ದುಬೈ: 2020ರ ಆರನೇ ಐಪಿಎಲ್ ಪಂದ್ಯದದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಶತಕದ ಅಬ್ಬರಕ್ಕೆ ಆರ್.ಸಿ.ಬಿ. ತತ್ತರಿಸಿತು. ಅವರ ಶತಕದ ಬಲದಿಂದಾಗಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ 97 ರನ್ ಗಳಿಂದ ಗೆದ್ದು ಬೀಗಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ ಕೇವಲ ಮೂರು ವಿಕೆಟ್ ಕಳೆದುಕೊಂಡು ಭರ್ಜರಿ 206ರನ್ ಕಲೆಹಾಕಿತು. ನಾಯಕ ರಾಹುಲ್, ಮಯಾಂಕ್ ಅಗರವಾಲ್ ಓಪನಿಂಗ್ ಜೋಡಿ ಉತ್ತಮ ಆರಂಭ ಒದಗಿಸಿತು.

ರಾಹುಲ್ 132 (69 ಎಸೆತ, 14 ಬೌಂಡರಿ, 7 ಸಿಕ್ಸರ್) ಶತಕ ಬಾರಿಸಿದರು. ಮಯಾಂಕ್ 26, ನಿಕೋಲಸ್ ಪೂರನ್ 17 ರನ್ ಗಳಿಸಿದರು. ಶಿವಂ ದುಬೆ 33ಕ್ಕೆ 2 ವಿಕೆಟ್, ಯಜುವೇಂದ್ರ ಚಾಹಲ್ 25ಕ್ಕೆ1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಿರಾಟ್ ಕೊಹ್ಲಿ ಕೈಚೆಲ್ಲಿದ ಎರಡು ಕ್ಯಾಚ್ ಗಳು ಆರ್.ಸಿ.ಬಿ. ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದವು.

ಕೆ.ಎಲ್.ರಾಹುಲ್ ಶತಕದ ಮೂಲಕ ಮಾಡಿದ ಕೆಲವು ದಾಖಲೆಗಳು

ಈ ಆವೃತ್ತಿಯಲ್ಲಿ ಮೊದಲು ಶತಕ ಸಿಡಿಸಿದ ಆಟಗಾರ

ಐಪಿಎಲ್ ನಲ್ಲಿ 2,000 ರನ್ ಗಳನ್ನು ವೇಗವಾಗಿ ಗಳಿಸಿದ ಆಟಗಾರ

ಸಚಿನ್ ತೆಂಡುಲ್ಕರ್ ಅವರ 8 ವರ್ಷಗಳ ದಾಖಲೆ ಅಳಿಸಿದ ರಾಹುಲ್

ಸಚಿನ್ ತೆಂಡುಲ್ಕರ್ 63 ಇನ್ನಿಂಗ್ಸ್ ಗಳಲ್ಲಿ 2,000 ರನ್ ಗಳಿಸಿದ್ದರೆ, ರಾಹುಲ್ 60 ಇನ್ನಿಂಗ್ಸ್ ಗಳಲ್ಲೇ 2,000 ರನ್ ಗಳಿಸುವ ಮೂಲಕ ದಾಖಲೆ ಬರೆದರು.

ಪಂಜಾಬ್ ನೀಡಿದ ಸವಾಲಿನ ಮೊತ್ತವನ್ನು ಹಿಮ್ಮೆಟ್ಟಿಸುವಲ್ಲಿ ಸೋತ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 109 ರನ್ ಗಳಿಸುವಲ್ಲಿ ಆಲ್ ಔಟ್ ಆಯಿತು. ತಂಡ 17 ಓವರ್ ಗಳಿಗೆ ಆಟ ಮುಗಿಸಿತು.

ವಾಷಿಂಗ್ಟನ್ ಸುಂದರ್ 30, ಎಬಿಡಿವಿಲಿಯರ್ಸ್ 28, ಆರನ್ ಫಿಂಚ್ 20 ರನ್ ಗಳಿಸಿದರು. ಮುರುಗನ್ ಅಶ್ವಿನ್ 21ಕ್ಕೆ 3, ರವಿ ಬಿಷ್ನೋಯ್ 32ಕ್ಕೆ 3 ಮತ್ತು ಷೆಲ್ಡನ್ ಕಾಟ್ರೆಲ್ 17ಕ್ಕೆ 2 ವಿಕೆಟ್ ಪಡೆದರು.

132 ರನ್ ಗಳಿಸುವ ಮೂಲಕ ಭಾರತೀಯ ಐಪಿಎಲ್ ಗರಿಷ್ಠ ಸ್ಕೋರ್ ದಾಖಲಿಸಿದ ದಾಖಲೆಯನ್ನು ಕೆ.ಎಲ್.ರಾಹುಲ್ ನಿರ್ಮಿಸಿದರು. ಪಂದ್ಯಪುರುಷ ಪ್ರಶಸ್ತಿಗೂ ಭಾಜನರಾದರು.

Leave a Reply

Your email address will not be published. Required fields are marked *

You May Also Like

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್  ನಿಧನ

ಬ್ರಿಸ್ಬೇನ್: ಆಸ್ಟ್ರೇಲಿಯಾದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(52) ಶುಕ್ರವಾರದಂದು ನಿಧನರಾಗಿದ್ದಾರೆ.ಅವರು  ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು…

ಅಜಿತ್ ಅಗರ್ಕರ್ ಪಾಂಟಿಂಗ್ ಗೆ ಹಾಕಿದ ಸವಾಲು ಏನು?

ಮುಂಬಯಿ: ಕ್ರಿಕೆಟ್ ಕಾಶಿ ಎಂದೇ ಖ್ಯಾತಿ ಪಡೆದಿರುವ ಲಾರ್ಡ್ಸ್ ಮೈದಾನದಲ್ಲಿ ಮಾಜಿ ಆಲ್‌ರೌಂಡರ್‌ ಅಜಿತ್‌ ಅಗರ್ಕರ್‌…

ಮತ್ತೊಮ್ಮೆ ಸೋಲಿನ ಸುಳಿಗೆ ಸಿಲುಕಿದ ಪ್ರೀತಿ ತಂಡ!

ಅಬುಧಾಬಿ : ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಗೆ ಮತ್ತೊಮ್ಮೆ ಅದೃಷ್ಟ ಕೈ ಕೊಟ್ಟಿದೆ.