ಲಕ್ಷ್ಮೇಶ್ವರ: ನೇಕಾರರಿಗೆ ಸಹಾಯಧನ ನೀಡಬೇಕು ಎಂದು ಆಗ್ರಹಿಸಿ ಗುರುವಾರ ವಿಶ್ವ ಬಂಧು ವಿದ್ಯುತ್ ಮಗ್ಗಗಳ ನೇಕಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಉಪ ನಿರ್ದೇಶಕರ ಕಚೇರಿ ಎದುರು ಸರ್ಕಾರದ ವಿರುದ್ಧ ಪ್ರತಿಭಟಿಸಿ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಧ್ಯಕ್ಷ ಅಮಾತೆಪ್ಪ ಹರವಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವಿದ್ಯುತ್ ಹಾಗೂ ಕೈ ಮಗ್ಗಗಳ ಕಾರ್ಮಿಕಾರ್ಮಿಕರು ಕೆಲಸ ವಿಲ್ಲದೆ ಅತಂತ್ರ ಸ್ಥಿತಿಯನ್ನು ಮನಗಂಡು ಸರ್ಕಾರ ನೆಕಾರರಿಗೆ ಸಹಾಯಧನ ವಾಗಿ 2 ಸಾವಿರ ರೂ. ನೀಡುಲಾಗಿದೆ. ಆದರೆ, ಶಿಗ್ಲಿ ಗ್ರಾಮದಲ್ಲಿ ಒಟ್ಟು 163 ಘಟಕಗಳು ಇದ್ದು ಈ ಗ್ರಾಮದಲ್ಲಿ 1200 ಜನ ಕಾರ್ಮಿಕರಿದ್ದಾರೆ. ಇದರಲ್ಲಿ ಅರ್ಧದಷ್ಟು ಕಾರ್ಮಿಕ ರಿಗೆ ಸಹಾಯಧನ ದೊರೆಯದೆ ಅನ್ಯಾಯವಾಗಿದೆ ಎಂದು ಆರ್ಕೋಶ ವ್ಯಕ್ತಪಡಿಸಿದರು.
ಸಿಗ್ಲಿ ಗ್ರಾಮದಲ್ಲಿನ ಸರ್ಕಾರ ನೀಡಿರುವ ಸಹಾಯಧನ ಸಿಗದೆ ವಂಚಿತರಾಗಿರುವ ನೇಕಾರರಿಗೆ ಸಹಾಯಧನ ತಲುಪಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮನೋಹರ ಕೊಪರ್ಡೆ , ಪ್ರಕಾಶ ಕುಸಗುರ,ಬಸವರಾಜ ಬಸ್ಮಿ, ಕೃಷ್ಣ ಹರವಿ ಉಪಸ್ಥಿತರಿದ್ದರು.