ಬೆಂಗಳೂರು : ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ತೆರೆಯುವ ಸಿದ್ಧತೆ ರಾಜ್ಯದಲ್ಲಿ ನಡೆದಿದೆ. ಮುಂದಿನ ತಿಂಗಳಿನಿಂದ ಒಂಭತ್ತರಿಂದ 12ನೇ ತರಗತಿಯವರೆಗೆ ತರಗತಿಗಳನ್ನು ಆರಂಭಿಸಲು ಸದ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿವೆ.

ಶಿಕ್ಷಣ ಇಲಾಖೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತ ಮಂಡಳಿ ಒಕ್ಕೂಟದ ಸದಸ್ಯರು, ಕೆಲವೊಂದು ಬೇಡಿಕೆಗಳನ್ನು ಈಡೇರಿಸಿದರೆ ನಾವು ಶಾಲೆಗಳನ್ನು ತೆರೆಯುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ, ಆಡಳಿತ ಮಂಡಳಿ ಸದಸ್ಯರು ಕೆಲವು ಆಕ್ಷೇಪಗಳನ್ನು ಹಾಗೂ ಆತಂಕಗಳನ್ನು ಸರ್ಕಾರದ ಮುಂದೆ ಇಟ್ಟಿವೆ. ಇವುಗಳನ್ನು ಸರ್ಕಾರ ನಿಭಾಯಿಸುವುದಾದರೆ ನಾವು ಶಾಲೆ ತೆರೆಯಲು ಸಿದ್ಧ ಎಂದು ಹೇಳಿವೆ. ಅಷ್ಟೇ ಅಲ್ಲದೇ, ಒಂದರಿಂದ 9ರ ವರೆಗಿನ ತರಗತಿಗಳನ್ನು ಯಾವುದೇ ಕಾರಣಕ್ಕೆ ಆರಂಭಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಒಕ್ಕೂಟ ಹೇಳಿದೆ ಎನ್ನಲಾಗಿದೆ.

ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ವಾಣಿಗೆ ಕರೆ ಮಾಡುವ ಮೂಲಕ ಪೋಷಕರು, ವಿದ್ಯಾರ್ಥಿಗಳು ಆನ್‌ ಲೈನ್‌ ಶಿಕ್ಷಣದ ಕುರಿತು ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಬಹುದು.

ಶಿಕ್ಷಣವಾಣಿ – ಸಹಾಯವಾಣಿ ಸಂಖ್ಯೆ (18004257302) ಅಥವಾ ಸಹಾಯವಾಣಿಯ ವಾಟ್ಸಪ್ ನಂಬರ್- 9483045130 ಗೆ ಸಂಪರ್ಕಿಸಲು ತಿಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಶೌಚದಲ್ಲಿ ಕಾಣದ ನೀರು ? ಪ್ರವಾಸಿಗರ ದಿಗಿಲು !!!
“ಪ್ರಯಾಸ-ಪರದಾಟ-ಹೈರಾಣ-ಫಜೀತಿ”

ಉತ್ತರಪ್ರಭ ಸುದ್ದಿಆಲಮಟ್ಟಿ: ನಿಸರ್ಗ ಸಹಜ ಕ್ರಿಯೆಗೆ ಹೊತ್ತು ಗೊತ್ತಿಲ್ಲ. ಅದು ಹೇಳಿ ಕೇಳಿ ಬರದು. ಶೌಚಾಲಯಕ್ಕೆ…

ಆಸ್ಪತ್ರೆಯಲ್ಲಿಯೇ ಈ ಪರಿಸ್ಥಿತಿ ಇದ್ರೆ ರೋಗಿಗಳ ಪಾಡು ಇನ್ನೆಂಗೆ ಶಿವಾ!

ಸಾಮಾನ್ಯವಾಗಿ ಆಸ್ಪತ್ರೆಗೆ ಬರುವವರು ಆಸ್ಪತ್ರೆಯನ್ನೆ ಸಂಜೀವಿನಿ ಎಂದು ನಂಬಿರುತ್ತಾರೆ. ಆದರೆ, ಗದಗ ನಗರದಲ್ಲಿರುವ ಹೆರಿಗೆ ಆಸ್ಪತ್ರೆ ಇದಕ್ಕೆ ತದ್ವಿರುದ್ಧ ಎಂದು ಜನ ಮಾತಾಡಿಕೊಳ್ಳುವಂತಾಗಿದೆ. ಇನ್ನು ರೋಗಿಗಳು ಹಾಗು ರೋಗಿಗಳ ಸಂಬಂಧಿಕರು ಆಸ್ಪತ್ರೆಯಲ್ಲಿ ದಿನಕಳೆಯುವುದೆಂದರೆ ಹರಸಾಹಸವೇ ಸರಿ.

ಶಿಘ್ರವೇ ನೇಕಾರರಿಗೆ ಸಹಾಯಧನ ನೀಡಿ

ನೇಕಾರರಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ವಿಶ್ವ ಬಂಧು ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಕಾರ್ಯಕರ್ತು ಪ್ರತಿಭಟನೆ ನಡೆಸಿದರು. ಉಪ ನಿರ್ದೇಶಕರ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಮುಶಿಗೇರಿ: ನಾಗನಗೌಡ ಗೌಡರ ರಾಜ್ಯಕ್ಕೆ 2ನೇ ರ್ಯಾಂ ಕ್ ಪಡೆದು ಸೈಂಟಿಫಿಕ್ ಆಪೀಸರ್ ಹುದ್ದೆಗೆ ಆಯ್ಕೆ

ಗದಗ: ಪೊಲೀಸ್ ಇಲಾಖೆ ವತಿಯಿಂದ ಕಳೆದ ವರ್ಷ 28.05.2021 ರಂದು  ವಿಧಿವಿಜ್ಞಾನ  ಪ್ರಯೋಗಾಲಯ ವಿಭಾಗದಲ್ಲಿ  84…