ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ, ತನ್ನ ಪಾಲಿನ ಕೊನೆಯ ಪಂದ್ಯವನ್ನು ಗೆಲ್ಲುವುದರ ಮೂಲಕ ಟೂರ್ನಿಯಿಂದ ಹೊರ ಬಿದ್ದಿದ್ದು, ಪಂಜಾಬ್ ತಂಡ ಕೂಡ ಹೊರ ಹೋಗುವಂತೆ ಮಾಡಿದೆ.

ಐಪಿಎಲ್ ನ ಇಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 9 ವಿಕೆಟ್ಗೆಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಿಂದ ಹೊರ ನಡೆದಿದೆ. ಈ ಮೂಲಕ ಪಂಜಾಬ್ ತಂಡದ ಓಟಕ್ಕೆ ಬ್ರೇಕ್ ಹಾಕಿ, ಅದನ್ನು ಕೂಡ ಹೊರ ದಬ್ಬಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ, ಉತ್ತಮ ಆರಂಭ ಪಡೆದರೂ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಹೆಚ್ಚಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ನಿಗದಿತ 20 ಓವರ್ ಗಳಲ್ಲಿ 154 ರನ್ ಪೇರಿಸಿತು. ಈ ಸುಲಭ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಫಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ ವಾಡ್ ಅವರ ಅದ್ಭುತ ಬ್ಯಾಟಿಂಗ್ ನಿಂದಾಗಿ ಸುಲಭವಾಗಿ ಗೆದ್ದು ಬೀಗಿತು.

ಸದ್ಯ ಮುಂಬಯಿ ತಂಡವೊಂದೇ ಇಲ್ಲಿಯವರೆಗೂ ಪ್ಲೇ ಆಫ್ ಹಂತ ತಲುಪಿದ ತಂಡವಾಗಿದೆ. ಪಂಜಾಬ್ ತಂಡ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರೆ ರನ್‍ ರೇಟ್ ಆಧಾರದ ಮೇಲೆ ಪ್ಲೇ ಆಫ್ ಹಂತ ತಲುಪುವ ಅವಕಾಶ ಪಡೆಯುತ್ತಿತ್ತು.

154 ರನ್‍ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಫಫ್ ಡು ಪ್ಲೆಸಿಸ್ ಮತ್ತು ರುತುರಾಜ್ ಗಾಯಕ್ವಡ್ ಮೊದಲ ವಿಕೆಟ್ಗೆಗ ಅರ್ಧಶತಕದ ಜೊತೆಯಾಟವಾಡಿದರು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ಚೆನ್ನೈ ತಂಡ ಒಂದು ವಿಕೆಟ್ ಕಳೆದುಕೊಳ್ಳದೇ ಬರೋಬ್ಬರಿ 57 ರನ್ ಸಿಡಿಸಿತು.

Leave a Reply

Your email address will not be published. Required fields are marked *

You May Also Like

ಧೋನಿ ವಿರುದ್ಧ ಮೂರು ಸಿಕ್ಸರ್ ಸಿಡಿಸುವ ಮೂಲಕ ಅಕ್ಷರ್ ಸೇಡು ತೀರಿಸಿಕೊಂಡರೆ?

ಶಾರ್ಜಾ : ಚೆನ್ನೈ ಸೂಪರ್ ಕಿಂಗ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಆಟಗಾರ ಅಕ್ಷರ್ ಪಟೇಲ್ ಕೊನೆಯ ಓವರ್ ನಲ್ಲಿ ಮೂರು ಸಿಕ್ಸರ್ ಸಿಡಿಸುವ ಮೂಲಕ ಧೋನಿ ವಿರುದ್ಧದ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೂ ಜಯ ತಂದು ಕೊಟ್ಟಿದ್ದಾರೆ.

ಗೆಲ್ಲಲು ಒಂದು ರನ್ ಬೇಕಿದ್ದರೂ ಕೊಹ್ಲಿ ಓಡಿದ್ದು ಎರಡು ರನ್…ಏಕೆ?

ಅಬುಧಾಬಿ : ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್‌ ಸಿಬಿ ನಾಯಕ ವಿರಾಟ್‌ ಕೊಹ್ಲಿ ಅವರು ಗೆಲ್ಲಲು ಒಂದು ರನ್ ಬೇಕಿದ್ದರೂ 2 ರನ್ ಗಳನ್ನು ಓಡಿದ್ದಕ್ಕೆ ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಐಸಿಸಿಯು ಟೆಸ್ಟ್ ನೂತನ ಪಟ್ಟಿ ಪ್ರಕಟ: ಪಾರಮ್ಯ ಮೆರೆದ ಆಸ್ಟ್ರೇಲಿಯಾ

ಐಸಿಸಿಯು ಟೆಸ್ಟ್ ರ್ಯಾಂಕಿಂಗ್ ನೂತನ ಪಟ್ಟಿ ಪ್ರಕಟಿಸಿದ್ದು, ಆಸ್ಟ್ರೇಲಿಯಾ ತನ್ನ ಪಾರಮ್ಯ ಮೆರೆದಿದೆ. ಬ್ಯಾಟಿಂಗ್ ರ್ಯಾಂಡಕಿಂಗ್‌ನಲ್ಲಿ ಇಬ್ಬರು ಹೆಚ್ಚುವರಿ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲಿದ್ದ ಅದೇ 2ನೇ ಸ್ಥಾನದಲ್ಲಿದ್ದರೆ, ಬೌಲಿಂಗ್ ರ್ಯಾಂೊಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ 9ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.

ಕೋಲ್ಕತ್ತಾ ತಂಡದ ನಾಯಕತ್ವಕ್ಕೆ ಗುಡ್ ಬೈ ಹೇಳಿದ ದಿನೇಶ್ ಕಾರ್ತಿಕ್!

ಅಬುಧಾಬಿ : ಕೋಲ್ಕತ್ತಾ ತಂಡದ ನಾಯಕತ್ವ ಸ್ಥಾನದಿಂದ ದಿನೇಶ್ ಕಾರ್ತಿಕ್ ಹಿಂದೆ ಸರಿದಿದ್ದಾರೆ.