲ್ಲಿ ಮಣ್ಣು ಮುಕ್ಕುತ್ತಿದ್ದರೂ ಅಧಿಕಾರಿಗಳು ಮೌನ!

ಅನ್ನ ಭಾಗ್ಯ ಯೋಜನೆಯ ಅಕ್ಕಿ, ಮರಳು ಲೂಟಿ ಮಾಡುವುದು ಆಗಾಗ ಸಾಮಾನ್ಯವಾಗಿದೆ. ಆದರೆ, ತಾಲೂಕಿನಲ್ಲಿ ರೈತರ ಜಮೀನುಗಳಲ್ಲಿ ಮಣ್ಣು ಕೂಡ ಸದ್ದಿಲ್ಲದೇ ಲೂಟಿಯಾಗುತ್ತಿರುವುದು ಬೆಳಕಿಗೆ ಬಂದಿದೆ.

ಕೊರೊನಾ ಸೋಂಕಿನಿಂದ ಗುಣಮುಖನಾದ ವ್ಯಕ್ತಿ ಆತ್ಮಹತ್ಯೆಗೆ ಶರಣು

ರಾಯಚೂರು : ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ವ್ಯಕ್ತಿ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಸಿಂಧನೂರು…

ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ನಿಗದಿ: ಎರಡು ಹಂತದಲ್ಲಿ ಚುನಾವಣೆ

ರಾಜ್ಯದಲ್ಲಿ ಈಗಾಗಲೇ ಹಳ್ಳಿ ಫೈಟ್ ಗೆ ದಿನಾಂಕ ಯಾವಾಗ ಎನ್ನುವ ಕುತೂಹಲ ಬಹುತೇಕರಲ್ಲಿತ್ತು. ಆದರೆ ಇಂದು ಕೊನೆಗೂ ಚುನಾವಣಾ ಆಯೋಗ ಮೂಹುರ್ತ ಫಿಕ್ಸ್ ಮಾಡಿದ್ದು, ಚುನಾವಣೆ ದಿನಾಂಕಕ್ಕೆ ಎದುರು ನೋಡುತ್ತಿದ್ದವರ ಸಂತಸಕ್ಕೆ ಕಾರಣವಾಗಿದೆ

ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಿ: ನೆಲಗುಡ್ಡದ

ಉತ್ತರಪ್ರಭ ಸುದ್ದಿಶಿರಹಟ್ಟಿ : ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ…