ಬೆಳಗಾವಿ: ಕುಂದಾ ನಗರಿಯಲ್ಲೀಗ ಕೊಳಚೆ ಕಲ್ಲಿನ ರಾಜಕಾರಣದ್ದೆ ಸುದ್ದಿ ಸದ್ದು ಮಾಡ್ತಿದೆ. ಮತ್ತೆ ಸಚಿವ ರಮೇಶ್ ಜಾರಕಿಹೊಳಿ-ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಕ್ ವಾರ್ ಜೋರಾಗಿಯೇ ಶುರುವಾಗಿದೆ.
ಕಳೆದ ಎರಡು ದಿನಗಳ ಹಿಂದಷ್ಟೆ ಬೆಳಗಾವಿ ಗ್ರಾಮೀಣದ ಪ್ರಗತಿ ಪರಿಶೀಲನೆ ಮಾಡಿದ ಅವರ ನಡೆ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಮುಂದಿನ ಎಲೆಕ್ಷನ್ ನಲ್ಲಿ ಗ್ರಾಮೀಣದ ಕಾಳಜಿ ತೋರಿಸ್ತಿನಿ ಅಂತ ಹೇಳಿದ ಸಚಿವರಿಗೆ ನಾನು ಸವಾಲು ಸ್ವೀಕರಿಸ್ತಿನಿ ಅಂತ ಲಕ್ಷ್ಮೀ ತಿರುಗೇಟು ನೀಡಿದರು.
ಮಳೆ ನಿಂತರು ಮಳೆ ಹನಿ ನಿಲ್ಲಲ್ಲ ಎನ್ನುವಂತೆ ಸೋಮವಾರವಷ್ಟೆ ಬೆಳಗಾವಿ ಗ್ರಾಮೀಣ ತಾಲೂಕಿನ ಪ್ರಗತಿ ಪರಿಶೀಲನೆ ನಡೆಯಿತು. ಇದರಲ್ಲಿ ಸ್ವತ: ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಪ್ರತಿನಿಧಿಸುವ ಕಾರಣ ಈ ಸಭೆಗೆ ಹೆಚ್ಚು ಮಹತ್ವ ಬಂದಿತ್ತು. ಸಭೆಯಲ್ಲಿಯೂ ಸಚಿವ ರಮೇಶ್ ಜಾರಕಿಹೊಳಿ, ಕೇಂದ್ರ ಸಚಿವ ಸುರೇಶ್ ಅಂಗಡಿ ಹಾಗೂ ಕ್ಷೇತ್ರದ ಶಾಸಕಿ ಹೆಬ್ಬಾಳ್ಕರ್ ಭಾಗವಹಿಸಿದ್ರು.
ಸಭೆಯಲ್ಲಿ ಕೂಡ ಇಬ್ಬರು ಸಚಿವರ ಜೊತೆ ಶಾಸಕಿ ಹೆಬ್ಬಾಳ್ಕರ್ ಅವರ ಟಾಕ್ ವಾರ್ ನಡದೇ ಇತ್ತು. ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣದ ಪ್ರಗತಿ ಪರಿಶೀಲನೆಗೆ ಕರೆದು ಗ್ರಾಮೀಣ ಭಾಗದ ಪ್ರಗತಿ ಬಗ್ಗೆ ಹೆಚ್ಚು ಚರ್ಚೆ ನಡೆದಿಲ್ಲ ಎಂದು ಆರೋಪಿಸಿದ್ರು.
ಜೊತೆಗೆ ಅನ್ನಭಾಗ್ಯ ಯೋಜನೆ ಬಗ್ಗೆ ಪ್ರಾಸ್ತಾಪಿಸಿದ ಕೆಂದ್ರ ಸಚಿವ ಸುರೇಶ್ ಅಂಗಡಿ ಅವರಿಗೂ ಟಾಂಗ್ ಕೊಟ್ಟಿದ್ರು. ಆದರೆ ಶಾಸಕರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ್ ಜಾರಕಿಹೊಳಿ ನಮಗೆ ಬೆಳಗಾವಿ ಗ್ರಾಮೀಣದ ಮೇಲೆ ಎಷ್ಟು ಕಾಳಜಿ ಇದೆ ಅಂತ ಚುನಾವಣೆ ಬರಲಿ ತೋರಿಸುತ್ತೇವೆ. ಈಗೆಲ್ಲ ಅದರ ಬಗ್ಗೆ ಚರ್ಚೆ ಬೇಡ. ಚುನಾವಣೆಯಲ್ಲಿ ನಮ್ಮ ಕಾಳಜಿ ತೋರಿಸುತ್ತೇವೆ ಎಂದರು.
ಈಗಾಗಲೇ ಬೆಳಗಾವಿ ಜಿಲ್ಲೆಯ ಪಿಎಲ್ಡಿ ಬ್ಯಾಂಕ್ ಚುನಾವಣೆಯಿಂದಲೇ ರಮೇಶ್-ಲಕ್ಷ್ಮಿ ರಾಜಕೀಯ ಕದನ ಆರಂಭವಾಗಿದೆ. ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದಾಗಲೇ ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ. ಒಂದೊಂದು ಕ್ಷೇತ್ರಕ್ಕೆ 5 ಕೋಟಿ ಖರ್ಚು ಮಾಡುವುದಾಗಿ ಬಹಿರಂಗವಾಗಿ ಹೇಳಿದ್ದರು.
ಆದರೆ ಇದೀಗ ಕಳೆದ 6 ಬಾರಿ ಶಾಸಕರಾಗಿ ಆಯ್ಕೆಯಾದ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರದ ಪ್ರಗತಿ ಪರಿಶೀಲನೆ ಮಾಡಿದ್ದು ಬಹಳಷ್ಟು ವಿರಳ. ಅಂಥದ್ರಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವರಾದ ಕೂಡಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರಗತಿ ಪರಿಶೀಲನೆ ಮಾಡಿದ್ದು ಹಲವಾರು ಚರ್ಚೆ ಹುಟ್ಟುಗೆ ಅವಕಾಶ ನೀಡಿದೆ.
ಈ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಡಿಪಿ ಸಭೆ ಸಾವಾಲು-ಜವಾಬಿಗೆ ಸಾಕ್ಷಿಯಾಯಿತು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಇನ್ನು ಸಚಿವ ರಮೇಶ್ ಜಾರಕಿಹೊಳಿ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನಾನು ಸಚಿವರ ಸವಾಲು ಸ್ವೀಕರಿಸುತ್ತೇನೆ ಎಂದರು. ಕೊಳಚೆಯಲ್ಲಿ ಕಲ್ಲು ಒಗೆಯುವುದು ಬೇಡ ಎಂದ ಸಚಿವರ ಹೇಳಿಕೆಗೆ ಮಾತ್ರ ಪ್ರತಿಕ್ರಿಯಿಸಿರಲಿಲ್ಲ.
ಈಗಾಗಲೇ ಪಿ ಎಲ್ ಡಿ ಬ್ಯಾಂಕ್ ಚುನಾವಣೆಯಿಂದಲೇ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತನ್ನ ಅಧಿಪತ್ಯ ಸಾಧಿಸುತ್ತಿರುವ ಲಕ್ಷ್ಮೀ, ಇತ್ತಿಚೆಗೆ ಎಪಿಎಂಸಿ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ಪಾರುಪಥ್ಯ ಮೆರೆದಿದ್ದರು. ಆದರೆ ಸದ್ಯ ಮುಂದಿನ ಬೆಳಗಾವಿ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆ ತೀವ್ರ ಹಣಾಹಣಿ ನಡೆಯುವ ಸಾಧ್ಯತೆ ಇದ್ದು, ಇದರ ಬೆನ್ನಲ್ಲೆ ಈಗ ಮುಂದಿನ ಎಮ್.ಎಲ್.ಎ ಚುನಾವಣೆಯ ಬಗ್ಗೆ ಪ್ರಾಸ್ತಾಪಿಸಿರುವ ರಮೇಶ್ ಜಾರಕಿಹೊಳಿ ಅವರ ಮಾತಿನ ಒಳ ಅರ್ಥವೇನು ಎಂದು ಜನ ಪ್ರಶ್ನಿಸುತ್ತಿದ್ದಾರೆ. ಮುಂದಿನ ಡಿಸಿಸಿ ಬ್ಯಾಂಕ್ ಚುನಾವಣೆ ಉದ್ದೇಶದಿಂದ ಹೆಬ್ಬಾಳ್ಕರ್ ಅವರನ್ನು ಬೆದರಿಸುವ ತಂತ್ರನಾ ಎಂದು ಜನರು ಚರ್ಚಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯ ಸರ್ಕಾರ ವಿರುದ್ಧ ಕನಕಶ್ರೀ ಆಕ್ರೋಶ

