ಬೆಂಗಳೂರು : ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ ಈ ಪೈಕಿ ಕೇರಳ ಹಾಗೂ ಗೋವಾ ರಾಜ್ಯಗಳು ಮೊದಲ ಸ್ಥಾನ ಗಳಿಸಿವೆ. 

ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನ ಗಳಿಸಿದೆ. ಸಣ್ಣ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದಿದೆ. ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಪಿಎಸಿ) ಈ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೊಡ್ಡ, ಸಣ್ಣ ಹಾಗೂ ಕೇಂದ್ರಾಡಳಿತ ಪ್ರದೇಶ ಎಂದು ವಿಭಾಗಿಸಲಾಗಿದೆ.

ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಅಗ್ರ ಸ್ಥಾನ ಪಡೆದಿವೆ.ಆದರೆ, ಉತ್ತರಪ್ರದೇಶ, ಬಿಹಾರ ಹಾಗೂ ಓಡಿಶಾ ಕೊನೆಯ ಸ್ಥಾನ ಪಡೆದಿವೆ. ಅಲ್ಲದೇ, ಇವು ಹಿಂದುಳಿದ ರಾಜ್ಯಗಳ ಪಟ್ಟಿಗೆ ಸೇರಿವೆ. ರಾಜ್ಯಗಳ ಸುಸ್ಥಿರ ಅಭಿವೃದ್ಧಿಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ನೀಡುವ ಆಡಳಿತದ ಕಾರ್ಯಕ್ಷಮತೆಯನ್ನು ಆಧರಿಸಿ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

ಪಿಎಸಿ ಶ್ರೇಯಾಂಕದಂತೆ ಮೊದಲ ನಾಲ್ಕು ರಾಜ್ಯಗಳಾದ ಕೇರಳ(1.308), ತಮಿಳುನಾಡು(0.912), ಆಂಧ್ರಪ್ರದೇಶ(0.531) ಮತ್ತು ಕರ್ನಾಟಕ(0.468) ಅಂಕ ಪಡೆದು ಮೊದಲ ನಾಲ್ಕು ಸ್ಥಾನ ಗಳಿಸಿವೆ. ಈ ಎಲ್ಲ ರಾಜ್ಯಗಳು ದಕ್ಷಿಣ ಭಾರತದ್ದಾಗಿದ್ದು ಇನ್ನೂ ವಿಶೇಷವಾಗಿದೆ.

ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳು ಕ್ರಮವಾಗಿ 1.461, -1.201 ಮತ್ತು -1.158 ಅಂಕಗಳಿಗೆ ತೃಪ್ತಿಪಟ್ಟುಕೊಂಡಿವೆ. ಸಣ್ಣ ರಾಜ್ಯಗಳ ಪೈಕಿ ಗೋವಾ (1.745), ಮೇಘಾಲಯ (0.797) ಹಾಗೂ ಹಿಮಾಚಲಪ್ರದೇಶ (0.725) ಕ್ರಮವಾಗಿ ಮೂರು ಸ್ಥಾನದಲ್ಲಿವೆ. ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ರಾಜ್ಯಗಳು ಕೊನೆಯ ಸ್ಥಾನದಲ್ಲಿವೆ. 

Leave a Reply

Your email address will not be published. Required fields are marked *

You May Also Like

ವೀರಪ್ಪನ್ ಪುತ್ರಿಯೀಗ ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆ

ಕುಖ್ಯಾತ ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿಯನ್ನು ತಮಿಳುನಾಡು ಬಿಜೆಪಿ ಯುವ ಘಟಕದ ಉಪಾಧ್ಯಕ್ಷೆಯನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರಿದ್ದರು. ಈ ಕುರಿತು ಮಾತನಾಡಿರುವ ವಿದ್ಯಾರಾಣಿ, ಸಾಮಾಜಿಕ ಕೆಲಸ ಮಾಡುವುದು ನನ್ನ ಗುರಿ. ಯಾವುದೇ ಒಂದು ಸಮುದಾಯದ ಜೊತೆಗೆ ಗುರುತಿಸಿಕೊಳ್ಳುವುದಿಲ್ಲ. ಮಾನವೀಯತೆಯೇ ಮುಖ್ಯ’ ಎಂದಿದ್ದಾರೆ.

ಲವ್ ಜಿಹಾದ್ ಪ್ರಕರಣ ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ಮನವಿ

ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ.

ಶಿವಾನುಭದಲ್ಲಿಂದು ಜ. ಮಾತೆಮಹಾದೇವಿ ಸ್ಮರಣೆ

ಲಿಂಗಾಯತ ಪ್ರಗತಿಶೀಲ ಸಂಘ, ಆಶ್ರಯದಲ್ಲಿಂದು ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಜರುಗುವ ಶಿವಾನುಭವದಲ್ಲಿ ವಿಶ್ವದ ಪ್ರಥಮ ಮಹಿಳಾ ಜಗದ್ಗುರು ಡಾ. ಮಾತೆಮಹಾದೇವಿ ಅವರು 2ನೇ ಸ್ಮರಣೋತ್ಸವ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಕ್ಟೋಬರ್ 15ರವರೆಗೆ ಮರಳು ಗಣಿಗಾರಿಕೆ ನಿಷಿದ್ಧ: ಹೈಕೋರ್ಟ್

ಜಿಲ್ಲೆಯ ಮರಳು ಗಣಿಗಾರಿಕೆ ಕುರಿತಂತೆ ಸಲ್ಲಿಸಲಾಗಿದ್ದ ದಾವೆಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 15 ರವರೆಗೆ ಮರಳು ಗಣಿಗಾರಿಕೆ ನಿಷೇಧ ಮಾಡಿದೆ. ಬೆಂಗಳೂರು: ಸುಸ್ಥಿರ ಮರಳು ಗಣಿಗಾರಿಕೆ-2016ರ ಮಾರ್ಗಸೂಚಿಯನ್ನು ಉಲ್ಲೇಖಿಸಿರುವ ಹೈಕೋರ್ಟ್