ರಗಡ್ ಲುಕ್‌ನಲ್ಲಿ ಮಿಂಚಿದ ಹುಬ್ಬಳ್ಳಿ ಗೃಹಿಣಿಯರು

ಹುಬ್ಬಳ್ಳಿ: ಮದುವೆಯಾದ ಮಹಿಳೆಯರು ಮನೆ, ಮಕ್ಕಳು ಸಂಸಾರ ಅಂತಾ ಸಾಂಸಾರಿಕ ಜೀವನದಲ್ಲಿ ಬ್ಯುಸಿ ಆಗಿ ಬಿಡುತ್ತಾರೆ. ಆದರೆ ಸಂಸಾರದ ಜಂಟಾಟದಲ್ಲಿ ಸಿಲುಕಿದ ಗೃಹಿಣಿಯರಿಗಾಗಿ ಹುಬ್ಬಳ್ಳಿಯಲ್ಲಿ ವಿಶೇಷ ಫ್ಯಾಶನ್ ಶೋ ಆಯೋಜಿಸಲಾಗಿತ್ತು. 5 ಮಹಿಳೆಯರೆಲ್ಲಾ ಶೃಂಗಾರ ಮಾಡಿಕೊಂಡು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ಪ್ಯಾಷನ್ ಶೋ ಮಾಡಿದರು. ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ನಡೆದ ಮಹಿಳೆಯರ ರಾಂಪ್ ವಾಕ್‌ನ ಝಲಕ್‌ ಇದು.

ಕಲರ್ ಫುಲ್ ಲೈಟಿಂಗ್ಸ್ ಸುಮ್ನೆಕೂತರು ಸ್ಟೆಪ್ ಹಾಕೋ ತರ ಮಾಡೋ ಮ್ಯೂಸಿಕ್. ಈ ಮಧ್ಯ ಮಹಿಳೆಯರ ಸ್ಟೈಲಿಷ್‌ ಕ್ಯಾಟ್ ವಾಕ್. ಒಬ್ಬರಿಗಿಂತ ಒಬ್ಬರದ್ದು ವಿಭಿನ್ನ ಕ್ಯಾಸ್ಟೋಗಳು ದೇಶದ ಎಲ್ಲ ರಾಜ್ಯಗಳ ಉಡುಗೆಯ ಗಮ್ಮತ್ತು ಒಂದೇ ವೇದಿಕೆಯಲ್ಲಿತ್ತು. ತಾರೆಯರಿಗಿಂತ ತಾವೇನೂ ಕಡಿಮೆ ಇಲ್ಲ ಅಂತ ರ್ಯಾಂಪ್ ವಾಕ್ ಮಾಡಿದರು ಮಹಿಳಾ ಮಣಿಗಳು.

ಹುಬ್ಬಳ್ಳಿಯ ಇನರ್ ವಿಲ್ ಕ್ಲಬ್ ಮಹಿಳಾ ದಿನಾಚರಣೆ ಅಂಗವಾಗಿ ಮಿಸ್ಟರ್& ಮಿಸಸ್ ಹುಬ್ಬಳ್ಳಿ ಐಕಾನ್-2021 ಅನ್ನೋ ಸ್ಪರ್ಧೇ ಏರ್ಪಡಿಸಿತ್ತು. ಮಹಿಳಾ ದಿನಾಚರಣೆ ಅಂಗವಾಗಿ ಮದುವೆಯಾದ ಹೆಣ್ಣುಕ್ಕಳಿಗೆ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಆದ್ರೆ ನಮ್ಮ ಗೃಹಣಿಯರು ಮಾತ್ರ ನಾವು ಯಾವ ಮಾಡೆಲ್‌ಗಳಿಗೂ ಕಮ್ಮಿ ಇಲ್ಲ ಎನ್ನುವ ರೇಂಜ್‌ನಲ್ಲಿ ಕ್ಯಾಟ್ ವಾಕ್ ಮಾಡಿ ಸೈ ಎನಿಸಿಕೊಂಡರು. ಉತ್ತರ ಕರ್ನಾಟದ ಜವಾರಿ ಸ್ಟೈಲ್ ನಿಂದ ಹಿಡಿದು ಎಲ್ಲಾ ರೀತಿ ಕ್ಯಾಸ್ಟೂಮ್‌ಗಳನ್ನ ಧರಿಸಿ ಮಿಂಚಿದರು.

