ಗದಗ : ಜಿಲ್ಲೆಯ ಮರಳು ಗಣಿಗಾರಿಕೆ ಕುರಿತಂತೆ ಸಲ್ಲಿಸಲಾಗಿದ್ದ ದಾವೆಯೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 15 ರವರೆಗೆ ಮರಳು ಗಣಿಗಾರಿಕೆ ನಿಷೇಧ ಮಾಡಿದೆ.
ಬೆಂಗಳೂರು: ಸುಸ್ಥಿರ ಮರಳು ಗಣಿಗಾರಿಕೆ-2016ರ ಮಾರ್ಗಸೂಚಿಯನ್ನು ಉಲ್ಲೇಖಿಸಿರುವ ಹೈಕೋರ್ಟ್ ಜಿಲ್ಲೆಯಲ್ಲಿ ಅಕ್ಟೋಬರ್ 15 ರವರೆಗೆ ನದಿಪಾತ್ರದಿಂದ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಬಾರದು ಎಂದು ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆಗೆ ಜುಲೈ 22ರಂದು ಆದೇಶ ಹೊರಡಿಸಿದೆ.
ಶಿರಹಟ್ಟಿ ತಾಲೂಕಿನ ನಾಗಮಡವು ಗ್ರಾಮದ ಸರ್ವೆ ಸಂಖ್ಯೆ 13, 15, 18, 19, 20, 21ರಲ್ಲಿನ ನಾಲಾಕ್ಷೇತ್ರದಲ್ಲಿ 17-01-2019 ರಿಂದ 5 ವರ್ಷದವರೆಗೆ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದ್ದು, ಮುಂಗಾರು ಸಂದರ್ಭದಲ್ಲಿ ಇದನ್ನು ನಿಷೇಧಿಸಬೇಕು ಎಂದು ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ರೈತಪರ ಹೋರಾಟಗಾರ ವಿಠಲ್ ಗಣಾಚಾರಿ ರಿಟ್ ಅರ್ಜಿ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಸಸುಸ್ಥಿರ ಮರಳು ಗಣಿಗಾರಿಕೆ-2016ರ ಮಾರ್ಗಸೂಚಿಯ ಅನ್ವಯ, ಮುಂಗಾರು ಮಳೆಗಾಲದ ಅವಧಿಯಾದ ಜೂನ್ 5 ರಿಂದ ಅಕ್ಟೋಬರ್ 15ರವರೆಗೆ ನದಿಪಾತ್ರದಲ್ಲಿ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಆದೇಶ ನೀಡಿದೆ.
ರೈತರ ರೊಟ್ಟಿ ಬುತ್ತಿ ಬೋರ್ ಸ್ಥಳದಲ್ಲಿ, ಒಣಗಿರುವ ಹಳ್ಳ ಮತ್ತು ನಾಲೆಗಳಲ್ಲಿ ಮರಳು ತೆಗೆಯಬಹುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.