ಉತ್ತರಪ್ರಭ ಸುದ್ದಿ
ಮುಳಗುಂದ:
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಮಹಾಂತೇಶ ಬಾತಾಖಾನಿ, ಎಂ.ಡಿ.ನರಗುoದ, ಸಿ.ಎಸ್.ಪತ್ರಿ, ಮಂಜುನಾಥ ಮಜ್ಜಿಗುಡ್ಡ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿದೆ. ಎಂದು ಬಿಜೆಪಿ ಗದಗ ಗ್ರಾಮೀಣ ಮಂಡಲದ ಅಧ್ಯಕ್ಷ ದ್ಯಾಮಣ್ಣ ನೀಲಗುಂದ ಹೇಳಿದರು.
ಈ ಕುರಿತು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ನಾಲ್ವರು ಬಿಜೆಪಿ ಪಕ್ಷದ ಹೆಸರು ಬಳಸಿಕೊಂಡು ಪಕ್ಷ ವಿರೋಧಿ ಹೇಳಿಕೆಗಳನ್ನ ಪತ್ರಿಕೆಗಳ ಮೂಲಕ ನೀಡಿದ್ದಾರೆ, ಮುಳಗುಂದದ ಜಾತ್ರಾ ಕಾರ್ಯಕ್ರಮವೊಂದಕ್ಕೆ ಕಾಂಗ್ರೆಸ್ ಪಕ್ಷದ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಹೆಸರುಗಳನ್ನ ಆಮಂತ್ರಣ ಪತ್ರಿಕೆಯಲ್ಲಿ ಹಾಕಿ ಅವರನ್ನ ಆವ್ಹಾನಿಸಬೇಕು. ಎಂದು ಈಚೆಗೆ ಪತ್ರಿಕೆ ಮೂಲಕ ಆಗ್ರಹಿಸಿದ್ದರು, ಇದಲ್ಲದೆ ಹಲವು ಭಾರಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಹೀಗಾಗಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಸಹಿ ಸಂಗ್ರಹಿಸಿ, ಒಮ್ಮತದಿಂದ ಈ ನಾಲ್ವರನ್ನ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳಿಯ ಘಟಕದ ಅಧ್ಯಕ್ಷ ಮಲ್ಲಪ್ಪ ಕುಂದಗೋಳ, ಯುವ ಘಟಕದ ಅಧ್ಯಕ್ಷ ಕಿರಣ ಬಾತಾಖಾನಿ, ಮುಖಂಡರಾದ ಮಲ್ಲಪ್ಪ ಬಳ್ಳಾರಿ, ಲಕ್ಷ್ಮಣ ಇಂಗಳಹಳ್ಳಿ, ಅಕ್ಷಯ ಬಟ್ಟೂರ, ಕುಮಾರ ಸುಂಕಾಪೂರ, ದೇವಪ್ಪ ಪಾಟೀಲ, ಬಸವರಾಜ ಬೈಲಪ್ಪನವರ, ನಾಗರಾಜ ಕತ್ತಿ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

You May Also Like

ಸಾರ್ವಜನಿಕರಿಂದ ಗೃಹ ಮಂಡಳಿ ಅಧಿಕಾರಿ ತರಾಟೆಗೆ

ಗದಗ: ಕರ್ನಾಟಕ ಗೃಹ ಮಂಡಳಿ ಅಧಿಕಾರಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಇಂದು ಗದಗನ ಗೃಹ…

ಫೆ. 24ರಿಂದ ಮುಳಗುಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಇದೇ ಫೆ 24 ರಿಂದ 26 ವರೆಗೆ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ, ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

ಗದಗನಲ್ಲಿ ಬೈಕ್ ಕದ್ದ ಆರೋಪಿ ಬಂಧನ

ಗದಗ: ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದ ಆರೋಪಿಯನ್ನು ಗದಗ ಶಹರ ಪೊಲೀಸರು ಶನಿವಾರ ಬಂಧಿಸಿದ್ದಾರೆ

ಮೀನು ಸಾರು ಮಾಡಿವಿ ಬಾ ಅಪ್ಪಾ, ಎನ್ನುವ ಕರುಳಿನ ಕೂಗಿಗೂ ಬಾರದೇ ಹೋದ ಅಪ್ಪ..!

ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನನ್ನು ಕಂಡ ಮಕ್ಕಳು ಅಪ್ಪ, ಕೈಯಲ್ಲಿ ಹಿಡಿದುಕೊಂಡು ಬಂದ ಚೀಲವನ್ನೆ ಕಣ್ಣರಳಿಸಿ ನೋಡಿದ್ದಾರೆ. ಅಪ್ಪ ತಂದ ಮೀನು ಕಂಡು ಹಿರಿಹಿರಿ ಹಿಗ್ಗಿದ್ದಾರೆ. ಮಕ್ಳಾ ಮೀನು ಸಾರು ರೆಡಿ ಆಗ್ಲಿ ನಾನು ಸ್ವಲ್ಪ ಹೊರಗ್ ಹೋಗಿ ಬರ್ತಿನಿ ಅಂತ ಹೊರ ನಡೆದ ಅಪ್ಪ.