ದುಬೈ : ಭಾರೀ ಆತ್ಮವಿಶ್ವಾಸದಲ್ಲಿ ಆರ್ ಸಿಬಿ ತಂಡ ಹಸಿರು ಜೆರ್ಸಿ ತೊಟ್ಟು, ಚೆನ್ನೈ ವಿರುದ್ಧ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದಾರೆ.
ಪ್ರಸಕ್ತ ಸಾಲಿನ ಪಂದ್ಯಗಳಲ್ಲಿ ಕೆಂಪು ಜೆರ್ಸಿ ತೊಟ್ಟಿದ್ದ ಆರ್ ಸಿಬಿ ಈ ಪಂದ್ಯದಲ್ಲಿ ಹಸಿರು ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದ ಕೊಹ್ಲಿ ಪಡೆ ಈ ಬಾರಿಯೂ ಕೆಟ್ಟ ಪ್ರದರ್ಶನ ನೀಡಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ಇದುವರೆಗೂ 10 ಐಪಿಎಲ್ ಆವೃತ್ತಿಗಳಲ್ಲಿ ಹಸಿರು ಜೆರ್ಸಿಯೊಂದಿಗೆ ಕಣಕ್ಕೆ ಇಳಿದಿದೆ. ಈ ಪೈಕಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ, ಬರೋಬ್ಬರಿ 7 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಲ್ಲದೇ, ಒಂದು ಪಂದ್ಯದಲ್ಲಿ ಫಲಿತಾಂಶ ಲಭಿಸಿಲ್ಲ.
2011ರಲ್ಲಿ ಮೊದಲ ಬಾರಿಗೆ ಗ್ರೀನ್ ಜರ್ಸಿ ತೊಟಿದ್ದ ಆರ್ ಸಿಬಿ ತಂಡವು ಕೇರಳ ವಿರುದ್ಧ ಗೆಲುವು ಪಡೆದಿತ್ತು. 2019ರ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಸಿರು ಜೆರ್ಸಿ ತೊಟ್ಟಿದ್ದು, ಈ ಪಂದ್ಯದಲ್ಲಿಯೂ ಸೋಲು ಕಂಡಿತ್ತು.
ಅಲ್ಲದೇ, ಇದಕ್ಕೂ ವಿಶೇಷ ಎಂದರೆ, ಹಸಿರು ಜೆರ್ಸಿ ತೊಟ್ಟು ಆಡಿ ಗೆದ್ದ ಸಂದರ್ಭದಲ್ಲಿ ಆರ್ ಸಿಬಿ ಫೈನಲ್ ಪ್ರವೇಶ ಮಾಡಿತ್ತು. ಈ ಬಾರಿ ಕೂಡ ಪ್ಲೇ ಆಫ್ ಹಂತಕ್ಕೆ ತಲುಪುವ ಸನಿಹದಲ್ಲಿದೆ.
