9 ರಿಂದ 12ನೇ ತರಗತಿಗಳು ಸದ್ಯದಲ್ಲಿ ಆಗಲಿವೆ ಓಪನ್!

ಬೆಂಗಳೂರು : ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ತೆರೆಯುವ ಸಿದ್ಧತೆ ರಾಜ್ಯದಲ್ಲಿ ನಡೆದಿದೆ. ಮುಂದಿನ ತಿಂಗಳಿನಿಂದ ಒಂಭತ್ತರಿಂದ 12ನೇ ತರಗತಿಯವರೆಗೆ ತರಗತಿಗಳನ್ನು ಆರಂಭಿಸಲು ಸದ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಒಪ್ಪಿಗೆ ಸೂಚಿಸಿವೆ.

ಶಿಕ್ಷಣ ಇಲಾಖೆ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಆಡಳಿತ ಮಂಡಳಿ ಒಕ್ಕೂಟದ ಸದಸ್ಯರು, ಕೆಲವೊಂದು ಬೇಡಿಕೆಗಳನ್ನು ಈಡೇರಿಸಿದರೆ ನಾವು ಶಾಲೆಗಳನ್ನು ತೆರೆಯುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೇ, ಆಡಳಿತ ಮಂಡಳಿ ಸದಸ್ಯರು ಕೆಲವು ಆಕ್ಷೇಪಗಳನ್ನು ಹಾಗೂ ಆತಂಕಗಳನ್ನು ಸರ್ಕಾರದ ಮುಂದೆ ಇಟ್ಟಿವೆ. ಇವುಗಳನ್ನು ಸರ್ಕಾರ ನಿಭಾಯಿಸುವುದಾದರೆ ನಾವು ಶಾಲೆ ತೆರೆಯಲು ಸಿದ್ಧ ಎಂದು ಹೇಳಿವೆ. ಅಷ್ಟೇ ಅಲ್ಲದೇ, ಒಂದರಿಂದ 9ರ ವರೆಗಿನ ತರಗತಿಗಳನ್ನು ಯಾವುದೇ ಕಾರಣಕ್ಕೆ ಆರಂಭಿಸಲು ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಒಕ್ಕೂಟ ಹೇಳಿದೆ ಎನ್ನಲಾಗಿದೆ.

ಆನ್ ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ವಾಣಿಗೆ ಕರೆ ಮಾಡುವ ಮೂಲಕ ಪೋಷಕರು, ವಿದ್ಯಾರ್ಥಿಗಳು ಆನ್‌ ಲೈನ್‌ ಶಿಕ್ಷಣದ ಕುರಿತು ತಮಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಬಹುದು.

ಶಿಕ್ಷಣವಾಣಿ – ಸಹಾಯವಾಣಿ ಸಂಖ್ಯೆ (18004257302) ಅಥವಾ ಸಹಾಯವಾಣಿಯ ವಾಟ್ಸಪ್ ನಂಬರ್- 9483045130 ಗೆ ಸಂಪರ್ಕಿಸಲು ತಿಳಿಸಲಾಗಿದೆ.

Exit mobile version