ಶಿರಹಟ್ಟಿ: ಸ್ಥಳೀಯ ಪಟ್ಟಣ ಪಂಚಾಯ್ತಿ ಚುನಾವಣೆ ನಡೆದು 23 ತಿಂಗಳ ನಂತರ ಶನಿವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.

ಅಧ್ಯಕ್ಷ ಸ್ಥಾನ ಬ ವರ್ಗಕ್ಕೆ ಮೀಸಲಿದ್ದು, ಸ್ಪಷ್ಟ ಬಹುಮತ ಪಡೆದ ಕಾಂಗ್ರೇಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಪರಮೇಶ ಪರಬ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮಹಮ್ಮದ ಇಸಾಕ್ ಆದ್ರಳ್ಳಿ ಹಾಗೂ ದೇವಪ್ಪ ಆಡೂರು ಇಬ್ಬರು ಸದಸ್ಯರು ನಾಮಪತ್ರ ಸಲ್ಲಿಸಿದ್ದರು.

ಕೊನೆಗೆ ದೇವಪ್ಪ ಆಡೂರು ತಮ್ಮ ನಾಮಪತ್ರ ಹಿಂಪಡೆದಿದ್ದರಿಂದ ಉಪಾಧ್ಯಕ್ಷ ಸ್ಥಾನವನ್ನು ಸಹ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪರಮೇಶ ಪರಬ ಹಾಗೂ ಉಪಾಧ್ಯಕ್ಷರಾಗಿ ಮಹಮ್ಮದ್ ಇಸಾಕ್ ಆದ್ರಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿದ್ದ ತಹಶೀಲ್ದಾರ ಯಲ್ಲಪ್ಪ ಗೊಣೆಣ್ಣವರ ಘೋಷಿಸಿದರು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರಿಗೆ ಪಕ್ಷದ ಮುಖಂಡರು, ಅಭಿಮಾನಿಗಳು, ಕಾರ್ಯಕರ್ತರು ಶುಭ ಕೊರಿದರು.

ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೇಯಲ್ಲಿ ಪಪಂ ಮುಖ್ಯಾಧಿಕಾರಿ ಮಲ್ಲೇಶ.ಬಿ, ನಿಲೇಶ ಹಾದಿಮನಿ, ಸಿದ್ದಮ್ಮ, ಹನುಮಂತ ಕಂಠೆಮ್ಮನವರ, ಜಮೀರ್ ಮನಿಯಾರ, ಪ್ರವಿಣ ಮೊಹರೆಕರ, ಸಿಪಿಐ ವಿಕಾಸ ಲಮಾಣಿ ನೇತೃತ್ವದಲ್ಲಿ ಪಿಎಸ್ಐ ಸುನೀಲ್ ಕುಮಾರ ನಾಯಕ್ ಹಾಗೂ ಶಿವಯೋಗಿ ಲೋಹಾರ ಬಂದೊಬಸ್ತ್ ಒದಗಿಸಿದರು.

1 comment
Leave a Reply

Your email address will not be published. Required fields are marked *

You May Also Like

ಪಕ್ಷ ವಿರೋದಿ ಚಟುವಟಿಕೆ; ಬಿಜೆಪಿ ಪಕ್ಷದ ನಾಲ್ವರ ಕಾರ್ಯಕರ್ತರ ಉಚ್ಚಾಟನೆ

ಉತ್ತರಪ್ರಭ ಸುದ್ದಿಮುಳಗುಂದ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಾಂತೇಶ ಬಾತಾಖಾನಿ, ಎಂ.ಡಿ.ನರಗುoದ, ಸಿ.ಎಸ್.ಪತ್ರಿ, ಮಂಜುನಾಥ ಮಜ್ಜಿಗುಡ್ಡ…

ಒಮಿಕ್ರಾನ ಭಿತಿ ಇಂದಲ್ಲಾ ನಾಳೆಯಿಂದ ಶುರು..!

ಉತ್ತರಪ್ರಭ ಗದಗ: ಇಂದು ಗದಗ-ಬೇಟಗೆರಿ ನಗರಸಭೆ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ನಗರದ 35 ವಾರ್ಡಗಳಲ್ಲಿ ನಡಿಯುತ್ತಿರುವ…

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಹೆಲ್ತ್ ಕಾರ್ಡ್ ಮೂಲಕ 5 ಲಕ್ಷ ರೂ ಗಳವರೆಗೂ ಉಚಿತ ಆರೋಗ್ಯ ಸೇವೆ ಪಡೆದುಕೊಳ್ಳಬಹುದು: ಡಾ: ಕೆ.ಸುಧಾಕರ್

ಉತ್ತರಪ್ರಭ ಸುದ್ದಿ ಬಾಗೇಪಲ್ಲಿ: 100 ದಿನಗಳ ಅವಧಿಯಲ್ಲಿ ರಾಜ್ಯದ 5 ಲಕ್ಷ 20 ಸಾವಿರ ನಾಗರೀಕರಿಗೆ…

ಅನಾಮಧೇಯ ವ್ಯಕ್ತಿಯ ಶವಪತ್ತೆ: ಗುರುತು ಪತ್ತೆಗೆ ಮನವಿ

ಗಜೇಂದ್ರಗಡ : ಪಟ್ಟಣದ ಟಿಟಿಡಿ ಕಲ್ಯಾಣ ಮಂಟಪದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದೆ. ಪಟ್ಟಣದ…