ಲಕ್ನೋ: ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

ಉತ್ತರ ಪ್ರದೇಶದ ಪ್ರೇಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 15 ವರ್ಷದ ಮಗಳ ಮೇಲೆ ಪಾಪಿ ತಂದೆ ಕಳೆದ 6 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ. ಈ ಕುರಿತು ಪ್ರೇಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಸಂತ್ರಸ್ಥೆಯ ತಾಯಿ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದಳು. ಹೀಗಾಗಿ ಬಾಲಕಿ ತಂದೆಯೊಂದಿಗೆ ವಾಸಿಸುತ್ತಿದ್ದಳು. ಆದರೆ, ಪಾಪಿ ಕಳೆದ ಆರು ತಿಂಗಳಿನಿಂದ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಈ

ಪ್ರಕರಣದ ಕುರಿತು ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರೋಹಿತ್ ಸಿಂಗ್, ಅತ್ಯಾಚಾರ ನಡೆಸಿದ್ದಲ್ಲದೆ, ಈ ವಿಷಯವನ್ನು ಬೇರೆ ಯಾರ ಮುಂದೆಯಾದರೂ ಹೇಳಿದರೆ, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ತಂದೆಯ ಅತ್ಯಾಚಾರದಿಂದ ನಲುಗಿದ ಬಾಲಕಿ, ಸಂಬಂಧಿಯೊಬ್ಬರ ಸಹಾಯ ಪಡೆದು ದೂರು ದಾಖಲಿಸಿದ್ದಾಳೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ. ಕೂಡಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ವೈದ್ಯಕೀಯ ಪರೀಕ್ಷೆಗೆ ಬಾಲಕಿಯನ್ನು ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

You May Also Like

ಮೇ. 17ರ ನಂತರ ಲಾಕ್ ಡೌನ್ ಸ್ಥಿತಿ ಹೇಗಿರಲಿದೆ?

ಬೆಂಗಳೂರು: ಮೂರನೇ ಹಂತದ ಲಾಕ್ ಡೌನ್ ಮುಗಿಯಲು ಇನ್ನೂ 7 ದಿನಗಳು ಬಾಕಿ ಇವೆ. ಈ…

ಸಿಎಂ ಯಡಿಯೂರಪ್ಪ ರಾಜಾಹುಲಿ ಅಂದ್ರು ಆರ್.ಅಶೋಕ

ಚಾಮರಾಜನಗರ:ಹುಲಿಗೆ ಹಿಂದಿನಿಂದ ಆಡಳಿತ ಮಾಡಿ ಗೊತ್ತಿಲ್ಲ. ನೇರ ಆಡಳಿತವೇ ಸಿಎಂ ಯಡಿಯೂರಪ್ಪ ಅವರ ಸ್ವಭಾವ ಹೀಗಾಗಿ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ಭಾರತ ಸೇರಿದಂತೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಸಹಾಯ ಮಾಡಲು ಮುಂದಾದ ವಿಶ್ವ ಬ್ಯಾಂಕ್!

ವಿಶ್ವಸಂಸ್ಥೆ : ಕೊರೊನಾ ಆತಂಕದ ನಂತರ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ದೇಶಗಳಿಗೆ ವಿಶ್ವ ಬ್ಯಾಂಕ್ ಸಹಾಯಕ್ಕೆ ಮುಂದಾಗಿದೆ.

ಸೆಗಣಿಗೆ ಶುಕ್ರದೆಸೆ: ಖರೀದಿಗೆ ಮುಂದಾದ ಸರ್ಕಾರ

ರಾಯಪುರ್: ಒಂದು ಕೆಜಿ ಸೆಗಣಿಗೆ 1.50 ರೂ! ಎಷ್ಟಿದೆ ತನ್ನಿ, ನಾವ್ ತಗಳ್ತೀವಿ. ಅಲಲಾ, ಕೊಟ್ಟಿಗೆ…