ಬೆಂಗಳೂರು: ಇತ್ತಿಚೆಗೆ ಕೆಲವು ದಿನಗಳಿಂದ ಡ್ರಗ್ಸ್ ವಿಷಯ ರಾಜ್ಯದಲ್ಲಿ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರ ನಟಿಯ ಡ್ರಗ್ಸ್ ಜಾಲದ ಬೆನ್ನಲ್ಲೆ ಈಗ ಜನಪ್ರತಿನಿಧಿಗಳ ಪುತ್ರರೀಗೂ ಈ ನಂಟು ವ್ಯಾಪಿಸುತ್ತಿದೆ.

ಈ ವಿಚಾರವಾಗಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಮಾರು ಅರ್ಧ ಕೇಜಿಯಷ್ಟು ಮಾದಕ ವಸ್ತುವನ್ನು ಪಾರ್ಸೆಲ್ ಮೂಲಕ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ತರಿಸಿಕೊಂಡಿದ್ದು, ಅದನ್ನು ಸ್ವೀಕರಿಸಲು ಹೋದ ಅವರ ಗೆಳೆಯನನ್ನು ಪೊಲೀಸರು ಹಿಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಈಗಾಗಲೆ 15 ಮಂದಿ ಡ್ರಗ್ಸ್ ಕೇಸಿನಲ್ಲಿ ಜೈಲುಪಾಲಾಗಿದ್ದು, ತನಿಖೆ ಏರುಗತಿ ಪಡೆದಿದೆ. ಇದರ ಬೆನ್ನಲ್ಲೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಡಾಕ್‌ವೆಬ್‌ ಮೂಲಕ ದರ್ಶನ್ ಮಾದಕ ವಸ್ತುಗಳ ಖರೀದಿ ಮಾಡಿ ಹಂಚುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 176 ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 176 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7000…

ಎನ್.ಆರ್.ಡಿ.ಡಬ್ಲೂ.ಪಿ ಯೋಜನೆ 210 ಕಾರ್ಮಿಕರು ಬೀದಿಗೆ : ಆದೇಶವಿದ್ರು ಸರ್ಕಾರ ಗಪ್ ಚುಪ್!

ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶ ನೀಡುತ್ತದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿಯೇ 210 ಕಾರ್ಮಿಕರನ್ನು ಸದ್ದಿಲ್ಲದೇ ಇಲಾಖೆಯೊಂದು ಬೀದಿಗೆ ತಳ್ಳಿದೆ. ಕಾರ್ಮಿಕ ಪರ ಆದೇಶ ನೀಡಿದ ಸರ್ಕಾರ ಮಾತ್ರ ಗಪ್ ಚುಪ್ ಆಗಿದೆ.

ಸ್ವಚ್ಛ ಪರಿಸರದ ಜಾಗೃತಿ ನಮ್ಮ ಆದ್ಯತೆಯಾಗಲಿ

ಉತ್ತರಪ್ರಭ ಇಂಡಿ: ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಹೆಚ್ಚು ಹೆಚ್ಚು…

ಬಿಜೆಪಿ ಅಸ್ಪೃಶ್ಯತೆಯನ್ನು ಮರುಸ್ಥಾಪಿಸುತ್ತಿದೆ

ಬಿಜೆಪಿ ತನ್ನ ಮನುವಾದಿ ಸಿದ್ಧಾಂತವನ್ನು ಸಮಾಜದೊಳಗೆ ವ್ಯವಸ್ಥಿತವಾಗಿ ಮತ್ತೆ ಸ್ಥಾಪಿಸುತ್ತಿದೆ.