ಇನ್ನು ಈ ರ‍್ಯಾಂಪ್ ವಾಕ್‌ನಲ್ಲಿ ಹೆಚ್ಚಾಗಿ ಮದುವೆಯಾಗಿ ಮಕ್ಕಳಾದ ಗೃಹಿಣಿಯರೇ ಭಾಗವಹಿಸಿದ್ದು ವಿಶೇಷವಾಗಿತ್ತು. ಮದುವೆಯಾದ ನಂತರ ಮನೆ ಮಕ್ಕಳು

ಅಂತಾ ಮನೆಯಲ್ಲೆ ಇರುವ ಮಹಿಳೆಯರಿಗಾಗಿ ಏರ್ಪಡಿಸಿದ ಪ್ಯಾಷನ್ ಶೋನಲ್ಲಿ ನೂರಾರು ಮಹಿಳೆಯರು ವಿಭಿನ್ನ ಉಡುಗೆ ತೊಟ್ಟ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ರಾಜ್ಯದ ವಿವಿಧ ಭಾಗದ ಉಡುಗೆ, ತೊಡುಗೆ ಅಷ್ಟೇ ಅಲ್ಲ ಮರಾಠಿ, ಬೆಂಗಾಳಿ, ಮಲಯಾಳಿ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿ ಉಡುಗೆ ತೊಟ್ಟು ಗೃಹಿಣಿಯರು, ಯುವತಿಯರು ಪ್ಯಾಷನ್ ಶೋನಲ್ಲಿ ಭಾಗಿಯಾಗಿದ್ದು ವಿಶೇಷ. ಗೃಹಿಣಿಯರ ಈ ಪ್ಯಾಷನ್ ಶೋ ತಾರೆಯರ ಪ್ಯಾಷನ್ ಶೋಗೂ ಕಡಿಮೆ ಇಲ್ಲ ಎನ್ನುವಂತೆ ಸ್ಪರ್ಧೆ ನಡೆಯಿತು.

ಮೂರು ವಿಭಾಗದಲ್ಲಿ ಪ್ಯಾಷನ್ ಶೋ ಆಯೋಜಿಸಿದ್ದು, ಇದರಲ್ಲಿ ಮಿಸ್‌ಯಾಗಿ ಹುಬ್ಬಳ್ಳಿ ಪೂಜಾ ಮುಚಕಂಡಿ ಆಯ್ಕೆಯಾದರೆ, ರನ್ನರ್‌ ಆಫ್‌ ಆಗಿ ಲಾವಣ್ಯ ಹೆಚ್.ಕೆ ಆಯ್ಕೆಯಾದರು.

Leave a Reply

Your email address will not be published. Required fields are marked *

You May Also Like

ರಾಯಚೂರಿನಲ್ಲಿಂದು 9 ಕೊರೊನಾ ಪಾಟಿಟಿವ್..!

ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ಚಿರಂಜೀವಿ ಸರ್ಜಾ ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಮೇಘನಾ..!

ಬೆಂಗಳೂರು: ಇತ್ತಿಚೆಗಷ್ಟೆ ನಿಧನ ಹೊಂದಿದ ನಟ ಚಿರಂಜೀವಿ ಸರ್ಜಾ ಬಹುಬೇಗ ಮರೆಯುವಂತಹ ನಟನಲ್ಲ. ಅದರಲ್ಲೂ 10…

ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ: ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್..!

ಬೆಂಗಳೂರು: ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನು ನೀಡಬಾರದು ಎಂದು…