ದುಬೈ : ಭಾರೀ ಆತ್ಮವಿಶ್ವಾಸದಲ್ಲಿ ಆರ್ ಸಿಬಿ ತಂಡ ಹಸಿರು ಜೆರ್ಸಿ ತೊಟ್ಟು, ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದಾರೆ. 

ಪ್ರಸಕ್ತ ಸಾಲಿನ ಪಂದ್ಯಗಳಲ್ಲಿ ಕೆಂಪು ಜೆರ್ಸಿ ತೊಟ್ಟಿದ್ದ ಆರ್ ಸಿಬಿ ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದ ಕೊಹ್ಲಿ ಪಡೆ ಈ ಬಾರಿಯೂ ಕೆಟ್ಟ ಪ್ರದರ್ಶನ ನೀಡಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಇದುವರೆಗೂ 10 ಐಪಿಎಲ್ ಆವೃತ್ತಿಗಳಲ್ಲಿ ಹಸಿರು ಜೆರ್ಸಿಯೊಂದಿಗೆ ಕಣಕ್ಕೆ ಇಳಿದಿದೆ. ಈ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಬರೋಬ್ಬರಿ  7 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಲ್ಲದೇ, ಒಂದು ಪಂದ್ಯದಲ್ಲಿ ಫಲಿತಾಂಶ ಲಭಿಸಿಲ್ಲ. 

2011ರಲ್ಲಿ ಮೊದಲ ಬಾರಿಗೆ ಗ್ರೀನ್ ಜರ್ಸಿ ತೊಟಿದ್ದ ಆರ್‌ ಸಿಬಿ ತಂಡವು ಕೇರಳ ವಿರುದ್ಧ ಗೆಲುವು ಪಡೆದಿತ್ತು. 2019ರ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಜೆರ್ಸಿ ತೊಟ್ಟಿದ್ದು, ಈ ಪಂದ್ಯದಲ್ಲಿಯೂ ಸೋಲು ಕಂಡಿತ್ತು. 

ಅಲ್ಲದೇ, ಇದಕ್ಕೂ ವಿಶೇಷ ಎಂದರೆ, ಹಸಿರು ಜೆರ್ಸಿ ತೊಟ್ಟು ಆಡಿ ಗೆದ್ದ ಸಂದರ್ಭದಲ್ಲಿ ಆರ್ ಸಿಬಿ ಫೈನಲ್ ಪ್ರವೇಶ ಮಾಡಿತ್ತು. ಈ ಬಾರಿ ಕೂಡ ಪ್ಲೇ ಆಫ್ ಹಂತಕ್ಕೆ ತಲುಪುವ ಸನಿಹದಲ್ಲಿದೆ. 

Leave a Reply

Your email address will not be published. Required fields are marked *

You May Also Like

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್ ಬ್ಯಾಡ್ಮಿಂಟನ್ ಪುರುಷರ ಪಂದ್ಯಾವಳಿ

ಉತ್ತರಪ್ರಭ ಸುದ್ದಿ ರೋಣ: ದ್ರೋಣಾಚಾರ್ಯ ಬ್ಯಾಡ್ಮಿಂಟನ್ ಕ್ಲಬ್ ರೋಣದ ವತಿಯಿಂದ ಪ್ರಥಮ ಬಾರಿಗೆ ರಾಜ್ಯಮಟ್ಟದ ಷಟಲ್…

ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರ

2020ರ ಆರನೇ ಐಪಿಎಲ್ ಪಂದ್ಯದದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರಿಸಿತು. ಅವರ ಶತಕದ ಬಲದಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 97 ರನ್ ಗಳಿಂದ ಗೆದ್ದು ಬೀಗಿತು.

ಯುವರಾಜ್ ಸಿಂಗ್ ದಾಖಲೆ ಮುರಿಯುತ್ತಾರಂತೆ ರಾಹುಲ್!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಸದ್ಯ ಅವರ ದಾಖಲೆಯನ್ನು ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಮುರಿಯುತ್ತೇನೆ ಎಂದು ಹೇಳಿದ್ದಾರೆ.