ಮುಂಬಯಿ: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ. ಸದ್ಯ ಅವರ ದಾಖಲೆಯನ್ನು ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಮುರಿಯುತ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಕೆ.ಎಲ್. ರಾಹುಲ್ ಚಾಟಿಂಗ್ ಮಾಡಿದ್ದಾರೆ. ಅಭಿಮಾನಿಯೊಬ್ಬರು ಯುವರಾಜ್ ಸಿಂಗ್ ಹೆಸರಿನಲ್ಲಿರುವ ವೇಗದ ಅರ್ಧ ಶತಕದ ದಾಖಲೆಯನ್ನು ಮುರಿಯುವ ಆಟಗಾರ ಯಾರು ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ರಾಹುಲ್, ನನ್ನದಾಗಿರಬೇಕು ಎಂದು ಭಾವಿಸುವುದಾಗಿ ಹೇಳಿದ್ದಾರೆ. 2007ರಲ್ಲಿ ಯುವಿ ಈ ದಾಖಲೆ ಮಾಡಿದ್ದರು.

13 ವರ್ಷಗಳಿಂದ ಈ ದಾಖಲೆಯನ್ನು ಯಾರಿಗೂ ಮುರಿಯಲು ಆಗಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಯುವಿ 16 ಎಸೆತಗಲ್ಲಿ 56 ರನ್ ಗಳಿಸಿದ್ದರು. 7 ಸಿಕ್ಸರ್, 3 ಬೌಂಡರಿ ಸೇರಿವೆ. ಅಲ್ಲದೇ, ಇದೇ ಇನ್ನಿಂಗ್ಸ್ ನಲ್ಲಿ ಯುವರಾಜ್ ಸಿಂಗ್ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ್ದರು. ಆ ಬಳಿಕ ಹಲವು ಆಟಗಾರರು ದಾಖಲೆಯ ಸನಿಹಕ್ಕೆ ಬಂದರೂ ದಾಖಲೆಯನ್ನು ಮುರಿಯುವಲ್ಲಿ ವಿಫಲರಾಗಿದ್ದರು.

ಸದ್ಯ ರಾಹುಲ್ ಭಾರತದ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಾರೆ. ಅಲ್ಲದೇ, ವಿಕೆಟ್ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈಗ ಯುವಿ ದಾಖಲೆಯ ಮೇಲೆ ಕಣ್ಣು ಇಟ್ಟಿದ್ದಾರೆ.

Leave a Reply

Your email address will not be published.

You May Also Like

ಹುಚ್ಚ ವೆಂಕಟ್ ಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್!

ಬೆಂಗಳೂರು: ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡ ಕಾರಣ ರಸ್ತೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಓಡಾಡುತ್ತಿದ್ದಾರೆ.…

ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ!

ನವದೆಹಲಿ: ಅಂಫಾನ್ ಚಂಡಮಾರುತಕ್ಕೆ ಕಂಗಾಲಾಗಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಪರಿಸ್ಥಿತಿ…

ಬೆಳಗಾವಿಯಲ್ಲಿ ಕೊಳಚೆ ಕಲ್ಲಿನ ರಾಜಕಾರಣದ ರಹಸ್ಯೆವೇನು?: ಹೆಬ್ಬಾಳ್ಕರ್-ಜಾರಕಿಹೊಳಿ ಚಾಲೇಂಜಿಂಗ್ ಪಾಲಿಟಿಕ್ಸ್..!

ಬೆಳಗಾವಿ: ಕುಂದಾ ನಗರಿಯಲ್ಲೀಗ ಕೊಳಚೆ ಕಲ್ಲಿನ ರಾಜಕಾರಣದ್ದೆ ಸುದ್ದಿ ಸದ್ದು ಮಾಡ್ತಿದೆ. ಮತ್ತೆ ಸಚಿವ ರಮೇಶ್…