ಉತ್ತರಪ್ರಭ

ಇಂಡಿ: ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ರ‍್ತವ್ಯವಾಗಿದೆ ಎಂದು ತಾಲೂಕಾ ಯೋಜನಾಧಿಕಾರಿ ರಾಜು ನಾಯಕ ತಿಳಿಸಿದರು.
ಅವರು ಗುರುವಾರ ಸಂಜೆ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಹಾಗೂ ಹಿರೇರೂಗಿ ಗ್ರಾಮದ ಕೆಬಿಎಸ್,ಕೆಜಿಎಸ್,ಯುಬಿಎಸ್ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಸಾಲುಮರದ ತಿಮ್ಮಕ್ಕ ಅವರ 111 ನೇ ಜನ್ಮ ದಿನಾಚರಣೆ ನಿಮಿತ್ಯ ಜರುಗಿದ ಪರಿಸರ ಜಾಗೃತಿ ಮಾಹಿತಿ ಮತ್ತು ಸಸಿ ನೆಡುವ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಸರವನ್ನು ಸಂರಕ್ಷಿಸಲು, ಮಾನವ ಮತ್ತು ಪರಿಸರದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ನಾವು ಮಾನವ ಚಟುವಟಿಕೆಗಳನ್ನು ಸುಧಾರಿಸಬೇಕಾಗಿದೆ ಎಂದು ಹೇಳಿದರು.
ಕೃಷಿ ಅಧಿಕಾರಿ ಪ್ರಕಾಶ ಬಡಿಗೇರ ಮಾತನಾಡಿ, ಶಾಲಾ ಆವರಣದಲ್ಲಿ ವಿದ್ಯರ‍್ಥಿ ಹಂತದಲ್ಲಿಯೇ ಸಸಿಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಗಿಡಮರಗಳನ್ನು ಬೆಳೆಸುವ ಹವ್ಯಾಸವನ್ನು ರೂಢಿಸಬೇಕು ಎಂದು ಹೇಳಿದರು.
ವಲಯ ಮೇಲ್ವಿಚಾರಕಿ ಗೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ ಅಂಕಲಗಿ, ಶಿಕ್ಷಕರಾದ ಎಸ್ ಆರ್ ಚಾಳೇಕಾರ, ಸಂತೋಷ ಬಂಡೆ ಪರಿಸರದ ಮಹತ್ವ ಕುರಿತು ಮಾತನಾಡಿದರು.
ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕ ಜಿ ಡಿ ಜಾಧವ, ಶಿಕ್ಷಕರಾದ ಎಸ್ ಡಿ ಬಿರಾದಾರ, ಎಸ್ ಎಂ ಪಂಚಮುಖಿ, ಭಾರತಿ ಭಜಂತ್ರಿ, ಒಕ್ಕೂಟದ ಅಧ್ಯಕ್ಷ ಸುಧಾ ಕುಂಬಾರ,ಸದಸ್ಯರಾದ ಆಶಾಭಾನು ನದಾಫ್ ,ಸುನಂದಾ ಬೇನೂರ, ಶಾಂಭವಿ ಹರನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂರ‍್ಭದಲ್ಲಿ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಲಾಯಿತು. ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು

Leave a Reply

Your email address will not be published. Required fields are marked *

You May Also Like

ಮನುಕುಲದ ಸೂರ್ಯ ಲಿಂ.ತೋಂಟದ ಸಿದ್ದಲಿಂಗ ಶ್ರೀ

ಆಲಮಟ್ಟಿ : ಲಿಂ, ತೋಂಟದ ಡಾ.ಸಿದ್ದಲಿಂಗ ಶ್ರೀ ಕರುನಾಡು,ದೇಶ ಕಂಡ ಅಪರೂಪದ ಜೀವ ದೈವ. ನಿಭೀ೯ಡೆ…

ದಲಿತರ ಮೇಲೆ ಮಾರಣಾಂತಿಕ ಹಲ್ಲೆ : ದೌರ್ಜನ್ಯಕೋರರನ್ನು ಗೂಂಡಾ ಕಾಯ್ದೆ ಅನ್ವಯ ಬಂಧನಕ್ಕೆ ಆಗ್ರಹ

ಉತ್ತರಪ್ರಭ ಕೊಪ್ಪಳ: ಕೊಪ್ಪಳ ಜಿಲ್ಲೆಯಲ್ಲಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ದೌರ್ಜನ್ಯಕೋರರನ್ನು ಗೂಂಡಾ ಕಾಯ್ದೆ…

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ಬಾಲೆ ಸೃುಷ್ಟಿ ಜಾಧವ

ಉತ್ತರಪ್ರಭವಿಜಯಪುರ: ಅವಳಿಗೆ ಅಜ್ಜಿಯಂದರೆ ಪ್ರಾಣ. ಕಾಕಾ ಎಂದರೆ ಎಲ್ಲಿಲ್ಲದ ಪ್ರೀತಿ. ಈ ಅಕ್ಕರೆಯ ಸಿಹಿ ಸಿಂಚನದ…

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…