ಸಾರಾಯಿ ಮಾರಾಟ ಮತ್ತೆ ಪ್ರಾರಂಭಿಸಿರುವ ಕಾರನ ರಾಜ್ಯ ಸರ್ಕಾರದ ವಿರುದ್ಧ ಕನಕ ಶ್ರೀಗಳು ಕಿಡಿಕಾರಿದ್ದಾರೆ.

ಗದಗ ಜಿಲ್ಲೆಯ ಖಾಕಿ ಖದರ್ ಗೆ ಜನರು ಖುಷ್..!: ಕಳೆದ ವಸ್ತುಗಳು ಕೈಸೇರಿದ್ದಕ್ಕೆ ಜನ್ರು ಖುಷ್ !

ಖಾಕಿ ತನ್ನ ಖದರ್ ತೋರಿಸಿದರೆ ಏನೆಲ್ಲ ಮಾಡಬಹುದು ಎನ್ನುವುದಕ್ಕೆ ಗದಗ ಜಿಲ್ಲೆಯ ಪೊಲೀಸರು ತಾಜಾ ಉದಾಹರಣೆ. ಒಂದು ವರ್ಷದಿಂದ ಜಿಲ್ಲೆಯಲ್ಲಿ ಆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನ ಜಾಲ ಭೇದಿಸಿ ಕಳ್ಳರ ಹೆಡೆಮುರಿ ಕಟ್ಟಿ ಜನರು ಕಳೆದುಕೊಂಡ ವಸ್ತುಗಳನ್ನು ಮರಳಿಸುವ ಮೂಲಕ ಜಿಲ್ಲಾ ಪೊಲೀಸ್ ಇಂದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ನೂರರ ಗಡಿದಾಟಿದ ಕೊರೊನಾ ಪ್ರಕರಣಗಳು

ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ…