ಬೆಂಗಳೂರು : ಉಪ ಚುನಾವಣೆಯೊಂದಿಗೆ ವಿಧಾನಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿದೆ.

ಪಶ್ಚಿಮ ಪದವೀಧರ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಅವರು ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಜಯ ಸಾಧಿಸಿದ್ದಾರೆ. ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಥಮ ಪ್ರಾಶಾಸ್ತ್ಯದ ಮತ ಎಣಿಕೆಯಲ್ಲಿ ಯಾರೂ ಗೆಲ್ಲದ ಕಾರಣ, ದ್ವಿತೀಯ ಪ್ರಾಶಸ್ತ್ಯದ ಮತಗಳ ಆಧಾರದ ಮೇಲೆ ಬಿಜೆಪಿಯ ಶಶಿಲ್ ನಮೋಶಿ ಗೆಲುವು ಸಾಧಿಸಿದ್ದಾರೆ. ಆಗ್ನೇಯ ಪದವಿಧರ ಕ್ಷೇತ್ರ ಮತ ಎಣಿಕೆ ನಡೆದಿದ್ದು, ಬಿಜೆಪಿ ಚಿದಾನಂದಗೌಡ ಗೆಲುವಿನ ಸನಿಹಕ್ಕೆ ಇದ್ದಾರೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಪುಟ್ಟಣ್ಣ ಅವರು 7,335 ಮತ ಪಡೆದಿದ್ದರೆ, ಜೆಡಿಎಸ್‍ ನ ಎ.ಪಿ. ರಂಗನಾಥ್ ಅವರು 5,107 ಮತ ಗಳಿಸಿದ್ದಾರೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಅವರು ಕೇವಲ 782 ಮತಗಳನ್ನು ಗಳಿಸುವಲ್ಲಿ ಮಾತ್ರ ಯಶಸ್ವಿಯಾಗಿ ಮುಖಭಂಗ ಅನುಭವಿಸಿದ್ದಾರೆ.

ಪಶ್ಚಿಮ ಪದವೀಧರ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು 19,565 ಮತಗಳನ್ನು ಗಳಿಸಿ ಜಯಶಾಲಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಆರ್.ಎಂ. ಕುಬೇರಪ್ಪ ಅವರು 9,449 ಮತಗಳನ್ನು ಗಳಿಸಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿ, ಜೆಡಿಎಸ್ ನ ಬೆಂಬಲ ಪಡೆದಿದ್ದ ಬಸವರಾಜ ಗುರಿಕಾರ ಅವರು 5284 ಮತಗಳನ್ನು ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಸತತ ಎರಡನೇ ಬಾರಿಗೆ ಜಯ ಗಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿ ನಾಳೆ ರಾತ್ರಿ ಯಿಂದ ನಿಷೇದಾಜ್ಞೆ‌ ಜಾರಿ

ಗದಗ: ಜಿಲ್ಲೆಯಾದ್ಯಂತ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು…

ಒಳ್ಳೆಯ ಅವಕಾಶಗಳು ಸಿಕ್ಕರೆ ಕನ್ನಡದಲ್ಲಿಯೂ ನಟಿಸುವೆ – ಸಂಯುಕ್ತಾ!

ಬೆಂಗಳೂರು : ಲಾಕ್ ಡೌನ್ ಇದ್ದರೂ ಅಭಿಮಾನಿಗಳೊಂದಿಗೆ ತಮ್ಮ ಒಡನಾಟ ಇಟ್ಟುಕೊಂಡಿರುವ ನಟಿ ಸಂಯುಕ್ತಾ ಹೆಗ್ಡೆ…

ಆಗಸ್ಟ್ 2ರವರೆಗೆ ಗದಗ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ

ಗದಗ: ರಾಜ್ಯ ಸರ್ಕಾರದ ನಿರ್ದೇಶನ ರೀತ್ಯ ಗದಗ ಜಿಲ್ಲೆಯಾದ್ಯಂತ  ಅಗಸ್ಟ 2 ರ ಮಧ್ಯರಾತ್ರಿಯವರೆಗೆ ಪ್ರತಿದಿನ…

ಅಭಿಮಾನಿಗಳಲ್ಲಿ ಗೋಲ್ಡನ್ ಸ್ಟಾರ್ ಮನವಿ ಮಾಡಿದ್ದೇನು?

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಜು. 2ರಂದು ಗೋಲ್ಡನ್…