ಬೆಳಗಾವಿ : ಡಿಸಿಎಂ ಲಕ್ಷ್ಮಣ ಸವದಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ತಿರುಗೇಟು ನೀಡಿ, ವಾಗ್ದಾಳಿ ನಡೆಸಿದ್ದಾರೆ.

ಸೂರ್ಯ, ಚಂದ್ರರು ಇರುವವರೆಗೂ ಬೆಳಗಾವಿ ಕರ್ನಾಟಕಕ್ಕೆ ಸಂಬಂಧಿಸಿದ್ದು, ಈ ವಿಷಯದ ಕುರಿತು ಯಾರೇ ಹೇಳಿದರೂ ನಾವು ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ.

ಇಲ್ಲಿದ್ದೂ ಕನ್ನಡ ನೆಲದ ವಿರುದ್ಧ ಯಾರೇ ಮಾತನಾಡಿದರೂ ಕರ್ನಾಟಕ ಸರ್ಕಾರ ಅವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳುತ್ತದೆ. ಆನೆ ಹೊರಟರೆ ನಾಯಿ ಬೊಗಳುತ್ತವೆ. ಅದಕ್ಕೆ ನಾವು ಚಿಂತಿಸಬೇಕಿಲ್ಲ ಎಂದು ಮಹಾರಾಷ್ಟ್ರಕ್ಕೆ ತಿರುಗೇಟು ನೀಡಿದ್ದಾರೆ.

ಮಹಾರಾಷ್ಟ್ರ ಏನೇ ಪ್ರಯತ್ನಿಸಿದರೂ ಬೆಳಗಾವಿ ನಮ್ಮದೇ. ಆ ರಾಜ್ಯ ತನ್ನ ತೀಟೆ ತೀರಿಸಿಕೊಳ್ಳುವುದಕ್ಕಾಗಿ ಈ ರೀತಿಯ ಮಾತುಗಳನ್ನು ಆಡುತ್ತದೆ. ಸಂಘಟನೆಗಾಗಿ ಮಹಾರಾಷ್ಟ್ರ ಈ ರೀತಿ ವರ್ತಿಸುತ್ತಿದೆ. ನವೆಂಬರ್ ತಿಂಗಳಲ್ಲಿ ಮಾತ್ರ ಅವರ ಹಾರಾಟ, ಚೀರಾಟ ಇರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ನಮ್ಮ ಜಾಗದಲ್ಲಿ ನಿಂತು ಹೇಳಿದರೆ, ನಾವು ಉತ್ತರ ನೀಡುತ್ತೇವೆ. ಹೇಡಿಯಂತೆ ಅವರ ನೆಲದಲ್ಲಿ ಕುಳಿತು ಮಾತನಾಡಿದರೆ, ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಗಜೇಂದ್ರಗಡದಲ್ಲಿ ವಾರದ ಸಂತೆ ರದ್ದು!

ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಅದರನ್ವಯ ಪಟ್ಟಣದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು ರದ್ದು ಮಾಡಲಾಗಿದೆ.

ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ತಹಶೀಲ್ದಾರ್ ಹಾಗು ಪಿಎಸ್ಐ  ಧನ್ಯತಯ ಸಮರ್ಪಣೆ

ಉತ್ತರಪ್ರಭ ಸಿಂದಗಿ: ಅಖಿಲ ಭಾರತ ಸಂದೇಶ ವೇದಿಕೆ ಸಿಂದಗಿ ತಾಲೂಕಿನ ಘಟಕದ ವತಿಯಿಂದ ಬೇಸಿಗೆ ಕಾಲದಲ್ಲಿ…

ರಾಜ್ಯದಲ್ಲಿ ಕೊವೀಡ್ ಕರ್ಫ್ಯೂ : ಏನಿರುತ್ತೆ…? ಏನಿರಲ್ಲ…?

ನಾಳೆ ಸಂಜೆಯಿಂದ 14 ದಿನಗಳ ಕಾಲ ಕರ್ನಾಟಕ ಸಂಪೂರ್ಣ ಲಾಕ್‌ಡೌನ್‌’ ಮಾಡಲಾಗುವುದರ ಬಗ್ಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.