ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯ ಯಾವುದು ಗೊತ್ತಾ?

ಬೆಂಗಳೂರು : ದೇಶದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದೆ ಈ ಪೈಕಿ ಕೇರಳ ಹಾಗೂ ಗೋವಾ ರಾಜ್ಯಗಳು ಮೊದಲ ಸ್ಥಾನ ಗಳಿಸಿವೆ. 

ದೊಡ್ಡ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನ ಗಳಿಸಿದೆ. ಸಣ್ಣ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದಿದೆ. ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಪಿಎಸಿ) ಈ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೊಡ್ಡ, ಸಣ್ಣ ಹಾಗೂ ಕೇಂದ್ರಾಡಳಿತ ಪ್ರದೇಶ ಎಂದು ವಿಭಾಗಿಸಲಾಗಿದೆ.

ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಅಗ್ರ ಸ್ಥಾನ ಪಡೆದಿವೆ.ಆದರೆ, ಉತ್ತರಪ್ರದೇಶ, ಬಿಹಾರ ಹಾಗೂ ಓಡಿಶಾ ಕೊನೆಯ ಸ್ಥಾನ ಪಡೆದಿವೆ. ಅಲ್ಲದೇ, ಇವು ಹಿಂದುಳಿದ ರಾಜ್ಯಗಳ ಪಟ್ಟಿಗೆ ಸೇರಿವೆ. ರಾಜ್ಯಗಳ ಸುಸ್ಥಿರ ಅಭಿವೃದ್ಧಿಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ನೀಡುವ ಆಡಳಿತದ ಕಾರ್ಯಕ್ಷಮತೆಯನ್ನು ಆಧರಿಸಿ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 

ಪಿಎಸಿ ಶ್ರೇಯಾಂಕದಂತೆ ಮೊದಲ ನಾಲ್ಕು ರಾಜ್ಯಗಳಾದ ಕೇರಳ(1.308), ತಮಿಳುನಾಡು(0.912), ಆಂಧ್ರಪ್ರದೇಶ(0.531) ಮತ್ತು ಕರ್ನಾಟಕ(0.468) ಅಂಕ ಪಡೆದು ಮೊದಲ ನಾಲ್ಕು ಸ್ಥಾನ ಗಳಿಸಿವೆ. ಈ ಎಲ್ಲ ರಾಜ್ಯಗಳು ದಕ್ಷಿಣ ಭಾರತದ್ದಾಗಿದ್ದು ಇನ್ನೂ ವಿಶೇಷವಾಗಿದೆ.

ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳು ಕ್ರಮವಾಗಿ 1.461, -1.201 ಮತ್ತು -1.158 ಅಂಕಗಳಿಗೆ ತೃಪ್ತಿಪಟ್ಟುಕೊಂಡಿವೆ. ಸಣ್ಣ ರಾಜ್ಯಗಳ ಪೈಕಿ ಗೋವಾ (1.745), ಮೇಘಾಲಯ (0.797) ಹಾಗೂ ಹಿಮಾಚಲಪ್ರದೇಶ (0.725) ಕ್ರಮವಾಗಿ ಮೂರು ಸ್ಥಾನದಲ್ಲಿವೆ. ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ರಾಜ್ಯಗಳು ಕೊನೆಯ ಸ್ಥಾನದಲ್ಲಿವೆ. 

Exit mobile version