ಬೆಂಗಳೂರು: ಅದೆಷ್ಟೋ ಜನ ಎಟಿಎಂ ಕಾರ್ಡ್ಗಳನ್ನು ಕಳೆದುಕೊಂಡು ಪರಿತಪಿಸಿದ್ದುಂಟು. ಮಾನಸಿಕ ನೆಮ್ಮದಿ ಕಳೆದುಕೊಂಡು ಇನ್ನಿಲ್ಲದೇ ಚಿಂತಿಸಿದ್ದುಂಟು. ಆದ್ರೆ ಇದೀಗ ಎಟಿಎಂ ಕಾರ್ಡ್ ಕಳೆದೊಯ್ತು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ನಿಮ್ಮ ಚಿಂತೆಗೊಂದು ಪರಿಹಾರ ಇಲ್ಲಿದೆ.

 ಎಟಿಎಂ ಕಾರ್ಡ್ ಕಳೆದು ಹೋದ್ರೆ, ಅಥವಾ ಕಳ್ಳತನವಾದ್ರೆ ತಕ್ಷಣ ಕಾರ್ಡ್ ನ್ನು ನಿರ್ಭಂಧಿಸಲಾಗುತ್ತದೆ. ಇದರಿಂದ ಎಟಿಎಂ ನಿಂದ ಮೋಸಹೋಗುವುದನ್ನು ತಡೆಯಬಹುದಾಗಿದೆ. ಒಂದು ವೇಳೆ ನೀವು ಕಾರ್ಡ್ ಕಳೆದುಕೊಂಡಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಸೂಚನೆ ನೀಡಿದೆ.

ಪಾಲಿಸಬೇಕಾದ ಸೂಚನೆಗಳು

1, ಕಾರ್ಡ್ ಕಳೆದುಕೊಂಡ ತಕ್ಷಣ ಎಸ್.ಬಿ.ಐ ಸಹಾಯವಾಣಿ ಸಂಖ್ಯೆ 1800 11 2211 ಮತ್ತು 1800 425 3800 ಅಥವಾ 080 -26599990 ಸಂಖ್ಯೆಗೆ ಕರೆ ಮಾಡಿ ನಿಮ್ಮ ಎಟಿಎಮ್ ಬ್ಲಾಕ್ ಮಾಡಬಹುದು.

2, ಕರೆ ಅಥವಾ ಎಸ್.ಎಮ್.ಎಸ್ ಇಲ್ಲವೇ ನೆಟ್ ಬ್ಯಾಂಕಿಂಗ್ ಮೂಲಕ ಎಸ್.ಬಿ.ಐ ಯೋನೊ ಆಪ್ ಮುಖಾಂತರ ಅಥವಾ ಎಸ್.ಬಿ.ಐ ವೆಬ್ ಸೈಟ್ ಮೂಲಕ ನಿಮ್ಮ ಕಾರ್ಡ್ ನಿರ್ಭಂಧಿಸಬಹುದು.

3, ಆನ್ ಲೈನ್ ಮೂಲಕ www.onlinesbi.com ಗೆ ಲಾಗಿನ್ ಆಗುವ ಮೂಲಕ ಟಿಎಮ್ ಕಾರ್ಡ್ ಬ್ಲಾಕ್ ಮಾಡಲು ಅವಕಾಶವಿದೆ.

4, ನೀವು ಮೊದಲು ಎಟಿಎಮ್ ಕಾರ್ಡ್ ನಿರ್ಭಂಧವನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಎಟಿಎಮ್ ಕಾರ್ಡ್ ಸಂಖ್ಯೆಯನ್ನು ಹಾಕಿ ಎಟಿಎಮ್ ಕಾರ್ಡ್ ಬ್ಲಾಕ್ ಮಾಡಬಹುದಾಗಿದೆ.

5, ಒಮ್ಮೆ ಬ್ಲಾಕ್ ಆದ ಕಾರ್ಡ್ ಪುನಃ ಬಳಕೆಗೆ ಬರುವುದಿಲ್ಲ. ಹೊಸ ಕಾರ್ಡಿಗೆ ಸರ್ಜಿ ಸಲ್ಲಿಸಬೇಕಾಗುತ್ತದೆ.  ಅರ್ಜಿ ಸಲ್ಲಿಸಲು www.onlinesbi.com ಲಾಗಿನ್ ಆಗಬೇಕು. ಎಟಿಎಮ್ ಹಾಗೂ ಡೆಬಿಟ್ ಕಾರ್ಡ್ ವಿನಂತಿ ಆಯ್ಕೆ ಮೆಲೆ ಕ್ಲಿಕ್ ಮಾಡಿದ ನಂತರ ಎಸ್.ಎಂ.ಎಸ್ ಒಟಿಪಿ ಆಯ್ಕೆ ಮಾಡಿಕೊಳ್ಳಿ. ಮುಂದಿನ ಪುಟ ತೆರೆಯುತ್ತಿದ್ದಂತೆ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಬೇಕು. ಹಾಗೂ ಕಾರ್ಡ್ ಮುದ್ರಿಸಲುಬೇಕಾದ ಹೆಸರನ್ನು ಕೂಡ ನಮೂದಿಸಬೇಕಾಗುತ್ತದೆ. ನೀವು ಅಲ್ಲಿ ತಿಳಿಸಿದ ನಿಯಮಗಳನ್ನು ಒಪ್ಪಿದ ನಂತ್ರ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು. ನಿಮ್ಮ ಹೊಸ ಎಟಿಎಂ ಕಾರ್ಡ್ ನೀವು ಸೂಚಿಸಿದ ವಿಳಾಸಕ್ಕೆ 8 ದಿನಗಳ ಒಳಗಾಗಿ ಬಂದು ಕೈಸೇರಲಿದೆ.   

Leave a Reply

Your email address will not be published. Required fields are marked *

You May Also Like

ತಮ್ಮ ತಪ್ಪುಗಳನ್ನು ಮರೆಮಾಚಲು ಜನರ ಮುಂದೆ ಮೋದಿ ಬಂದಿದ್ದಾರೆ – ಸಿದ್ದರಾಮಯ್ಯ!

ಬೆಂಗಳೂರು : ಇಂದು ಸಂಜೆ ದೇಶ ಉದ್ಧೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

ಶಾಲೆ ಆರಂಭಕ್ಕೆ ಸಿದ್ದರಾಮಯ್ಯ ವಿರೋಧ

ರಾಜ್ಯ ಸರ್ಕಾರ ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದು ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಗೋಹತ್ಯೆ ನಿಷೇಧದಿಂದ ರೈತರಿಗೆ ಲಾಭ ; ಸಚಿವ ಚವ್ಹಾಣ್

ದೀಪಾವಳಿಗೆ ಗೋಮಾತೆ ಪೂಜಿಸುತ್ತೀರಿ, ಸಂಕ್ರಾಂತಿಗೆ ಪೂಜೆ ಮಾಡ್ತೀರಿ ಮತ್ತೆ ಗೋಮಾತೆಯನ್ನು ಕಟ್ ಯಾಕ್ ಮಾಡ್ತೀರಿ, ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಪ್ರಶ್ನಿಸಿದರು.

ಅತಿವೃಷ್ಟಿಯಿಂದ ರಾಜ್ಯದಲ್ಲಾದ ನಷ್ಟ ಎಷ್ಟು ಗೊತ್ತಾ..?

ಮೈಸೂರು : ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿದೆ. ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ ರೂ. 9,952 ಕೋಟಿಯಷ್ಟು ನಷ್ಟವಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.