ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಜು. 2ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹುಟ್ಟು ಹಬ್ಬವಿದೆ. ಈ ವರ್ಷ ಕೊರೊನಾ ಇರುವುದರಿಂದ ಅಭಿಮಾನಿಗಳಿಗೆ ಮನೆಯ ಹತ್ತಿರ ಬರದಂತೆ ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರೀತಿಯ ಸ್ನೇಹಿತರೇ ಕೊರೊನಾ ಸೋಂಕಿನಿಂದಾಗಿ ಈ ವರ್ಷದ ನನ್ನ ಹುಟ್ಟು ಹಬ್ಬವನ್ನು ನೇರವಾಗಿ ನಿಮ್ಮನ್ನು ಭೇಟಿ ಮಾಡಿ ಆಚರಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಕ್ಷಮೆಯಿರಲಿ. ನಿಮ್ಮ ಪ್ರೀತಿ ಮತ್ತು ಹಾರೈಕೆ ಹಾಗೂ ಶುಭಾಶಯ ಸದಾ ನನ್ನ ಜೊತೆಯಿರಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ, ನನ್ನೆಲ್ಲಾ ಅಭಿಮಾನಿಗಳೇ, ಬಂದುಗಳೇ, ಸ್ನೇಹಿತರೆ ಹಾಗೂ ಹಿತೈಷಿಗಳೇ ಈ ಕೊರೊನಾದ ಸಂಕಷ್ಟದ ಕಾಲದಲ್ಲಿ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲೂ ನೀವು ನೊಂದವರ, ಅಸಹಾಯಕರ, ಹಸಿದವರ ಬೆಂಬಲಕ್ಕೆ ನಿಂತಿರಿ. ಇದಕ್ಕೆ ಯಾವ ಪ್ರಚಾರವನ್ನೂ ಬಯಸದೆ ಸದ್ದುಗದ್ದಲವಿಲ್ಲದೆ, ನಿಮ್ಮ ಮಾನವೀಯತೆಯನ್ನು ತೋರಿಸಿದ್ದೀರಿ. ಇದಕ್ಕಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ. ನಿಮ್ಮ ಕಾರ್ಯಗಳಿಗಾಗಿ ನಾನು ಹೆಮ್ಮೆ ಪಡುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಂಘಟನಾ ಶಕ್ತಿಯಿಂದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ

ಒಗ್ಗಟ್ಟು ಮತ್ತು ಸಂಘಟನಾ ಶಕ್ತಿಯಿಂದ ಧೈರ್ಯ, ಆತ್ಮವಿಶ್ವಾಸ ಹೆಚ್ಚಿ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ ಎಂದು ಮಾಜಿ ಶಾಸಕ ಎಸ್.ಎನ್.ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋದಿ ಧೋರಣೆ ಅನುಸರಿಸುತ್ತಿವೆ: ಸುಂಕದ

ಉತ್ತರಪ್ರಭ ಸುದ್ದಿ ಮುಳಗುಂದ: ಅನ್ಯಾಯಕ್ಕೊಳಗಾದ ರೈತರಿಗೆ ಆತ್ಮಸ್ಥೈರ್ಯ ತುಂಬಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರೈತ…

ಕೊರೊನಾ ಹಿನ್ನೆಲೆ : ಬೆಳಗಾವಿ ಜಿಲ್ಲೆಯಲ್ಲಿ ರೇಣುಕಾ ಯಲ್ಲಮ್ಮ ಸೇರಿ ಹಲವು ದೇವಸ್ಥಾನಗಳ ದರ್ಶನ ನಿಷೇಧ

ಕೋವಿಡ್-19 (ಕರೋನಾ)ರೂಪಾಂತರಿ ವೈರಾಣುವಿನ ಹರಡುವಿಕೆಯು ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇನ್ನಿತರೆ ರಾಜ್ಯಗಳಲ್ಲಿ ತೀವ್ರತರವಾಗಿ ಹರಡುತ್ತಿರುವುದರಿಂದೆ.